More

    ಭಾರತ – ಇಂಗ್ಲೆಂಡ್ ಮೊದಲ ಹಣಾಹಣಿ ; 2ನೇ ಡಬ್ಲ್ಯುಟಿಸಿಗೆ ಇಂದು ಚಾಲನೆ

    ನಾಟಿಂಗ್‌ಹ್ಯಾಂ: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಭಾರತ ತಂಡ 2ನೇ ಆವೃತ್ತಿಯಲ್ಲಿ ಶುಭಾರಂಭ ಕಾಣುವ ತವಕದಲ್ಲಿದೆ. ಆತಿಥೇಯ ಇಂಗ್ಲೆಂಡ್ ವಿರುದ್ಧ ಬುಧವಾರ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಡಬ್ಲ್ಯುಟಿಸಿ 2021-23ರ ಆವೃತ್ತಿಗೆ ಚಾಲನೆ ಸಿಗಲಿದ್ದು, ಮೊದಲ ಕಾದಾಟಕ್ಕೆ ಟ್ರೆಂಟ್‌ಬ್ರಿಡ್ಜ್ ಮೈದಾನ ಸನ್ನದ್ಧವಾಗಿದೆ. ಡಬ್ಲ್ಯುಟಿಸಿ ಫೈನಲ್ ಸೋಲಿನ ಬಳಿಕ ಸುದೀರ್ಘ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ಪಡೆ ಇದೀಗ ಹೊಸ ಆರಂಭದ ಹಂಬಲದಲ್ಲಿದೆ. ಭಾರತ ತಂಡ ಹಾಗೂ ವೈಯಕ್ತಿಕವಾಗಿ ನಾಯಕ ವಿರಾಟ್ ಕೊಹ್ಲಿ ಪಾಲಿಗೂ ಈ ಸರಣಿ ಮಹತ್ವದಾಗಿದೆ. ಸದ್ಯ ಭಾರತದ ಹನ್ನೊಂದರ ಬಳಗದ ಆಯ್ಕೆಯೇ ನಾಯಕ ಹಾಗೂ ಮುಖ್ಯ ಕೋಚ್ ರವಿಶಾಸಿಗೆ ದೊಡ್ಡ ತಲೆನೋವಾಗಿದೆ. 2018ರ ಪ್ರವಾಸದಲ್ಲಿ ಭಾರತ ತಂಡ 1-4ರಿಂದ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ದೊಡ್ಡ ಸವಾಲೂ ಭಾರತದ ಮುಂದಿದೆ.

    ಇದನ್ನೂ ಓದಿ: ಅವಳಿ ಪದಕದ ಒಡತಿ ಪಿವಿ ಸಿಂಧುಗೆ ಅದ್ಧೂರಿ ಸ್ವಾಗತ,

    ಟೀಮ್ ನ್ಯೂಸ್:
    ಭಾರತ: ಡಬ್ಲ್ಯುಟಿಸಿ ಫೈನಲ್‌ಗೆ 2 ದಿನ ಮೊದಲೇ ಆಡುವ ಬಳಗ ಪ್ರಕಟಿಸಿದ್ದ ಭಾರತ ಈ ಬಾರಿ ಕೊನೇ ಕ್ಷಣದವರೆಗೂ ಯೋಚಿಸಿ ಆಡುವ 11ರ ತಂಡವನ್ನು ಅಂತಿಮಗೊಳಿಸಲಿದೆ. ತಲೆಗೆ ಚೆಂಡೇಟು ಬಿದ್ದ ಕಾರಣ ಮೊದಲ ಪಂದ್ಯದಿಂದ ಮಯಾಂಕ್ ಅಗರ್ವಾಲ್ ಹೊರಬಿದ್ದಿದ್ದು, ಕರ್ನಾಟಕದ ಮತ್ತೋರ್ವ ಆಟಗಾರ ಕೆಎಲ್ ರಾಹುಲ್, ರೋಹಿತ್ ಶರ್ಮ ಜತೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಆದರೆ ಅವರಿಗೆ ಬಂಗಾಳದ ಅಭಿಮನ್ಯು ಈಶ್ವರನ್ ಪೈಪೋಟಿ ಒಡ್ಡುತ್ತಿದ್ದಾರೆ. ಆಲ್ರೌಂಡರ್ ರವೀಂದ್ರ ಜಡೇಜಾ ಅಭ್ಯಾಸ ಪಂದ್ಯದಲ್ಲಿ ಮಿಂಚಿರುವುದರಿಂದ ಅವರನ್ನು ಆಡಿಸಿದರೆ 7ನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಬಲಿಷ್ಠವಾಗಿರಲಿದೆ ಎಂಬ ಲೆಕ್ಕಾಚಾರವಿದೆ. ಹಾಲಿ ಫಾರ್ಮ್‌ನಲ್ಲಿ ಆರ್. ಅಶ್ವಿನ್‌ರನ್ನು ಕೈಬಿಡುವ ಮಾತಿಲ್ಲ. ಹೀಗಾಗಿ ಡಬ್ಲ್ಯುಟಿಸಿ ಫೈನಲ್‌ನಂತೆ ಇಲ್ಲೂ ಇಬ್ಬರು ಸ್ಪಿನ್ನರ್‌ಗಳು ಆಡಿದರೆ ಅಚ್ಚರಿ ಇಲ್ಲ.

    ಸಂಭಾವ್ಯ ತಂಡ: ರೋಹಿತ್ ಶರ್ಮ, ಕೆಎಲ್ ರಾಹುಲ್/ಅಭಿಮನ್ಯು ಈಶ್ವರನ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೀ), ರವೀಂದ್ರ ಜಡೇಜಾ, ಆರ್.ಅಶ್ವಿನ್, ಇಶಾಂತ್ ಶರ್ಮ, ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಮರಳಿದ ಬಿಲ್ಗಾರ ಜಾಧವ್‌ಗೆ ಬೆದರಿಕೆ ಕರೆಗಳ ಸ್ವಾಗತ!

    ಟೀಮ್ ನ್ಯೂಸ್: ಇಂಗ್ಲೆಂಡ್: ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಇಲ್ಲದೆ ಇಂಗ್ಲೆಂಡ್ ತಂಡ ಕಣಕ್ಕಿಳಿಯಲಿದೆ. ಇದರಿಂದ ಸ್ಯಾಮ್ ಕರ‌್ರನ್ ಅವರೇ ತಂಡದ ಪ್ರಧಾನ ಆಲ್ರೌಂಡರ್ ಆಗಿದ್ದಾರೆ. ಒಲಿ ರಾಬಿನ್‌ಸನ್ ಕೂಡ ಸಮಯೋಚಿತ ಬ್ಯಾಟಿಂಗ್ ಮಾಡಬಲ್ಲರು. ಹೀಗಾಗಿ ಸ್ಪಿನ್ನರ್ ಜಾಕ್ ಲೀಚ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಲೀಚ್‌ಗೆ ಅವಕಾಶ ನೀಡಿದರೆ, ಐವರು ಬೌಲರ್‌ಗಳನ್ನು ಆಡಿಸಿದಂತಾಗುತ್ತದೆ. ಒಲೀ ಪೋಪ್ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರು ಗೈರಾದರೆ ಜಾನಿ ಬೇರ್‌ಸ್ಟೋ ಕಣಕ್ಕಿಳಿಯಬಹುದು.
    ಸಂಭಾವ್ಯ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲೆ, ಜಾಕ್ ಕ್ರೌಲಿ, ಜೋ ರೂಟ್ (ನಾಯಕ), ಒಲಿ ಪೋಪ್/ಜಾನಿ ಬೇರ್‌ಸ್ಟೋ, ಜೋಸ್ ಬಟ್ಲರ್ (ವಿ.ಕೀ), ಸ್ಯಾಮ್ ಕರ‌್ರನ್, ಒಲಿ ರಾಬಿನ್‌ಸನ್, ಸ್ಟುವರ್ಟ್ ಬ್ರಾಡ್, ಜಾಕ್ ಲೀಚ್, ಜೇಮ್ಸ್ ಆಂಡರ್‌ಸನ್.

    ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
    ನೇರಪ್ರಸಾರ: ಸೋನಿ ಸ್ಪೋರ್ಟ್ಸ್

    *ಮುಖಾಮುಖಿ: 126
    ಇಂಗ್ಲೆಂಡ್: 48
    ಭಾರತ: 29
    ಡ್ರಾ: 49

    *ಇಂಗ್ಲೆಂಡ್‌ನಲ್ಲಿ: 62
    ಇಂಗ್ಲೆಂಡ್: 34
    ಭಾರತ: 7
    ಡ್ರಾ: 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts