More

    ಗಿರಿಜನರಿಂದ ಅನಿರ್ದಿಷ್ಟಾವಧಿ ಧರಣಿ

    ಪಿರಿಯಾಪಟ್ಟಣ: ನಿವೇಶನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉತ್ತೇನಹಳ್ಳಿ ಮತ್ತು ಚೌಕೂರು ಹಾಡಿಗಳ ನಿವಾಸಿಗಳು ಪಂಚವಳ್ಳಿ ಗ್ರಾಮ ಪಂಚಾಯಿತಿ ಎದುರು ಭಾನುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

    ರಾಜ್ಯ ಬುಡಕಟ್ಟು ಸಮುದಾಯ ಒಕ್ಕೂಟಗಳ ಕಾರ್ಯದರ್ಶಿ ಶೈಲೇಂದ್ರ ಮಾತನಾಡಿ, ನವ ಗ್ರಾಮ ಯೋಜನೆಯಡಿಯಲ್ಲಿ ಮತ್ತು ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ನಿವೇಶನ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾದ ಪಿಡಿಒ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿದರು.

    ಹಿಂದೆ ಪಟ್ಟಣದ ತಾಪಂ ಎದುರು ಅನಿರ್ದಿಷ್ಟಾವಧಿ ಧರಣಿ ಮಾಡಿದ್ದ ಸಂದರ್ಭದಲ್ಲಿ ಶಾಸಕ ಕೆ.ಮಹದೇವ್ ಮತ್ತು ಎಸಿ ವೀಣಾ ಅವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಬೇರೆ ಗ್ರಾ.ಪಂ.ಗಳಲ್ಲಿ ದಾಖಲಾತಿ ಪಡೆದು ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕೆಡಿಎಲ್ಆರ್‌ಗೆ ಕಳುಹಿಸಲಾಗಿದೆ. ಆದರೆ ಈ ಗ್ರಾಮ ಪಂಚಾಯಿತಿಯಲ್ಲಿ ಆ ಕೆಲಸವಾಗಿಲ್ಲ ಎಂದು ದೂರಿದರು.

    ಗ್ರಾಪಂ ಚುನಾವಣೆಯು ಸಮೀಪಿಸುತ್ತಿದ್ದು, ನೀತಿ ಸಂಹಿತೆ ನೆಪ ಹೇಳಿ ಸಮಸ್ಯೆಯನ್ನು ಜೀವಂತವಾಗಿಡಲಿದ್ದಾರೆ ಎಂದು ಆರೋಪಿಸಿದರು. ಸಮಸ್ಯೆಯನ್ನು ಬಗೆಹರಿಸುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ತಿಳಿಸಿದರು.
    ಧರಣಿಯಲ್ಲಿ ಜಾನಕಮ್ಮ, ದರುವಯ್ಯ, ಲಕ್ಷ್ಮಮ್ಮ, ಮಂಜುಳಾ, ದಾಸಪ್ಪ, ಕಮಲಮ್ಮ, ಕುಸುಮ, ಬಾಬು, ರಾಜಪ್ಪ ಹಾಜರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts