More

    ಇತಿಹಾಸದ ಹೊಸ್ತಿಲಲ್ಲಿ ಟೀಮ್ ಇಂಡಿಯಾ; ಇಂದಿನಿಂದ ದ.ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್

    ಜೊಹಾನ್ಸ್‌ಬರ್ಗ್: ಸೆಂಚುರಿಯನ್‌ನಲ್ಲಿ ದಾಖಲಿಸಿದ ಐತಿಹಾಸಿಕ ಗೆಲುವಿನ ಬಳಿಕ ನೂತನ ವರ್ಷಾಚರಣೆ ಆಚರಿಸಿಕೊಂಡಿರುವ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಸೋಮವಾರದಿಂದ ನಡೆಯಲಿರುವ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಸನ್ನದ್ಧವಾಗಿದೆ. ಉತ್ತಮ ದಾಖಲೆ ಹೊಂದಿರುವ ವಾಂಡರರ್ಸ್‌ ಮೈದಾನದಲ್ಲೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಇದರೊಂದಿಗೆ ವರ್ಷಾರಂಭದಲ್ಲೇ ಹರಿಣಗಳ ನಾಡಲ್ಲಿ ಐತಿಹಾಸಿಕ ಸರಣಿ ಗೆಲ್ಲುವ ಉತ್ಸಾಹದಲ್ಲಿದೆ. ಸೆಂಚುರಿಯನ್ ನೆಲದಲ್ಲಿ ಟೆಸ್ಟ್ ಗೆದ್ದ ಏಷ್ಯಾದ ಮೊದಲ ತಂಡ ಎನಿಸಿಕೊಂಡಿರುವ ಭಾರತ ವಾಂಡೆರರ್ಸ್‌ ನೆಲದಲ್ಲಿ 1992ರಿಂದಲೂ ಅಜೇಯ ಸಾಧನೆ ಮಾಡಿದ್ದು, ಅಂಕಿಅಂಶ ಲೆಕ್ಕಾಚಾರದಲ್ಲಿ ತಂಡದ ಆತ್ಮವಿಶ್ವಾಸ ಇಮ್ಮಡಿಗೊಂಡಿದೆ.
    ವಿದೇಶಿ ನೆಲದಲ್ಲಿ ಟೆಸ್ಟ್ ಗೆಲುವಿನ ಅಭಿಯಾನ ಆರಂಭಿಸಿರುವ ಭಾರತ ತಂಡದ ಮುಖ್ಯಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೋಡಿ, ಇದೀಗ ಸರಣಿ ಗೆಲುವಿನ ಹಂಬಲದಲ್ಲಿದೆ. 2006ರಲ್ಲಿ ದ್ರಾವಿಡ್ ಸಾರಥ್ಯದಲ್ಲೇ ಮೊದಲ ಟೆಸ್ಟ್ ಗೆಲುವು ಕಂಡಿದ್ದ ಭಾರತ ತಂಡ, ದ್ರಾವಿಡ್ ಮಾರ್ಗದರ್ಶನದಲ್ಲೇ ಮೊದಲ ಸರಣಿ ಗೆಲುವಿನ ಸನಿಹದಲ್ಲಿದೆ.

    ಟೀಮ್ ನ್ಯೂಸ್:
    ಭಾರತ ತಂಡ: ಸೆಂಚುರಿಯನ್‌ನಲ್ಲಿ ಐತಿಹಾಸಿಕ ಗೆಲುವಿನಿಂದ ಬೀಗುತ್ತಿರುವ ವಿರಾಟ್ ಕೊಹ್ಲಿ ಬಳಗದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ. ಪಿಚ್ ವೇಗಿಗಳಿಗೆ ಸ್ನೇಹಿಯಾಗಿರುವುದರಿಂದ ಶಾರ್ದೂಲ್ ಠಾಕೂರ್ ಬದಲಿಗೆ ಉಮೇಶ್ ಯಾದವ್ ಕಣಕ್ಕಿಳಿಯಬಹುದು.
    ಸಂಭಾವ್ಯ ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೀ), ಆರ್.ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್.

    ದಕ್ಷಿಣ ಆಫ್ರಿಕಾ:
    ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಡುವಾನ್ನೆ ಒಲಿವೀರ್ ತಂಡಕ್ಕೆ ವಾಪಸಾಗುವ ಸಾಧ್ಯತೆಗಳಿವೆ. ಒಲಿವೀರ್ ತಂಡದಲ್ಲಿ ಸ್ಥಾನ ಪಡೆದರೆ ಮಾರ್ಕೋ ಜೆನ್ಸೆನ್ ಅಥವಾ ವಿಯಾನ್ ಮುಲ್ದೆರ್ ತಂಡದಿಂದ ಹೊರಗುಳಿಯಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷಿತ ನಿರ್ವಹಣೆ ತೋರಲು ವಿಲರಾದ ಸ್ಪಿನ್ನರ್ ಕೇಶವ್ ಮಹಾರಾಜ್‌ಗೆ ಮತ್ತೊಂದು ಅವಕಾಶ ನೀಡಬಹುದು. ಡಿಕಾಕ್ ದಿಢೀರ್ ವಿದಾಯದಿಂದ ತೆರವಾಗಿರುವ ವಿಕೆಟ್ ಕೀಪಿಂಗ್ ಸ್ಥಾನವನ್ನು ಕೈಲ್ ವೆರೀನೆ ತುಂಬಲಿದ್ದಾರೆ.

    ಸಂಭಾವ್ಯ ತಂಡ: ಡೀನ್ ಎಲ್ಗರ್ (ನಾಯಕ), ಏಡನ್ ಮಾರ್ಕ್ರಮ್, ಕೀಗನ್ ಪೀಟರ್ಸೆನ್, ರಾಸಿ ವ್ಯಾನ್ ಡರ್ ಡುಸೆನ್, ತೆಂಬಾ ಬವುಮಾ, ಕೈಲ್ ವೆರೀನೆ (ವಿಕೀ), ವಿಯಾನ್ ಮುಲ್ದೆರ್/ಮಾರ್ಕೋ ಜೆನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್ನೆ ಒಲಿವೀರ್, ಲುಂಗಿ ಎನ್‌ಗಿಡಿ.

    * ಪಿಚ್ ರಿಪೋರ್ಟ್
    ವಾಂಡರರ್ಸ್‌ ಪಿಚ್ ವೇಗಿಗಳ ಸ್ನೇಹಿಯಾಗಿದ್ದು, ಹೆಚ್ಚಿನ ಬೌನ್ಸರ್ ಎಸೆತಗಳನ್ನು ನಿರೀಕ್ಷಿಸಬಹುದು. ಬ್ಯಾಟರ್‌ಗಳು ಸಾಕಷ್ಟು ಸವಾಲು ಎದುರಿಸಬೇಕಿದೆ. ಪಂದ್ಯಕ್ಕೆ ಮಳೆ ಅಡಚಣೆಯುಂಟು ಮಾಡುವ ಸಾಧ್ಯತೆಗಳಿದ್ದು, 5 ದಿನಗಳ ಆಟದಲ್ಲಿ 4 ದಿನ ಮಳೆ ನಿರೀಕ್ಷಿಸಲಾಗಿದೆ.

    ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts