More

    ಹಾಲಿ ಚಾಂಪಿಯನ್ನರಿಗೆ ಮಾಡು ಇಲ್ಲವೇ ಮಡಿ ಪಂದ್ಯ: ಬೆಂಗಳೂರಿನಲ್ಲಿ ಇಂದು ಶ್ರೀಲಂಕಾ ಎದುರಾಳಿ

    ಬೆಂಗಳೂರು: ಪ್ರಶಸ್ತಿ ಉಳಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಸತತ 2 ಆಘಾತಕಾರಿ ಸೋಲಿನೊಂದಿಗೆ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದ್ದು, ಗುರುವಾರ ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಜಿ ಚಾಂಪಿಯನ್ ಶ್ರೀಲಂಕಾ ತಂಡದ ಸವಾಲು ಎದುರಿಸಲಿದೆ. ಜೋಸ್ ಬಟ್ಲರ್ ಬಳಗ ಗೆಲುವಿನ ಹಳಿಗೇರುವ ಮೂಲಕ ಸೆಮೀಸ್ ಆಸೆ ಜೀವಂತವಿರಿಸುವ ತವಕದಲ್ಲಿದೆ. ಅತ್ತ ಶ್ರೀಲಂಕಾ ಪಾಲಿಗೂ ಇದು ಮಾಡು ಇಲ್ಲವೆ ಮಡಿ ಹೋರಾಟವೆನಿಸಿದೆ. ಈ ಪಂದ್ಯದಲ್ಲಿ ಸೋತ ತಂಡಕ್ಕೆ ಸೆಮೀಸ್ ಬಾಗಿಲು ಬಹುತೇಕ ಮುಚ್ಚಿಹೋಗಲಿದೆ.
    ಉಭಯ ತಂಡಗಳು ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 2 ಅಂಕ ಕಲೆಹಾಕಿದ್ದು, ಇಂಗ್ಲೆಂಡ್‌ಗಿಂತ ಉತ್ತಮ ರನ್‌ರೇಟ್ ಹೊಂದಿರುವ ಲಂಕಾ 8ನೇ ಸ್ಥಾನದಲ್ಲಿದೆ. ಸಣ್ಣ ಬೌಂಡರಿ ಹೊಂದಿರುವ ಚಿನ್ನಸ್ವಾಮಿ ಅಂಗಣದಲ್ಲಿ ಮೊದಲ ಪಂದ್ಯದಂತೆ ರನ್ ಮಳೆ ಹರಿಯುವ ನಿರೀಕ್ಷೆ ಇದೆ. ಟೂರ್ನಿಯ ಆರಂಭಕ್ಕೂ ಮುನ್ನ ಸಾಕಷ್ಟು ಭರವಸೆ ಮೂಡಿಸಿದ ಹ್ಯಾರಿ ಬ್ರೂಕ್, ಸ್ಯಾಮ್ ಕರ‌್ರನ್, ನಾಯಕ ಜೋಸ್ ಬಟ್ಲರ್ ಸಾರ್ಮಥ್ಯಕ್ಕೆ ತಕ್ಕ ಆಟ ಪ್ರದರ್ಶಿಸುವಲ್ಲಿ ವಿಲರಾಗಿದ್ದಾರೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ಆಗಮನವೂ ತಂಡದಲ್ಲಿ ಸಾಕಷ್ಟು ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ. ಆಲ್ರೌಂಡರ್‌ಗಳ ನೀರಸ ನಿರ್ವಹಣೆ ಆಂಗ್ಲರಿಗೆ ಹಿನ್ನಡೆ ತಂದಿದೆ. ರೀಸ್ ಟಾಪ್ಲೆ ಅನುಪಸ್ಥಿತಿ ವೇಗದ ಬೌಲಿಂಗ್ ಬಲ ಕುಗ್ಗಿಸಿದೆ. ಸೆಮಿಫೈನಲ್ ಆಸೆ ಜೀವಂತವಾಗಿರಿಸಲು ಮುಂದಿನ ಪ್ರತಿ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
    ಅತ್ತ ಶ್ರೀಲಂಕಾ ಸತತ 3 ಸೋಲಿನ ಬಳಿಕ ಜಯದ ಹಳಿಗೆ ಮರಳಿದ್ದು, ಅನುಭವಿ ಏಂಜೆಲೊ ಮ್ಯಾಥ್ಯೂಸ್ ಸೇರ್ಪಡೆ ತಂಡಕ್ಕೆ ಬಲ ನೀಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಹೀಶ್ ತೀಕ್ಷಣ ಸಂಪೂರ್ಣ ಫಿಟ್ ಆಗಿದ್ದು ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಅನನುಭವಿ ಬೌಲಿಂಗ್ ನಡುವೆಯೂ ಲಂಕಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಉತ್ತಮ ರನ್ ಕಲೆಹಾಕಿದ್ದಾರೆ. ಎಡಗೈ ವೇಗಿ ದಿಲ್ಶಾನ್ ಮಧುಶಂಕ ಟೂರ್ನಿಯಲ್ಲಿ 2ನೇ ಗರಿಷ್ಠ ವಿಕೆಟ್ ಕಬಳಿಸಿದ್ದಾರೆ. ವಿಶ್ವಕಪ್ ಟೂರ್ನಿಯ ಹಿಂದಿನ 4 ಮುಖಾಮುಖಿಯಲ್ಲಿ ಇಂಗ್ಲೆಂಡ್ ಎದುರು ಶ್ರೀಲಂಕಾ ಗೆಲುವು ದಾಖಲಿಸಿದೆ.

    ವಿಶ್ವಕಪ್ ಮುಖಾಮುಖಿ- 11
    ಇಂಗ್ಲೆಂಡ್-6
    ಶ್ರೀಲಂಕಾ-5

    ಏಕದಿನ ಮುಖಾಮುಖಿ-189
    ಇಂಗ್ಲೆಂಡ್-38
    ಶ್ರೀಲಂಕಾ-36
    ಲಿತಾಂಶವಿಲ್ಲ-3
    ಟೈ-1

    ಆರಂಭ: ಮಧ್ಯಾಹ್ನ 2
    ನೇರಪ್ರಸಾರ: ಸ್ಟಾರ್ ಸ್ಪೋಟ್ಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts