More

    ಭಾರತದಿಂದ ಕರೊನಾ ಲಸಿಕೆ ಪಡೆಯುವ ಮೊದಲ ರಾಷ್ಟ್ರ ಬಾಂಗ್ಲಾ; ಪುಣೆ ಕಂಪನಿಯಲ್ಲಿ ಬಂಡವಾಳ ಹೂಡಿದ ಬೆಕ್ಸಿಮ್ಕೋ

    ನವದೆಹಲಿ: ಕರೊನಾ ನಿಗ್ರಹ ಲಸಿಕೆಯ ಸಂಶೋಧನೆಗಳು ಅಂತಿಮ ಹಂತಕ್ಕೆ ತಲುಪುತ್ತಿರುವಂತೆಯೇ, ಔಷಧಕ್ಕಾಗಿ ಪೈಪೋಟಿಯೇ ನಡೆಯುತ್ತಿದೆ.
    ಸದ್ಯ ಆಕ್ಸ್​ಫರ್ಡ್​ ವಿವಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮುಂಚೂಣಿಯಲ್ಲಿದ್ದು, ಭಾರತದಲ್ಲಿ ಇದನ್ನು ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಉತ್ಪಾದಿಸುತ್ತಿದೆ. ಜತೆಗೆ, ತೃತೀಯ ರಾಷ್ಟ್ರಗಳಿಗೆ ಪೂರೈಸುವ ಪರವಾನಗಿಯನ್ನು ಬ್ರಿಟನ್​ ಮೂಲದ ಕಂಪನಿಯಿಂದ ಪಡೆದುಕೊಂಡಿದೆ.

    ಈ ಹಿನ್ನೆಲೆಯಲ್ಲಿ ಕರೊನಾ ಲಸಿಕೆಯನ್ನು ಮೊದಲು ಪಡೆಯುವ ನಿಟ್ಟಿನಲ್ಲಿ ಬಾಂಗ್ಲಾದ ಬೆಕ್ಸಿಮ್ಕೋ ಫಾರ್ಮಾಸ್ಯೂಟಿಕಲ್ಸ್​ ಕಂಪನಿ ಭಾರಿ ಮೊತ್ತದ ಬಂಡವಾಳ ಹೂಡಿಕೆಗೆ ಮುಂದಾಗಿದೆ.

    ಇದನ್ನೂ ಓದಿ; ಹಿರಿಯರನ್ನೂ ಕಾಪಾಡಬಲ್ಲ ಮಾಡೆರ್ನಾ ಕರೊನಾ ಲಸಿಕೆ; ಆರಂಭಿಕ ಪ್ರಯೋಗದಲ್ಲಿ ಯಶಸ್ಸು 

    ಸಿರಂ ಇನ್​ಸ್ಟಿಟ್ಯೂಟ್​ನ ಮುಖ್ಯಸ್ಥ ಆದಾರ್​ ಪೂನಾವಾಲಾ ಜತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಬೆಕ್ಸಿಮ್ಕೋ ಹೇಳಿದೆ. ಆದರೆ, ಬಮಡವಾಳ ಹೂಡಿಕೆಯ ಮೊತ್ತವೆಷ್ಟು ಎಂಬುದನ್ನು ತಿಳಿಸಿಲ್ಲ. ಆದರೆ, ಮೊದಲ ಆದ್ಯತೆಯಲ್ಲಿ ಲಸಿಕೆ ಪೂರೈಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರರ್ಥ ಸಿರಂ ಇನ್​ಸ್ಟಿಟ್ಯೂಟ್​ ಲಸಿಕೆ ಉತ್ಪಾದಿಸಿದಾಗ ಇದನ್ನು ಪಡೆಯುವ ಮೊದಲ ದೇಶ ಬಾಂಗ್ಲಾ ಆಗಿರಲಿದೆ.

    ಬಂಡವಾಳ ಹೂಡಿಕೆಯನ್ನು ಲಸಿಕೆ ಪೂರೈಕೆಗೆ ನೀಡಿದ ಮುಂಗಡ ಹಣ ಎಂದು ಪರಿಗಣಿಸಲಾಗುತ್ತದೆ. ಲಸಿಕೆ ಅಂತಾರಾಷ್ಟ್ರೀಯವಾಗಿ ನೋಂದಣಿಯಾದಾಗ ಬಾಂಗ್ಲಾದೇಶ ಅದನ್ನು ಮೊದಲಿಗೆ ಪಡೆಯುವ ರಾಷ್ಟ್ರಗಳಲ್ಲಿ ಒಂದಾಗಿರಲಿದೆ ಎಂದು ಬೆಕ್ಸಿಮ್ಕೋ ಕಂಪನಿ ಪ್ರಧಾನ ಅಧಿಕಾರಿ ಶಯನ್​ ಎಫ್​. ರೆಹ್ಮಾನ್​ ಹೇಳಿದ್ದಾರೆ.

    ಇದನ್ನೂ ಓದಿ; ಲಾಕ್​ಡೌನ್​ ಮಾಡಲೇ ಇಲ್ಲ, ಕಠಿಣ ನಿರ್ಬಂಧಗಳೂ ಇರಲಿಲ್ಲ; ಆದರೂ ಕರೊನಾಗೆ ಕಡಿವಾಣ ಹಾಕಿದ್ಹೇಗೆ? 

    ಈ ಒಪ್ಪಂದ ಎರಡು ಕಂಪನಿಗಳ ನಡುವಿನ ಒಪ್ಪಂದ ಮಾತ್ರವಾಗಿರದೇ, ಎರಡು ರಾಷ್ಟ್ರಗಳ ನಡುವಿನ ಗಾಢ ಬಾಂಧವ್ಯಕ್ಕೂ ನಿದರ್ಶನವಾಗಿದೆ ಎಂದು ರೆಹ್ಮಾನ್​ ಹೇಳಿದ್ದಾರೆ. ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷ್​ ಶ್ರಿಂಗ್ಲಾ ಢಾಕಾದಲ್ಲಿ ಪ್ರಧಾನಿ ಶೇಖ್​ ಹಸೀನಾ ಭೇಟಿಯಾದ 10 ದಿನಗಳ ಬಳಿಕ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

    ಮೂರೇ ವಾರದಲ್ಲಿ ಬ್ರಿಟನ್​ ಜನರಿಗೆ ಸಿಗಲಿದೆ ಕರೊನಾ ಲಸಿಕೆ; ತುರ್ತು ಬಳಕೆಗೆ ಕಾಯ್ದೆ ತಿದ್ದುಪಡಿ; ಭಾರತಕ್ಕೂ ಇದೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts