More

    ವಿಶಾಖಪಟ್ಟಣದಲ್ಲಿ ಪುಟಿದೆದ್ದ ಭಾರತ; ದಕ್ಷಿಣ ಆಫ್ರಿಕಾ ಎದುರು 48 ರನ್ ಜಯ, ಸರಣಿ ಆಸೆ ಜೀವಂತ

    ವಿಶಾಖಪಟ್ಟಣ: ಸರಣಿ ಗೆಲುವಿಗೆ ಡು ಆರ್ ಡೈ ಸ್ಥಿತಿಯಲ್ಲಿ ಸಿಲುಕಿರುವ ಆತಿಥೇಯ ಭಾರತ ತಂಡ 3ನೇ ಟಿ20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 48 ರನ್‌ಗಳಿಂದ ಮಣಿಸಿತು. ಈ ಮೂಲಕ ಪ್ರಸಕ್ತ ವರ್ಷ ದಕ್ಷಿಣ ಆಫ್ರಿಕಾ ಎದುರು ಮೊದಲ ಗೆಲುವಿನ ನಗೆ ಬೀರಿದ ಭಾರತ, 5 ಪಂದ್ಯಗಳ ಚುಟುಕು ಸರಣಿಯಲ್ಲಿ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿಕೊಂಡಿತು. ಸತತ 3ನೇ ಪಂದ್ಯದಲ್ಲಿ ಟಾಸ್ ಸೋತರೂ ಗೆಲುವಿನ ನಗೆ ಬೀರಿದ ರಿಷಭ್ ಪಂತ್ ಪಡೆ, ಸರಣಿಯಲ್ಲಿ ತನ್ನ ಹೋರಾಟವನ್ನು ಜೀವಂತವಾಗಿರಿಸಿಕೊಂಡಿತು.

    ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕರಾದ ಋತುರಾಜ್ ಗಾಯಕ್ವಾಡ್ (57 ರನ್, 35 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಇಶಾನ್ ಕಿಶನ್ (54 ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಅರ್ಧಶತಕದ ನೆರವಿನಿಂದ 5 ವಿಕೆಟ್‌ಗೆ 179 ರನ್‌ಗಳಿಸಿತು. ಪ್ರತಿಯಾಗಿ ಯಜುವೇಂದ್ರ ಚಾಹಲ್ (20ಕ್ಕೆ 3) ಹಾಗೂ ಹರ್ಷಲ್ ಪಟೇಲ್ (25ಕ್ಕೆ 4) ಮಾರಕ ದಾಳಿಗೆ ನಲುಗಿದ ದ. ಆಫ್ರಿಕಾ 19.1 ಓವರ್‌ಗಳಲ್ಲಿ 131 ರನ್‌ಗಳಿಗೆ ಸರ್ವಪತನ ಕಂಡಿತು.

    ಭಾರತ: 5 ವಿಕೆಟ್‌ಗೆ 179 (ಋತುರಾಜ್ ಗಾಯಕ್ವಾಡ್ 57, ಇಶಾನ್ ಕಿಶನ್ 54, ಹಾರ್ದಿಕ್ ಪಾಂಡ್ಯ 31*, ಡ್ವೇನ್ ಪ್ರಿಟೋರಿಯಸ್ 29ಕ್ಕೆ 2), ದಕ್ಷಿಣ ಆಫ್ರಿಕಾ: 19.1 ಓವರ್‌ಗಳಲ್ಲಿ 131 (ರೀಜಾ ಹೆನ್‌ಡ್ರೀಕ್ಸ್ 23, ಡ್ವೇನ್ ಪ್ರಿಟೋರಿಯಸ್ 20, ಹೆನ್ರಿಚ್ ಕ್ಲಾಸೆನ್ 29, ವಾಯ್ನೆ ಪಾರ್ನೆಲ್ 22*, ಹರ್ಷಲ್ ಪಟೇಲ್ 25ಕ್ಕೆ 4, ಯಜುವೇಂದ್ರ ಚಾಹಲ್ 20ಕ್ಕೆ 2, ಭುವನೇಶ್ವರ್ ಕುಮಾರ್ 21ಕ್ಕೆ 1, ಅಕ್ಷರ್ ಪಟೇಲ್ 28ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts