More

    ಮಾತುಕತೆ ಮುರಿದ್​ ಬಿದ್ರೆ ಮಿಲಿಟರಿ ಇದ್ದೇ ಇದ್ಯಲ್ಲ ಅಂದ್ರು ಸಿಡಿಎಸ್ ಜನರಲ್ ರಾವತ್

    ನವದೆಹಲಿ: ಲಡಾಖ್​ ನಲ್ಲಿ ಅತಿಕ್ರಮಣಕ್ಕೆ ಸಂಬಂಧಿಸಿ ಚೀನಾದ ಜತೆಗಿನ ಮಾತುಕತೆ ಮುರಿದ್ ಬಿದ್ರೆ ಸೇನಾ ಕಾರ್ಯಾಚರಣೆಯ ಅವಕಾಶವಂತೂ ಇದ್ದೇ ಇದೆ ಎಂದು ಚೀಫ್​ ಆಫ್ ಡಿಫೆನ್ಸ್​ ಸ್ಟಾಫ್ (ಸಿಡಿಎಸ್​) ಜನರಲ್ ಬಿಪಿನ್ ರಾವತ್​ ಸೋಮವಾರ ಎಚ್ಚರಿಸಿದ್ದಾರೆ.

    ಶಾಂತಿಯುತವಾಗಿ ಬಿಕ್ಕಟ್ಟನ್ನು ಬಗೆಹರಿಸುವುದಕ್ಕಾಗಿ ಎರಡೂ ದೇಶಗಳ ಉನ್ನತಾಧಿಕಾರಿಗಳ ನಡುವೆ ನಿರಂತರ ಮಾತುಕತೆಗಳು ನಡೆಯುತ್ತಿವೆ. ಒಂದೊಮ್ಮೆ ಅವುಗಳು ವಿಫಲವಾದರೆ ಸೇನಾ ಕಾರ್ಯಾಚರಣೆಯ ಅವಕಾಶ, ಆಯ್ಕೆಗಳಿವೆ. ಮಾತುಕತೆಗಳು ಸೇನಾ ಮಟ್ಟದಲ್ಲಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ನಡೆಯುತ್ತಿವೆ. ಅದರ ಫಲಿತಾಂಶವನ್ನು ಎದುರುನೋಡುತ್ತಿದ್ದೇವೆ ಎಂದು ಜನರಲ್ ರಾವತ್ ಹೇಳಿದರು.

    ಇದನ್ನೂ ಓದಿ: ಗುಂಜನ್ ಸಕ್ಸೆನಾ ಚಿತ್ರದಲ್ಲಿ ಸುಳ್ಳುಗಳೇ ರಾರಾಜಿಸಿವೆ; ನಿವೃತ್ತ ವಿಂಗ್​ ಕಮಾಂಡರ್ ಖನ್ನಾ

    ಭಾರತ-ಚೀನಾ ನಡುವೆ ಏಪ್ರಿಲ್​-ಮೇ ತಿಂಗಳಿಂದ ಗಡಿ ಸಂಘರ್ಷ ಏರ್ಪಟ್ಟಿದ್ದು, ಉಭಯ ದೇಶಗಳ ನಡುವೆ ಬಿಕ್ಕಟ್ಟು ನಿರ್ಮಾಣವಾಗಿದೆ. ಚೀನಾ ಏಪ್ರಿಲ್​ನಲ್ಲಿ ಪೂರ್ವ ಲಡಾಕ್ ಭಾಗದಲ್ಲಿ ಗಡಿ ಅತಿಕ್ರಮಣ ಮಾಡಿದ್ದು, ಭಾರತೀಯ ಸೇನೆಯಿಂದ ತೀವ್ರ ಪ್ರತಿರೋಧವನ್ನು ಎದುರಿಸಿತ್ತು. ಈ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದರೆ, ಚೀನಾ 40ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿರುವುದಾಗಿ ವಿದೇಶಿ ಮಾಧ್ಯಮಗಳು ವರದಿಮಾಡಿದ್ದವು. (ಏಜೆನ್ಸೀಸ್​)

    ಲೆಕ್ಕ ಕೊಡ್ದೇ ಇರೋ ದುಡ್ಡು ನಿಮ್ಮ ಅಕೌಂಟ್​ನಲ್ಲಿದ್ಯಾ? ಹಾಗಾದ್ರೆ ಅದ್ರಲ್ಲಿ ನಿಮ್ ಪಾಲು 17% ಮಾತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts