More

    ಕೋವಿಡ್ ಬಗೆಗೆ ಭಯಬೇಡ, ನಿಯಮ ಪಾಲಿಸಿ

    ಇಂಡಿ: ಪರಸ್ಪರ ಅಂತರ ಕಾಪಾಡುವುದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕೋವಿಡ್ ತಡೆಗೆ ಅಸ್ತ್ರವಾಗಿವೆ. ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ ಹೇಳಿದರು.
    ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರ ಗಂಟಲು ದ್ರವ ಪರೀಕ್ಷೆ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಕರೊನಾ ಹೆಮ್ಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಅದರಲ್ಲಿ ಭಾರತ ಕೂಡ ಹೊರತಾಗಿಲ್ಲ. ಕೆಮ್ಮು, ನೆಗಡಿ, ಗಂಟಲು ಬೇನೆ ಬಂದರೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಬೇಗನೆ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆ ಪಾಲಿಸಿದರೆ ರೋಗ ವಾಸಿಯಾಗುತ್ತದೆ ಎಂದರು.
    ಸಾರ್ವಜನಿಕರು ಕೂಡ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕಾಗಿರುವುದು ಆದ್ಯ ಕರ್ತವ್ಯ. ಸುಖಾಸುಮ್ಮನೆ ನೂರಾರು ಜನರನ್ನು ಸೇರಿಸಿ ಸಭೆ, ಸಮಾರಂಭಗಳನ್ನು ಮಾಡುವುದು, ಮಾಸ್ಕ್ ಧರಿಸದೆ ಅಲೆದಾಡಿದರೆ ಕರೊನಾ ಮಹಾಮಾರಿ ಉಲ್ಬಣಿಸುತ್ತದೆ ಎಂದರು.
    ಪಿಎಸ್‌ಐ ಮಾಳಪ್ಪ ಪೂಜಾರಿ, ಪುರಸಭೆ ವ್ಯವಸ್ಥಾಪಕ ಎಸ್.ಐ. ರೇವೂರಕರ್, ಲಕ್ಕಪ್ಪ ಪೂಜಾರಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಪುರಸಭೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

    ಭಯ ಮನುಷ್ಯನನ್ನು ದುರ್ಬಲಗೊಳಿಸುತ್ತದೆ. ಭಯದಿಂದಲೇ ಅನೇಕ ಜನರು ಸಾವಿಗೀಡಾಗಿದ್ದಾರೆ. 60 ರಿಂದ 92 ವರ್ಷದ ಎಷ್ಟೋ ಜನರು ಆತ್ಮಸ್ಥೆರ್ಯದಿಂದ ರೋಗದ ವಿರುದ್ಧ ಹೋರಾಟ ಮಾಡಿ ಬದುಕುಳಿದಿದ್ದಾರೆ. ಅವರಂತೆ ನಾವು ಕೂಡ ಧೈರ್ಯದಿಂದ ರೋಗವನ್ನು ಎದುರಿಸೋಣ.
    ಅರ್ಚನಾ ಕುಲಕರ್ಣಿ, ತಾಲೂಕು ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts