More

    ಪಿಒಕೆಯೊಳಗೆ ಭಾರತ ಈಗ ನಡೆಸ್ತಿರೋದು ಸರ್ಜಿಕಲ್ ಸ್ಟ್ರೈಕ್ ಅಲ್ಲ, ಪಿನ್​ಪಾಯಿಂಟ್ ಸ್ಟ್ರೈಕ್​

    ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಂಕಿತ ಟೆರರ್​ ಲಾಂಚ್​ ಪ್ಯಾಡ್​ಗಳ ಮೇಲೆ ಭಾರತ ಈಗ ನಡೆಸ್ತಿರೋದು ಸರ್ಜಿಕಲ್ ಸ್ಟ್ರೈಕ್ ಅಲ್ಲ. ಬದಲಾಗಿ ಪಿನ್​ಪಾಯಿಂಟ್ ಸ್ರೈಕ್. ಉಗ್ರರನ್ನು ಭಾರತದೊಳಕ್ಕೆ ಕಳುಹಿಸುವುದಕ್ಕೆ ಪಾಕಿಸ್ತಾನ ಸೇನೆ ಗರಿಷ್ಠ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದೆ. ಇದನ್ನು ತಡೆಯಲು ಸೇನೆ ಈ ಕ್ರಮ ತೆಗೆದುಕೊಂಡಿದೆ ಎಂದು ಸೇನಾಮೂಲಗಳು ಬಹಿರಂಗಪಡಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

    ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಂಕಿತ ಉಗ್ರ ಲಾಂಚ್ ಪ್ಯಾಡ್​ಗಳ ಮೇಲೆ ಭಾರತೀಯ ಸೇನೆ ಪಿನ್​ ಪಾಯಿಂಟ್​ ಸ್ಟ್ರೈಕ್​ ಮಾಡುತ್ತಿರುವ ಕಾರಣ ಪಾಕಿಸ್ತಾನ ಸೇನೆಗೆ ತಲ್ಲಣಗೊಂಡಿದೆ. ಅಲ್ಲದೆ ಹತರಾದ ಉಗ್ರರನ್ನು ಸ್ಥಳೀಯ ನಾಗರಿಕರು ಎಂದು ಬಿಂಬಿಸುತ್ತ ಜಾಗತಿಕ ಮಟ್ಟದಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಅಷ್ಟೇ ಅಲ್ಲ ವಿದೇಶ ದೇಣಿಗೆ ಪಡೆಯುವುದಕ್ಕೂ ಈ ಸನ್ನಿವೇಶವನ್ನು ಬಳಸುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ವೈಮಾನಿಕ ದಾಳಿಗಳು ಕೇವಲ ಮಿಲಿಟರಿ ಸ್ಟ್ರೈಕ್ ಅಲ್ಲ, ವಿರೋಧಿಗಳಿಗೆ ನೀಡಿದ ಸಂದೇಶ

    ಉಗ್ರರಿಗೆ ಬೆಂಬಲ ನೀಡುತ್ತಿಲ್ಲ ಎಂದು ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಬಿಂಬಿಸಿಕೊಳ್ಳುತ್ತ, ಪಿಒಕೆ ಮೂಲಕ ಭಾರತಕ್ಕೆ ಉಗ್ರರನ್ನು ಕಳುಹಿಸಿ ಜಮ್ಮು-ಕಾಶ್ಮೀರದಲ್ಲಿ ಅಸ್ಥಿರತೆ ಉಂಟುಮಾಡಲು ನಿರಂತರ ಪ್ರಯತ್ನ ಮುಂದುವರಿಸಿದೆ. ಕಳೆದ ಕೆಲವು ವಾರದ ಅವಧಿಯಲ್ಲಿ ಗಡಿಭಾಗದ ಗ್ರಾಮಗಳ ಮೇಲೆ ಪಾಕ್ ಸೇನಾ ಪಡೆ ಗುಂಡಿನ ಸುರಿಮಳೆಗೈಯುತ್ತಿವೆ. ಪಿನ್​ಪಾಯಿಂಟ್ ಸ್ಟ್ರೈಕ್ ಪರಿಣಾಮ ಚೆನ್ನಾಗಿದ್ದು, ಅದಕ್ಕೆ ಪಾಕ್ ಸೇನೆ ಈ ರೀತಿ ಪ್ರತಿಕ್ರಿಯಿಸುತ್ತಿದೆ ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ. (ಏಜೆನ್ಸೀಸ್)

    ರಾಜ್ಯಸಭೆ ಉಪಚುನಾವಣೆ: ಪಾಸ್ವಾನ್​ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.14ಕ್ಕೆ ಮತದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts