More

    ಮುಂದುವರಿದ ಧರಣಿ ಸತ್ಯಾಗ್ರಹ

    ಇಂಡಿ: ತಾಲೂಕು ಸಮಗ್ರ ನೀರಾವರಿಗೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶುಕ್ರವಾರ ಎರಡನೇ ದಿನ ಪೂರೈಸಿತು.

    ಪ್ರಾಂತ ರೈತ ಸಂಘ, ಜನವಾದಿ ಮಹಿಳಾ ಸಂಘಟನೆ, ಸಾತಪುರದ ಕನಕ ಸೇನೆ, ಸಂಗೋಗಿಯ ಸಂಗೊಳ್ಳಿ ರಾಯಣ್ಣ ಸಂಘಟನೆಗಳು ಬೆಂಬಲ ಸೂಚಿಸಿ ಹೋರಾಟದಲ್ಲಿ ಪಾಲ್ಗೊಂಡವು.

    ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಸಿ ಕಲಾದಗಿ ಮಾತನಾಡಿ, ಆಲಮಟ್ಟಿ ಅಣೆಕಟ್ಟೆ ಎತ್ತರ 524 ಮೀ. ಎತ್ತರ ಆಗಬೇಕು. ಈ ದಿಶೆಯಲ್ಲಿ ಎಲ್ಲರೂ ಪಕ್ಷಭೇದ ಮರೆತು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗುತ್ತಿ ಬಸವಣ್ಣ ನೀರಾವರಿ ಯೋಜನೆ ಕಾರ್ಯ ಮುಗಿದಿದ್ದು, ಕೇವಲ ನೀರು ಬಿಡುವುದು ಮಾತ್ರ ಬಾಕಿ ಇದೆ. ನನೆಗುದಿಗೆ ಬಿದ್ದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೆ ರೈತರ ಬಾಳು ಹಸನಾಗುತ್ತದೆ ಎಂದರು.

    ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, ನಂಜುಡಪ್ಪನವರ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕು ಇಂಡಿ. ಆ ಹಣೆಪಟ್ಟಿ ಹೋಗಬೇಕಾದರೆ ತಾಲೂಕು ಸಮಗ್ರ ನೀರಾವರಿ ಆಗಲೇಬೇಕು ಎಂದರು.

    ಮಂಜುನಾಥ ಕಾಮಗೊಂಡ, ಸಿದ್ದು ಡಂಗಾ, ಶ್ರೀಶೈಲಗೌಡ ಬಿರಾದಾರ, ಮರೆಪ್ಪ ಗಿರಣಿವಡ್ಡರ, ಬಸವರಾಜ ಹಂಜಗಿ, ಮಹಮ್ಮದಗೌಸ ಬಾಗವಾನ, ಬಾಬು ಮೇತ್ರಿ, ದುಂಡು ಬಿರಾದಾರ, ತಮ್ಮನಗೌಡ ಬಿರಾದಾರ, ಮುತ್ತಪ್ಪ ಪೂಜಾರಿ, ಶಿವಾನಂದ ಅಂಗಡಿ, ಕುಮಾರ ಸುರಗಿಹಳ್ಳಿ, ಮಾಳು ಮ್ಯಾಕೇರಿ, ಭೀಮಾಶಂಕರ ತಳವಾರ, ರಾಜು ಮುಲ್ಲಾ, ಮಹಿಬೂಬ ಬೇವನೂರ, ಮುತ್ತು ಹೊಸಮನಿ, ಹೂವಣ್ಣ ಪೂಜಾರಿ, ಮುತ್ತು ಮೇತ್ರಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts