More

    VIDEO| ಹುತಾತ್ಮ ಅಧಿಕಾರಿ ಕರ್ನಲ್​ ಸಂತೋಷ್​ ಬಾಬುಗೆ ಅಂತಿಮ ನಮನ ಸಲ್ಲಿಸಲು ಭಾರಿ ಜನಸ್ತೋಮ

    ನವದೆಹಲಿ: ಪೂರ್ವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಭಾರತ ಹಾಗೂ ಚೀನಾ ನಡುವೆ ಉಂಟಾದ ಉದ್ವಿಘ್ನತೆಯಲ್ಲಿ ಹುತಾತ್ಮರಾದ ಯೋಧರಿಗೆ ಅಂತಿಮ ಗೌರವ ಸಲ್ಲಿಸಲಾಗುತ್ತಿದೆ.

    ಹುತಾತ್ಮರಾದ 16ನೇ ಬಿಹಾರ್​ ರೆಜಿಮೆಂಟ್​ನ ಕಮ್ಯಾಂಡಿಂಗ್​ ಅಧಿಕಾರಿ ಕರ್ನಲ್​ ಸಂತೋಷ್​ ಬಾಬು ಅವರಿಗೆ  ತೆಲಂಗಾಣದ ಸೂರ್ಯಪೇಟೆಯಲ್ಲಿಂದು ಅಂತಿಮ ನಮನ ಸಲ್ಲಿಸಲಾಯಿತು. ಸಂತೋಷ್​ ಬಾಬು ಅವರ ನಿವಾಸಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆದು, ಅವರ ತ್ಯಾಗವನ್ನು ನೆನೆದು ಕಣ್ಣೀರಾಕಿದರು.

    ಪಾಟ್ನಾದ ಹವಾಲ್ದಾರ್​ ಸುನೀಲ್​ ಕುಮಾರ್ ನಿವಾಸದಲ್ಲೂ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅಂತಿಮ ದರ್ಶನ ಪಡೆದು ಹುತಾತ್ಮ ಯೋಧನ ತ್ಯಾಗ ಬಲಿದಾನಕ್ಕೆ ಸಲಾಂ ಹೊಡೆದರು. ಇದನ್ನೂ ಓದಿ: ಬಿಎಸ್​ಎನ್​ಎಲ್​ 4ಜಿ ಅಪ್​ಗ್ರೇಡ್​ಗೆ ಚೀನಾ ಸಾಧನಗಳನ್ನು ಬಳಸದಿರಲು ಕೇಂದ್ರದ ನಿರ್ಧಾರ

    ಚೀನಾ-ಭಾರತ ನಡುವಿನ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಇದಕ್ಕೆ ಪ್ರತಿಯಾಗಿ ಚೀನಾದಲ್ಲೂ 35 ಯೋಧರನ್ನು ಹೊಡೆದುರುಳಿಸಲಾಗಿದೆ. ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಚರ್ಚೆ ಸಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts