ಸತತ 2ನೇ ಪಂದ್ಯದಲ್ಲೂ ಮುಗ್ಗರಿಸಿದ ಭಾರತ; ದಕ್ಷಿಣ ಆಫ್ರಿಕಾ ತಂಡಕ್ಕೆ 4 ವಿಕೆಟ್ ಜಯ

blank

ಕಟಕ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮುಗ್ಗರಿಸಿದ ಆತಿಥೇಯ ಭಾರತ ತಂಡ 2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 4 ವಿಕೆಟ್‌ಗಳಿಂದ ಶರಣಾಯಿತು. ಸತತ 2ನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯಲು ವಿಲವಾದ ರಿಷಭ್ ಪಂತ್ ಪಡೆ, 5 ಪಂದ್ಯಗಳ ಸರಣಿಯಲ್ಲಿ 0-2ರಿಂದ ಹಿನ್ನಡೆ ಕಂಡಿತು. ತವರು ನೆಲದಲ್ಲಿ ಸರಣಿ ಸೋಲಿನ ಭೀತಿ ಎದುರಿಸಿರುವ ಭಾರತದ ಪಾಲಿಗೆ ಉಳಿದ 3 ಪಂದ್ಯಗಳು ಮಾಡು ಇಲ್ಲವೆ ಮಡಿ ಎನಿಸಿವೆ.

blank

ಬಾರಬತಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್‌ಗೆ 148 ರನ್ ಪೇರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ, ವೇಗಿ ಭುವನೇಶ್ವರ್ ಕುಮಾರ್ (13ಕ್ಕೆ 4) ಮಾರಕ ದಾಳಿ ನಡುವೆಯೂ ಹೆನ್ರಿಚ್ ಕ್ಲಾಸೆನ್ (81 ರನ್, 46 ಎಸೆತ, 7 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 18.2 ಓವರ್‌ಗಳಲ್ಲಿ 6 ವಿಕೆಟ್‌ಗೆ 149 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಭಾರತ: 6 ವಿಕೆಟ್‌ಗೆ 148 (ಶ್ರೇಯಸ್ ಅಯ್ಯರ್ 40, ಇಶಾನ್ ಕಿಶನ್ 34, ದಿನೇಶ್ ಕಾರ್ತಿಕ್ 30*, ಹರ್ಷಲ್ ಪಟೇಲ್ 12*, ಅನ್ರಿಚ್ ನೋಕಿಯ 36ಕ್ಕೆ 2), ದಕ್ಷಿಣ ಆಫ್ರಿಕಾ: 18.2 ಓವರ್‌ಗಳಲ್ಲಿ 6 ವಿಕೆಟ್‌ಗೆ 149 (ಟೆಂಬಾ ಬವುಮಾ 35, ಹೆನ್ರಿಚ್ ಕ್ಲಾಸೆನ್ 81, ಮಿಲ್ಲರ್ 20*, ಭುವನೇಶ್ವರ್ ಕುಮಾರ್ 13ಕ್ಕೆ 4).

Share This Article
blank

ಸೇಬು ತಿಂದ ನಂತರ ಈ ಆಹಾರಗಳನ್ನು ಸೇವಿಸಬೇಡಿ..ಹಾಗೇನಾದರೂ ಮಾಡಿದರೆ ಅಪಾಯ ಖಂಡಿತ!Apple

Apple: ಸೇಬುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಆದರೆ ಸೇಬನ್ನು ತಿಂದ ನಂತರ ಜೀರ್ಣಿಸಿಕೊಳ್ಳಲು 30 ರಿಂದ 40…

ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ ತಿಂದರೆ ನಿಮ್ಮ ಆರೋಗ್ಯಕ್ಕೆ ಏನಾಗುತ್ತದೆ ಗೊತ್ತಾ? Pickles

Pickles: ಬಿಸಿ ಅನ್ನದ ಜೊತೆ ಸ್ವಲ್ಪ ಉಪ್ಪಿಕಾಯಿ ಇದ್ದರೆ ಸಾಕು ಆ ಊಟದ ರುಚಿಯೇ ಬೇರೆ.…

blank