More

    ವಾಂಡರರ್ಸ್‌ನಲ್ಲಿ ವೇಗಿಗಳ ದರ್ಬಾರ್ ; ಕೆಎಲ್ ರಾಹುಲ್ ನಾಯಕನಾಟ

    ಜೊಹಾನ್ಸ್‌ಬರ್ಗ್: ವೇಗಿಗಳ ಮಾರಕ ದಾಳಿ ಎದುರು ರನ್‌ಗಳಿಸಲು ಪರದಾಡಿದ ಪ್ರವಾಸಿ ಭಾರತ ತಂಡ, ನಾಯಕ ಕೆಎಲ್ ರಾಹುಲ್ (50 ರನ್, 133 ಎಸೆತ, 9 ಬೌಂಡರಿ) ಅರ್ಧಶತಕದಾಟದ ನಡುವೆಯೂ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿತು. ನೂತನ ವರ್ಷದ ಮೊದಲ ಹಣಾಹಣಿಯಲ್ಲಿ ಭಾರತೀಯ ಬ್ಯಾಟರ್‌ಗಳು ನಿರೀಕ್ಷಿತ ನಿರ್ವಹಣೆ ತೋರಲು ವಿಫಲರಾದರು. ನಾಯಕ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ಜವಾಬ್ದಾರಿ ಹೊತ್ತ ಕನ್ನಡಿಗ ಕೆಎಲ್ ರಾಹುಲ್ ಆಕರ್ಷಕ ಬ್ಯಾಟಿಂಗ್ ಮೂಲಕ ದಿನದ ಗೌರವ ಪಡೆದರು.

    ವಾಂಡರರ್ಸ್‌ ಮೈದಾನದಲ್ಲಿ ಸೋಮವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ವೇಗಿಗಳಾದ ಮಾರ್ಕೋ ಜಾನ್ಸೆನ್ (31ಕ್ಕೆ 4), ಡುವಾನೆ ಒಲಿವೀರ್ (64ಕ್ಕೆ 3) ಹಾಗೂ ಕಗಿಸೊ ರಬಾಡ (64ಕ್ಕೆ 3) ಮಾರಕ ದಾಳಿಗೆ ನಲುಗಿ 63.1 ಓವರ್‌ಗಳಲ್ಲಿ 202 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಮೊಹಮದ್ ಶಮಿ (15ಕ್ಕೆ 1) ದಾಳಿಗೆ ಆರಂಭಿಕ ಆಘಾತ ಎದುರಿಸಿದ ದ.ಆಫ್ರಿಕಾ ತಂಡ ಮೊದಲ ದಿನದಂತ್ಯಕ್ಕೆ 1 ವಿಕೆಟ್‌ಗೆ 35 ರನ್‌ಗಳಿಸಿದ್ದು, ಇನ್ನೂ 167 ರನ್ ಹಿನ್ನಡೆಯಲ್ಲಿದೆ.

    ಭಾರತ: 63.1 ಓವರ್‌ಗಳಲ್ಲಿ 202 (ರಾಹುಲ್ 50, ಮಯಾಂಕ್ ಅಗರ್ವಾಲ್ 26, ಆರ್.ಅಶ್ವಿನ್ 46, ಮಾರ್ಕೋ ಜೆಸ್ಸೆನ್ 31ಕ್ಕೆ 4, ಕಗಿಸೊ ರಬಾಡ 64ಕ್ಕೆ 3, ಡುವಾನೆ ಒಲಿವೀರ್ 64ಕ್ಕೆ 3). ದಕ್ಷಿಣ ಆಫ್ರಿಕಾ: 18 ಓವರ್‌ಗಳಲ್ಲಿ 1 ವಿಕೆಟ್‌ಗೆ 35 (ಡೀನ್ ಎಲ್ಗರ್ 7*, ಕೀಗನ್ ಪೀಟರ್ಸೆನ್ 14*, ಮೊಹಮದ್ ಶಮಿ 15ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts