More

    ಭಾರತಕ್ಕೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ. 1 ಪಟ್ಟಕ್ಕೇರುವ ಅವಕಾಶ

    ಬೆಂಗಳೂರು: ಆಸೀಸ್ ನೆಲದ ಐತಿಹಾಸಿಕ ಸರಣಿ ಗೆಲುವಿನ ಬಳಿಕ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಿ ನ್ಯೂಜಿಲೆಂಡ್ ಜತೆಗೆ 118 ಅಂಕಗಳ ಸಮಬಲ ಸಾಧಿಸಿರುವ ಭಾರತ ತಂಡ ದಶಾಂಶ ಲೆಕ್ಕಾಚಾರದಲ್ಲಿ 2ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲೂ ಗೆದ್ದರೆ ಭಾರತ ನಂ. 1 ಪಟ್ಟಕ್ಕೇರಲಿದೆ.

    ಕನಿಷ್ಠ 1-0 ಅಥವಾ 2-1ರಿಂದ ಗೆದ್ದರೂ ಭಾರತಕ್ಕೆ ಒಂದಂಕ ಸಿಗಲಿದೆ. 2-0 ಅಥವಾ 3-1ರಿಂದ ಗೆದ್ದರೆ 2 ಅಂಕ, 3-0ಯಿಂದ ಗೆದ್ದರೆ 4 ಮತ್ತು 4-0ಯಿಂದ ಗೆದ್ದರೆ 5 ಅಂಕ ಗಳಿಸಲಿದೆ. ಸರಣಿಯಲ್ಲಿ ಡ್ರಾ ಕಂಡರೆ ಭಾರತಕ್ಕೆ 2 ಅಂಕ ನಷ್ಟವಾದರೂ, 2ನೇ ಸ್ಥಾನದಲ್ಲೇ ಉಳಿದುಕೊಳ್ಳಲಿದೆ. ಭಾರತ 0-1ರಿಂದ ಸರಣಿ ಸೋತರೂ 2ನೇ ಸ್ಥಾನದಲ್ಲೇ ಇರಲಿದೆ. ಆದರೆ, 0-2 ಅಥವಾ 1-3ರಿಂದ ಸೋತರೆ 3ನೇ ಸ್ಥಾನಕ್ಕಿಳಿಯಲಿದೆ. 0-3 ಅಥವಾ ಅದಕ್ಕಿಂತ ಹೆಚ್ಚಿನ ಅಂತರದಲ್ಲಿ ಸೋತರೆ 4ನೇ ಸ್ಥಾನಕ್ಕೆ ಕುಸಿಯಲಿದೆ.

    ಇದನ್ನೂ ಓದಿ: ಇಂಗ್ಲೆಂಡ್‌ನ ಈ ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್ ಸಿಡಿಸಿದರೆ 5 ರನ್ ದಂಡ!

    ಮತ್ತೊಂದೆಡೆ, ಸದ್ಯ 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್, 3-0 ಅಥವಾ ಅದಕ್ಕಿಂತ ಹೆಚ್ಚಿನ ಅಂತರದಿಂದ ಗೆದ್ದರಷ್ಟೇ ಬಡ್ತಿ ಪಡೆಯುವ ಅವಕಾಶ ಹೊಂದಿದೆ. 3-0ಯಿಂದ ಗೆದ್ದರೆ 3 ಮತ್ತು 4-0ಯಿಂದ ಗೆದ್ದರೆ 2ನೇ ಸ್ಥಾನಕ್ಕೇರಲಿದೆ. ಇದಲ್ಲದೆ 0-4ರಿಂದ ಸರಣಿ ಸೋತರೂ, 4ನೇ ಸ್ಥಾನದಲ್ಲೇ ಉಳಿಯಲಿದೆ.

    ಸಚಿನ್, ಕೊಹ್ಲಿ ಬಳಿಕ ಈ ಹೊಸ ಬ್ಯಾಟ್ಸ್‌ಮನ್ ಬ್ಯಾಟ್ ಪ್ರಾಯೋಜಕತ್ವಕ್ಕೆ ಎಂಆರ್‌ಎಫ್​ ಸಿದ್ಧತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts