More

    ಝಳಕಿ ಬಳಿ ಇಂಡಿ-ಚಡಚಣ ರಸ್ತೆ ಸಂಚಾರ ತಡೆದು ಪ್ರತಿಭಟನೆ : ಜೆಡಿಎಸ್​ ಕಾರ್ಯಕರ್ತರಿಂದ ಉಗ್ರ ಹೋರಾಟದ ಎಚ್ಚರಿಕೆ

    ಇಂಡಿ : ತಾಲೂಕಿನಲ್ಲಿಯ ಹದಗೆಟ್ಟ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಝಳಕಿ ಬಳಿ ಇಂಡಿ ಮತ್ತು ಚಡಚಣ ರಸ್ತೆ ಸಂಚಾರ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ. ಪಾಟೀಲ ಹಲಸಂಗಿ ಮಾತನಾಡಿ, ನಾಲ್ಕೈದು ವರ್ಷಗಳಿಂದ ತಾಲೂಕಿನ ಬಹುತೇಕ ರಸ್ತೆಗಳು ಹಾಳಾದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಇದು ಪ್ರಜಾಪ್ರಭುತ್ವದ ದುರ್ದೈವ ಎಂದರು.

    ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಡಿ. ಪಾಟೀಲ ನೇತೃತ್ವ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಶೇ. 90 ರಷ್ಟು ರಸ್ತೆಗಳು ಹದಗೆಟ್ಟಿವೆ. ಕೂಡಲೇ ಸರ್ಕಾರ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಬೇಕಾಗುತ್ತದೆ. ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಕಾನೂನು ರೀತಿಯಲ್ಲೇ ಹೋರಾಟ ಮಾಡುತ್ತಿದ್ದೇವೆ. ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ. ತಾಲೂಕಿನ ಜನತೆಗೆ ಸೌಲಭ್ಯ ಕಲ್ಪಿಸಿಕೊಡಲು ಸಿದ್ಧನಿದ್ದೇನೆ ಎಂದರು.

    ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಮರೆಪ್ಪ ಗಿರಣಿವಡ್ಡರ, ಬಸವರಾಜ ಹಂಜಗಿ, ಮಹಿಬೂಬ್ ಬೇವನೂರ, ಸಿದ್ದು ಡಂಗಾ, ಅಯ್ಯುೂಬ್ ನಾಟೀಕಾರ, ಸಿದ್ದಣಗೌಡ ಬಿರಾದಾರ, ಬಸಗೊಂಡ ಪಾಟೀಲ, ಅರವಿಂದ ಪಾಟೀಲ, ಸಂತೋಷ ಬಿರಾದಾರ, ರವಿ ಕೆಂಗೇರಿ, ಮಾಳಪ್ಪ ಉಮರಾಣಿ, ಬೀರಪ್ಪ ಸಗಾಯಿ, ನಿಯಾಝ್ ಅಗರಖೇಡ, ರ್ಇಾನ್ ಪಠಾಣ, ರಾಜು ಮುಲ್ಲಾ, ಬಸವರಾಜ ಹಂಜಗಿ ರವಿ ಪಾಟೀಲ(ಬದಾಮಿ), ಸಂಜು ಾಯಕಾರ, ಮನೋಹರ ನಾವಿ, ಬಾಲಕೃಷ್ಣ ಭೋಸಲೆ ಸೇರಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಸಿಗದ ಅವಕಾಶ : ಇದಕ್ಕೂ ಮುನ್ನ ಜೆಡಿಎಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಪ್ರಯತ್ನಿಸಿದರಾದರೂ ಪೊಲೀಸ್ ಇಲಾಖೆ ಆಸ್ಪದ ನೀಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಇಂಡಿ ಮತ್ತು ಚಡಚಣ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts