More

    ರಾಜ್ಯಸಭೆ ಉಪಚುನಾವಣೆ: ಪಾಸ್ವಾನ್​ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.14ಕ್ಕೆ ಮತದಾನ

    ನವದೆಹಲಿ: ಲೋಕ ಜನಶಕ್ತಿ ಪಾರ್ಟಿ (ಎಲ್​​ಜೆಪಿ) ಸಂಸ್ಥಾಪಕ ರಾಮ ವಿಲಾಸ್ ಪಾಸ್ವಾನ್ ಅವರಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆ ಡಿ.14 ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.

    ಉಪಚುನಾವಣೆ ಅಧಿಸೂಚನೆ ನವೆಂಬರ್ 26ರಂದು ಪ್ರಕಟವಾಗಲಿದೆ. ಮತದಾನ ಡಿಸೆಂಬರ್ 14ರಂದು ನಡೆಯಲಿದ್ದು, ಅದೇ ದಿನ ಸಂಜೆ ಫಲಿತಾಂಶವೂ ಪ್ರಕಟವಾಗಲಿದೆ ಎಂದು ಆಯೋಗ ಹೇಳಿದೆ. ಪಾಸ್ವಾನ್ ಅವರ ರಾಜ್ಯಸಭಾ ಅವಧಿ 2024ರ ಏಪ್ರಿಲ್ ತನಕ ಇತ್ತು. ಆದರೆ ಅವರು ಅಕ್ಟೋಬರ್ 8ರಂದು ನಿಧನರಾದ ಕಾರಣ ಉಪಚುನಾವಣೆ ಅನಿವಾರ್ಯವೆನಿಸಿದೆ.

    ಇದನ್ನೂ ಓದಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮ- ಡಿ.17ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

    ಪಾಸ್ವಾನ್ ಅವರು ಬಿಹಾರ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಪಾಸ್ವಾನ್ ಅವರು ಕೂಡ ಕಳೆದ ವರ್ಷ ನಡೆದ ರಾಜ್ಯಸಭೆ ಉಪಚುನಾವಣೆಯಲ್ಲಿ ಗೆದ್ದು ರಾಜ್ಯಸಭೆ ಪ್ರವೇಶಿಸಿದ್ದರು. ಅದಕ್ಕೂ ಮೊದಲು ರವಿಶಂಕರ ಪ್ರಸಾದ್ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದ ಕಾರಣ, ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಾಸ್ವಾನ್ ಅವರು ರಾಜ್ಯಸಭೆಯಲ್ಲಿದ್ದ ಏಕೈಕ ಎಲ್​ಜೆಪಿ ಸದಸ್ಯರಾಗಿದ್ದರು. (ಏಜೆನ್ಸೀಸ್)

    ಸೆನ್ಸೆಕ್ಸ್ 580 ಅಂಶ ಕುಸಿತ, ನಿಫ್ಟಿ 12,800ಕ್ಕಿಂತ ಕೆಳಕ್ಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts