More

    ಫುಟ್‌ಪಾತ್ ತೆರವಿಗೆ ಹಿಂದೇಟು, ಸಾರ್ವಜನಿಕರ ಆಕ್ರೋಶ

    ಇಂಡಿ: ಪಟ್ಟಣದ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಪುರಸಭೆ ಎದುರೇ ಫುಟ್‌ಪಾತ್ ಮತ್ತು ರಸ್ತೆ ಅತಿಕ್ರಮಣಗೊಂಡರೂ ಅದನ್ನು ತೆರವುಗೊಳಿಸುವ ಗೋಜಿಗೆ ಹೋಗದಿರುವುದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

    ಇತ್ತೀಚೆಗೆ ವಿಜಯವಾಣಿ ಪತ್ರಿಕೆ ಫುಟ್‌ಪಾತ್, ಅತಿಕ್ರಮಣದ ಕುರಿತು ಸರಣಿ ವರದಿ ಪ್ರಕಟಿಸಿತ್ತು. ವರದಿ ಆಧರಿಸಿ ಪುರಸಭೆ ಮುಖ್ಯಾಧಿಕಾರಿಗಳು ಫುಟ್‌ಪಾತ್ ಅತಿಕ್ರಮಣಕಾರರಿಗೆ ಮೂರುದಿನದ ಕಾಲಾವಕಾಶ ನೀಡಿ ನೋಟಿಸ್ ನೀಡಿದ್ದಲ್ಲದೆ, ಪುರಸಭೆ ವಾಹನಗಳಲ್ಲಿ ಮೂರು ದಿನಗಳಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವಂತೆ ಮೈಕ್‌ನಲ್ಲಿ ಪ್ರಚಾರ ಮಾಡಲಾಗಿತ್ತು.

    ಪ್ರಚಾರ ಮಾಡಿ ಹತ್ತಾರು ದಿನವಾದರೂ ಪುರಸಭೆ ಅಧಿಕಾರಿಗಳು ಫುಟ್‌ಪಾತ್ ಅತಿಕ್ರಮಣ ಮಾಡಿಸಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
    ಜನರಿಗೆ ಫುಟ್‌ಪಾತ್ ಅತಿಕ್ರಮಣವಾಗಿರುವುದರಿಂದ ನಡೆದಾಡಲು ತೊಂದರೆಯಾಗುತ್ತಿದೆ. ಕೂಡಲೆ ಅತಿಕ್ರಮಣ ತೆರವುಗೊಳಿಸುವಂತೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಕುರಿತು ಹೆಚ್ಚಿನ ಮಾಹಿತಿಗೆ ವಿಜಯವಾಣಿ ಪ್ರತಿನಿಧಿ ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೇಶ ಕೆ.ಎಸ್. ಅವರಿಗೆ ಐದಾರು ಬಾರಿ ದೂರವಾಣಿ ಮೂಲಕ ಕರೆ ಮಾಡಿದರೂ ಕರೆ ಸ್ವೀಕರಿಸಲೇ ಇಲ್ಲ.

    ಪುರಸಭೆ ಅಧಿಕಾರಿಗಳು ತಮ್ಮ ಕಾರ್ಯವನ್ನು ಸರಿಯಾಗಿ ಮಾಡುತ್ತಿಲ್ಲ. ಫುಟ್‌ಪಾತ್ ಅತಿಕ್ರಮಣ ಅಷ್ಟೇ ಅಲ್ಲ, ಕೆಲವರು ರಸ್ತೆಗಳನ್ನೇ ಅತಿಕ್ರಮಣ ಮಾಡಿದ್ದಾರೆ. ನಗರದ ಹಳ್ಳ ಸಹ ಅತಿಕ್ರಮಣವಾಗಿದೆ. ಅದನ್ನು ತೆರವುಗೊಳಿಸಲು ಪುರಸಭೆಯವರು ಮುಂದಾಗುತ್ತಿಲ್ಲ. ನಗರದ ಅಭಿವೃದ್ದಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕ್ಷೀಣಿಸುತ್ತಿದೆ.
    ರಾಜಗುರು ದೇವರ ನಗರದ ನಿವಾಸಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts