More

    ಈವರೆಗೆ 200 ಕೋಟಿಗೂ ಅಧಿಕ​ ಡೋಸ್​ ಕೋವಿಡ್​ ಲಸಿಕೆ ನೀಡಿಕೆ: ಮತ್ತೆ ಮೈಲಿಗಲ್ಲು ಸಾಧಿಸಿದ ಭಾರತ

    ನವದೆಹಲಿ: ಮಹಾಮಾರಿ ಕೋವಿಡ್​ ವಿರುದ್ಧ ಭಾರತದ ಹೋರಾಟಕ್ಕೆ ವಿಶ್ವದಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಈ ನಡುವೆ ಕೋವಿಡ್​ ಲಸಿಕೆ ಶೇ.90ರಷ್ಟು ಜನರು ಪಡೆದುಕೊಂಡಿದ್ದು, ಈವರೆಗೆ 200ಕೋಟಿ ಡೋಸ್​ ಲಸಿಕೆ ಹಾಕುವ ಮೂಲಕ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

    ಭಾನುವಾರ ಈ ಬಗ್ಗೆ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್​ ಮಾಡವಿಯಾ ಅವರು ಇಂದಿಗೆ 200 ಕೋಟಿಗೂ ಅಧಿಕ ಡೋಸ್​ ಕೊವಿಡ್​ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕರೊನಾ ಸಾಂಕ್ರಾಮಿಕ ರೋಗ ಹರಡಿದ 18 ತಿಂಗಳ ಬಳಿಕ 2021 ಜನವರಿ 16 ರಿಂದ ಭಾರತದಲ್ಲಿ ಲಸಿಕೆ ನೀಡುವುದು ಪ್ರಾರಂಭವಾಗುತ್ತದೆ. ಅಲ್ಲಿಂದ ಇಲ್ಲಿಯವರೆಗೂ ಎರಡು ಬಿಲಿಯನ್​ ಲಸಿಕೆ ಡೋಸ್​ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಟ್ವಿಟ್ಟರ್​ನಲ್ಲಿ ವಿಡಿಯೋ ಶೇರ್​ ಮಾಡುವ ಮೂಲಕ #200ಕೋಟಿವ್ಯಾಕ್ಸಿನೇಷನ್​ ಎಂಬ ಶೀರ್ಷಿಕೆಯಡಿ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    3ನೇ ಮಗುವಿಗೆ ತಾಯಿಯಾಗಲಿದ್ದಾರಾ ಕರೀನಾ!: ಈ ಫೋಟೋ ಹೇಳೋದೇನು?

    ಸಿಂಗಾಪುರ ಓಪನ್ ಬ್ಯಾಡ್ಮಿಂಟನ್: ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಪಿ ವಿ ಸಿಂಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts