More

    ಸೆಂಚುರಿಯನ್‌ನಲ್ಲಿ ಭಾರತ ತಂಡಕ್ಕೆ ಜಯದ ಸಿಂಚನ; ಮೊದಲ ಟೆಸ್ಟ್‌ನಲ್ಲಿ 113 ರನ್‌ಗಳಿಂದ ಗೆದ್ದ ದ್ರಾವಿಡ್-ಕೊಹ್ಲಿ ಟೀಮ್

    ಸೆಂಚುರಿಯನ್: ವೇಗಿಗಳ ಕರಾರುವಾಕ್ ದಾಳಿ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 113 ರನ್‌ಗಳಿಂದ ಸೋಲಿಸಿ ಐತಿಹಾಸಿಕ ಸಾಧನೆ ಮೆರೆದಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ 1-0 ಮುನ್ನಡೆ ಸಾಧಿಸಿತು. ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಗೆದ್ದ ಏಷ್ಯಾದ ಮೊದಲ ತಂಡವೆಂಬ ಹೆಗ್ಗಳಿಕೆ ಭಾರತದ್ದಾಗಿದೆ. ಆತಿಥೇಯ ತಂಡ 2014ರ ಬಳಿಕ ಈ ಮೈದಾನದಲ್ಲಿ ಮೊದಲ ಸೋಲು ಕಂಡಿತು. ಕೋಚ್ ರಾಹುಲ್ ದ್ರಾವಿಡ್-ನಾಯಕ ವಿರಾಟ್ ಕೊಹ್ಲಿ ಜೋಡಿ ವಿದೇಶಿ ನೆಲದಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತು. ಟೀಮ್ ಇಂಡಿಯಾ 2021ಕ್ಕೆ ಗೆಲುವಿನ ವಿದಾಯವನ್ನೂ ಹೇಳಿತು.

    ಭಾರತ ನೀಡಿದ 305 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 191 ರನ್‌ಗಳಿಗೆ ಸರ್ವಪತನ ಕಂಡಿತು. ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆ ಅನ್ವಯ ಮಳೆ ಆತಂಕದ ನಡುವೆಯೂ, ಗೆಲುವಿನ ಹಂಬಲದೊಂದಿಗೆ ಕಣಕ್ಕಿಳಿದ ಭಾರತ ತಂಡಕ್ಕೆ ಅಂತಿಮ ದಿನದಾಟದಲ್ಲೂ ವೇಗಿಗಳು ಪಾರಮ್ಯ ಸಾಧಿಸಲು ನೆರವಾದರು. 4 ವಿಕೆಟ್‌ಗೆ 94 ರನ್‌ಗಳಿಂದ ದಿನದಾಟ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ, ವೇಗಿಗಳಾದ ಜಸ್‌ಪ್ರೀತ್ ಬುಮ್ರಾ (50ಕ್ಕೆ 3), ಮೊಹಮದ್ ಶಮಿ (63ಕ್ಕೆ 3), ಮೊಹಮದ್ ಸಿರಾಜ್ (47ಕ್ಕೆ 2) ಹಾಗೂ ಸ್ಪಿನ್ನರ್ ಆರ್.ಅಶ್ವಿನ್ (18ಕ್ಕೆ 2) ಸಂಘಟಿತ ದಾಳಿಗೆ ನಲುಗಿ 68 ಓವರ್‌ಗಳಲ್ಲಿ 191 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ಮೊದಲ ಇನಿಂಗ್ಸ್ 327 ರನ್‌ಗಳಿಸಿದ್ದರೆ, ದಕ್ಷಿಣ ಆಫ್ರಿಕಾ 197 ರನ್‌ಗಳಿಗೆ ಆಲೌಟ್ ಆಗಿತ್ತು. ಇದರಿಂದ 130 ರನ್ ಮುನ್ನಡೆಯೊಂದಿಗೆ ಎರಡನೇ ಸರದಿ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 174 ರನ್‌ಗಳಿಸಿತ್ತು.

    ಭಾರತ: 327 ಮತ್ತು 174, ದಕ್ಷಿಣ ಆಫ್ರಿಕಾ: 197 ಮತ್ತು 68 ಓವರ್‌ಗಳಲ್ಲಿ 191 (ಡೀಲ್ ಎಲ್ಗರ್ 77, ತೆಂಬಾ ಬವುಮಾ 35*, ಕ್ವಿಂಟನ್ ಡಿ ಕಾಕ್ 21, ಮಾರ್ಕೋ ಜೇಸೆನ್ 13, ಜಸ್‌ಪ್ರೀತ್ ಬುಮ್ರಾ 50ಕ್ಕೆ 3, ಮೊಹಮದ್ ಶಮಿ 63ಕ್ಕೆ 3, ಮೊಹಮದ್ ಸಿರಾಜ್ 47ಕ್ಕೆ 2, ಆರ್.ಅಶ್ವಿನ್ 18ಕ್ಕೆ 2). ಪಂದ್ಯಶ್ರೇಷ್ಠ: ಕೆಎಲ್ ರಾಹುಲ್.

    *ಎರಡನೇ ಟೆಸ್ಟ್
    ಆರಂಭ: ಜ.3-7
    ಎಲ್ಲಿ: ಜೊಹಾನ್ಸ್‌ಬರ್ಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts