More

    ಇಪ್ಪತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆ ಪ್ರಪಂಚದಲ್ಲೇ ನಂ.1

    ಚಿತ್ರದುರ್ಗ: ಮುಂದಿನ 20 ವರ್ಷಗಳಲ್ಲಿ ಭಾರತ,ಪ್ರಪಂಚದ ಎಲ್ಲ ದೇಶಗಳ ಆರ್ಥಿಕತೆಗಿಂತ ಮುಂದಿರುತ್ತದೆ ಎಂದು ಬೆಂಗಳೂರು ಡಿಜಿ ಟಲ್ ಇಂಡಿಯಾ ಚೇರ್ಮನ್ ಡಾ.ಹರಿಕೃಷ್ಣಮಾರನ್ ಹೇಳಿದರು. ನಗರದ ಎಸ್‌ಜೆಎಂ ಫಾರ್ಮಸಿ ಕಾಲೇಜಿನಲ್ಲಿ ಶನಿವಾರ ಏರ್ಪ ಡಿಸಿದ್ದ ಫಾರ್ಮಾ ದೀಕ್ಷಾ-2024 ಪದವಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು,ಭವಿಷ್ಯದ ವರ್ಷಗಳಲ್ಲಿ ದೇಶ ಆರ್ಥಿಕವಾಗಿ ಅತ್ಯಂತ ಸದೃಢವಾಗಲಿದೆ.
    ಹೊಸ ಕಂಪನಿಗಳನ್ನು ಸ್ಥಾಪಿಸುವ ಸುವರ್ಣ ಅವಕಾಶ ಭಾರತದ ಪಾಲಿಗೆ ಮಾತ್ರ ದೊರೆಯಲಿದೆ. ನಮ್ಮಲ್ಲಿರುವ ನೈಪುಣ್ಯತೆ ಮ ತ್ತು ಕೆಲಸದ ಬದ್ಧತೆ ರಕ್ತಗತವಾಗಿ ಬಂದಿದ್ದು,2047ರೊಳಗೆ ಪ್ರಪಂಚದ ಮೊದಲ ಆರ್ಥಿಕವಾಗಿ ಅತ್ಯುತ್ತಮ ದೇಶವೆಂಬ ಹೆಗ್ಗಳಿಕೆ ಭಾ ರತಕ್ಕೆ ದೊರೆಯಲಿದೆ. ಇದರ ಪಾಲುದಾರರು ನಾವೇ ಆಗಿರುತ್ತೇವೆ. ಕಳೆದ ಐದಾರು ವರ್ಷಗಳಲ್ಲಿ ಸ್ಥಾಪನೆ ಆದ ಕಂಪನಿಗಳಿಂದು ಬೃ ಹತ್ ಆಗಿ ಬೆಳೆದಿವೆ. ಇದಕ್ಕೆ ಕಾರಣ ಸಮಗ್ರ ಡಿಜಿಟಲ್ ತಂತ್ರಜ್ಞಾನದ ಸಮರ್ಪಕ ಸದ್ಬಳಕೆ ಎಂದರು.
    ಬೆಂಗಳೂರು ಆರ್‌ಜಿಯು ಎಚ್‌ಎಸ್ ಫ್ಯಾಕ್ಟಲ್ಟಿ ಆಫ್ ಫಾರ್ಮಸಿ ಡೀನ್ ಡಾ.ಅಶೋಕ್‌ಮಾಲ್ಪಾನಿ ಅವರು ಮಾತನಾಡಿ,ಔಷ ಧೀಯ ಪದವೀಧರರು ಹಲವು ವಿಭಾಗಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಲಿದೆ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂ ಡರೆ ಸಾಧನೆ ಸಾಧ್ಯವಾಗಲಿದೆ. ಬುದ್ಧಿವಂತಿಕೆ ಕಾಲಕ್ಕೆ ತ್ಕಕಂತೆ ಜತೆಗೆ ಹೊಸತನ್ನು ಕಲಿತರೆ ಯಶಸ್ಸು ತಮ್ಮದಾಗಲಿದೆ ಎಂದರು.
    ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಆರ್ಶೀವಚನ ನೀಡಿ,ಪದವೀಧರರು ನಾಡಿಗೆ ಕೀರ್ತಿ ತರುವಂಥ ಫಾರ್ಮಸಿಸ್ಟ್‌ಗಳಾಗಿ ಬೆಳೆಯಬೇಕೆಂದು ಆಶಿಸಿದರು. ಕೋವಿಡ್ ಸಂದರ್ಭ ವ್ಯಾಕ್ಸಿನ್ ಆವಿಷ್ಕಾರದಲ್ಲಿ ಔಷಧಿ ತಜ್ಞರ ಕಾರ್ಯ ಮೆಚ್ಚುವಂತದ್ದಾಗಿದೆ ಎಂದರು.
    ಪ್ರಾಂಶುಪಾಲ ಟಿ.ಎಸ್.ನಾಗರಾಜ್ ಮಾತನಾಡಿದರು. ಡಾ.ಸ್ನೇಹಲತಾ ಅವರು ಬಿ.ಫಾರ್ಮ,ಎಂ.ಫಾರ್ಮ ಪದವೀಧರರಿಗೆ ಮ ತ್ತು ಫಾರ್ಮ ಡಿ ವಿದ್ಯಾರ್ಥಿಗಳಿಗೆ ಫಾರ್ಮಸಿಸ್ಟ್ ಪ್ರತಿಜ್ಞೆ ಬೋಧಿಸಿದರು.ಡಾ.ಆರ್.ಯೋಗಾನಂದ,ಡಾ.ಎಚ್.ಎಸ್.ಬಸವರಾಜ ಮತ್ತಿತರರು ಇದ್ದರು.ಡಾ.ಮಾರುತಿ ಟಿ.ಏಕಬೋಟೆ,ಡಾ.ಅಬೂಬಕರ್ ಸಿದ್ದಿಕ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts