More

    ಬೆರಳಚ್ಚಿಗೂ ಡೆಟಾಲ್ ಬಳಕೆ !

    ವಿಜಯಪುರ: ಜಗತ್ತನ್ನೇ ತಲ್ಲಣಗೊಳಿಸಿರುವ ಕರೊನಾ ವೈರಸ್ ಭೀತಿ ಇದೀಗ ಪಡಿತರ ಅಂಗಡಿಗಳ ಬಾಗಿಲು ತಟ್ಟಿದ್ದು ಪಡಿತರಕ್ಕಾಗಿ ಬೆರಳಚ್ಚು ನೀಡಲು ಸಹ ಹಿಂಜರಿಯುವಂತಾಗಿದೆ !
    ಹೌದು, ಪಡಿತರ ಪಡೆಯಲು ಬೆರಳಚ್ಚು ನೀಡುವುದು ಕಡ್ಡಾಯವಾಗಿದ್ದು, ಸಾರ್ವಜನಿಕರು ಒಬ್ಬರ ನಂತರ ಮತ್ತೊಬ್ಬರು ಬೆರಳಚ್ಚು ನೀಡಬೇಕು. ಈ ವೇಳೆ ಯಾರಿಗಾದರೂ ಕರೊನಾ ತಗುಲಿದ್ದರೆ ಹೇಗೆ? ಎಂಬ ಭಯ ಪಡಿತರದಾರರನ್ನು ಕಾಡುತ್ತಿದೆ. ಹೀಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಾಕಷ್ಟು ಮುಂಜಾಗೃತೆ ಸಹ ಕೈಗೊಳ್ಳುತ್ತಿದೆ.

    ಡೆಟಾಲ್ ಬಳಕೆ

    ಪಡಿತರದಾರರು ಬೆರಳಚ್ಚು ನೀಡುವ ಮುನ್ನ ಡೆಟಾಲ್ ಬಳಸಿ ಕೈ ಸ್ವಚ್ಛಗೊಳಿಕೊಳ್ಳಬೇಕು. ಪ್ರತೀ ಪಡಿತರದಾರನ ಬೆರಳಚ್ಚಿನ ನಂತರ ಇಂಥದ್ದೊಂದು ಸರ್ಕಸ್ ಅನಿವಾರ್ಯ. ಅದಕ್ಕಾಗಿ ಡೆಟಾಲ್ ಸಹ ಸಿದ್ಧವಾಗಿರಿಸಿಕೊಳ್ಳಲಾಗುತ್ತಿದೆ. ಕಳೆದೊಂದು ತಿಂಗಳಿನಿಂದ ಡೆಟಾಲ್ ಬಳಕೆ ಕಡ್ಡಾಯಗೊಳಿಸಲಾಗಿದ್ದು ತಿಂಗಳಾಂತ್ಯದವರೆಗೆ ಹಂಚಿಕೆಯಾಗುವ ಪಡಿತರ ಹಂಚಿಕೆವರೆಗೆ ಈ ಪ್ರಕ್ರಿಯೆ ಮುಂದುವರಿಯಲಿದೆ. ಜತೆಗೆ ಡೆಟಾಲ್‌ನಿಂದ ಯಂತ್ರವನ್ನೂ ಶುಚಿಗೊಳಿಸಲಾಗುತ್ತಿದೆ.

    834 ಪಡಿತರ ಮಳಿಗೆ

    ಜಿಲ್ಲೆಯಲ್ಲಿ 834 ಪಡಿತರ ಹಂಚಿಕೆದಾರರಿದ್ದಾರೆ. ಅಂತ್ಯೋದಯ ಅನ್ನ ಯೋಜನೆಯಡಿ-42450, ಬಿಪಿಎಲ್- 467485 ಸೇರಿ ಒಟ್ಟು 509935 ಪಡಿತರದಾರರಿದ್ದಾರೆ. ಪ್ರತೀ ತಿಂಗಳು ಅಂತ್ಯೋದಯ ಅನ್ನ ಯೋಜನೆಯಡಿ 35ಕೆಜಿ ಅಕ್ಕಿ ಹಾಗೂ ಬಿಪಿಎಲ್ ಪಡಿತರದಾರರಿಗೆ 7ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ತಿಂಗಳಿಗೆ 97064.530 ಕ್ವಿಂಟಲ್ ಅಕ್ಕಿ ಹಂಚಿಕೆಯಾಗುತ್ತದೆ. ಈ ಎಲ್ಲ ಪಡಿತರದಾರರು ಬೆರಳಚ್ಚು ನೀಡುವುದು ಕಡ್ಡಾಯವಾಗಿದೆ. ಹೀಗಾಗಿ ಬೆರಳಚ್ಚು ನೀಡುವಾಗ ಸೋಂಕು ಬಾರದಂತೆ ಮುಂಜಾಗೃತೆ ವಹಿಸುವುದು ಕಡ್ಡಾಯವಾಗಿದೆ.

    ತಿಂಗಳಿಂದಲೇ ಇಂಥದ್ದೊಂದು ನಿಯಮ ರೂಪಿಸಲಾಗಿದೆ. ಮುಂಜಾಗೃತೆ ಕ್ರಮವಾಗಿ ಎಲ್ಲ ಹಂಚಿಕೆದಾರರೂ ಡೆಟಾಲ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.
    ಅಮರೇಶ ತಂಡೂರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ

    ಬೆರಳಚ್ಚಿಗೂ ಡೆಟಾಲ್ ಬಳಕೆ !
    ಬೆರಳಚ್ಚಿಗೂ ಡೆಟಾಲ್ ಬಳಕೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts