More

    ವರ್ಷದ ಮಹಿಳಾ ಗೋಲುಕೀಪರ್ ಪ್ರಶಸ್ತಿಗೆ ಸವಿತಾ ನಾಮನಿರ್ದೇಶನ: ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆ

    ಬೆಂಗಳೂರು: ಭಾರತ ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪೂನಿಯಾ ಸತತ ಮೂರನೇ ಬಾರಿಗೆ ಎ್ಐಎಚ್ ವರ್ಷದ ಮಹಿಳಾ ಗೋಲುಕೀಪರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಹಿಂದಿನ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಸವಿತಾ ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ.
    ಚೀನಾದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ತಂಡವನ್ನು ಕಂಚಿನ ಪದಕದತ್ತ ಮುನ್ನಡೆಸಿದ್ದ ಸವಿತಾ ಪೂನಿಯಾ 2021 ಹಾಗೂ 2022ರಲ್ಲಿ ಪ್ರತಿಷ್ಠಿತ ಪ್ರಶಸ್ತಿ ಒಲಿಸಿಕೊಂಡಿದ್ದರು. ಸ್ಪೇನ್‌ನಲ್ಲಿ ನಡೆದ ಮಹಿಳಾ ನೇಷನ್ಸ್ ಕಪ್ ಉದ್ಘಾಟನಾ ಆವೃತ್ತಿಯಲ್ಲಿ ಸವಿತಾ ನೇತೃತ್ವದ ಭಾರತ ತಂಡ ಚಾಂಪಿಯನ್ ಎನಿಸಿತ್ತು. ರಾಂಚಿಯಲ್ಲಿ ನಡೆದ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಜಯಸಿ ವಿಶ್ವ ರ‌್ಯಾಂಕಿಂಗ್‌ನಲ್ಲಿ ಭಾರತ 6ನೇಸ್ಥಾನಕ್ಕೇರಿತ್ತು.
    ಸತತ ಎರಡು ವರ್ಷಗಳ ಕಾಲ ಪ್ರಶಸ್ತಿ ಜಯಿಸಿದ ಬಳಿಕ ಮತ್ತೊಮ್ಮೆ ನಾಮನಿರ್ದೇಶನಗೊಳ್ಳುತ್ತೇನೆ ಎಂದು ಯೋಚಿಸಿರಲಿಲ್ಲ. ಯಾವುದೇ ಸಾಧನೆಯು ವೈಯಕ್ತಿಕ ಪ್ರಯತ್ನ ಆಧರಿಸಿಲ್ಲ.ಇದು ತಂಡದ ಫಲಿತಾಂಶವಾಗಿದೆ. ಕಠಿಣ ಪರಿಶ್ರಮದೊಂದಿಗೆ ಗುರುತಿಸಿಕೊಳ್ಳುವುದು ಅದ್ಭುತ ಅನುಭವ. ನನ್ನ ಕುಟುಂಬ ಮತ್ತು ನನ್ನ ಸಹ ಆಟಗಾರರ ಬೆಂಬಲ ಇದಕ್ಕೆ ಕಾರಣ ಎಂದು ಸವಿತಾ ಸಂತಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts