More

    ಭಾರತಕ್ಕೆ ಸುಲಭ ತುತ್ತಾದ ಶ್ರೀಲಂಕಾ ತಂಡ

    ಲಖನೌ: ನಿರೀಕ್ಷೆಯಂತೆಯೇ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಪ್ರಭುತ್ವ ಮೆರೆದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡವನ್ನು 62 ರನ್‌ಗಳಿಂದ ಸೋಲಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿತು. ಕಳೆದ ಭಾನುವಾರವಷ್ಟೇ ಬಲಿಷ್ಠ ವೆಸ್ಟ್ ಇಂಡೀಸ್ ಎದುರು 3-0 ಕ್ಲೀನ್‌ಸ್ವೀಪ್ ಸಾಧನೆ ಮಾಡಿದ್ದ ರೋಹಿತ್ ಶರ್ಮ ಪಡೆ, ಇದೀಗ ತವರಿನಲ್ಲಿ ಮತ್ತೊಮ್ಮೆ ಭರ್ಜರಿ ನಿರ್ವಹಣೆ ಮುಂದುವರಿಸಿತು.

    ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ವಿಕೆಟ್ ಕೀಪರ್-ಆರಂಭಿಕ ಇಶಾನ್ ಕಿಶನ್ (89 ರನ್, 56 ಎಸೆತ, 10 ಬೌಂಡರಿ, 3 ಸಿಕ್ಸರ್) ಹಾಗೂ ಶ್ರೇಯಸ್ ಅಯ್ಯರ್ (57*ರನ್, 28 ಎಸೆತ, 5 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 2 ವಿಕೆಟ್‌ಗೆ 199 ರನ್ ಪೇರಿಸಿತು. ಪ್ರತಿಯಾಗಿ ಈ ಬೃಹತ್ ಮೊತ್ತವನ್ನು ಬೆನ್ನಟ್ಟುವ ಲಕ್ಷಣವನ್ನು ಯಾವುದೇ ಹಂತದಲ್ಲೂ ತೋರದ ಶ್ರೀಲಂಕಾ ತಂಡ ಅಂತಿಮವಾಗಿ 6 ವಿಕೆಟ್‌ಗೆ 137 ಕಲೆಹಾಕಲಷ್ಟೇ ಶಕ್ತವಾಯಿತು.

    ಭಾರತ: 2 ವಿಕೆಟ್‌ಗೆ 199 (ರೋಹಿತ್ ಶರ್ಮ 44, ಇಶಾನ್ ಕಿಶನ್ 89, ಶ್ರೇಯಸ್ ಅಯ್ಯರ್ 57*, ಲಹಿರು ಕುಮಾರ 43ಕ್ಕೆ 1, ದಸುನ್ ಶನಕ 19ಕ್ಕೆ 1), ಶ್ರೀಲಂಕಾ: 6 ವಿಕೆಟ್‌ಗೆ 137 (ಚರಿತಾ ಅಸಲಂಕಾ 53*, ದುಶ್ಮಾಂತಾ ಚಮೀರಾ 24*, ಚಮಿಕಾ ಕರುಣರತ್ನೆ 21, ವೆಂಕಟೇಶ್ ಅಯ್ಯರ್ 36ಕ್ಕೆ 2, ಭುವನೇಶ್ವರ್ ಕುಮಾರ್ 9ಕ್ಕೆ 2, ಯಜುವೇಂದ್ರ ಚಾಹಲ್ 11ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts