More

    ರಾಗಿಗೆ ಹೆಚ್ಚಿದ ಬೇಡಿಕೆ: ರೈತರ ಮುಖದಲ್ಲಿ ಮಂದಹಾಸ 

    ಮಾಗಡಿ: ತಾಲೂಕಿನಾದ್ಯಂತ ರಾಗಿ ಬೆಳೆ ಸಮೃದ್ಧವಾಗಿ ಬೆಳೆದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ತಾಲೂಕಿನ ಶೇ.90 ರೈತರು ರಾಗಿಯನ್ನೇ ಅವಲಂಬಿಸಿದ್ದಾರೆ. 15 ದಿನಗಳ ಹಿಂದೆ ರಾಗಿ ಒಣಗುತ್ತಿದ್ದು ಬೆಳೆಗಾರನ ಮುಖದಲ್ಲಿ ನಿರಾಸೆ ಮೂಡಿತ್ತು. ಆದರೆ, ನಂತರ ಬಂದ ಮಳೆಯಿಂದಾಗಿ ರಾಸುಗಳಿಗೆ ಮೇವು ಸಿಗುವುದು ಖಚಿತ ಎನಿಸಿದೆ.

    ಈ ಬಾರಿ ತಾಲೂಕಿನಲ್ಲಿ 18,500 ಹೆಕ್ಟೇರ್​ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಬದಲಾಗಿ 19,248 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪ್ರತಿ ವರ್ಷ ಒಂದು ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ಉತ್ತಮವಾಗಿದ್ದರೆ, ಮತ್ತೊಂದು ಕಡೆ ಕುಸಿತ ಕಾಣುತ್ತಿತ್ತು. ಆದರೆ, ಈ ಬಾರಿ ಎಲ್ಲೆಡೆ ಬೆಳೆ ಒಂದೇ ರೀತಿಯಲ್ಲಿದೆ. ತಾಲೂಕಿನಲ್ಲಿ ಬೆಳೆಯುವ ರಾಗಿಗೆ ಹೆಚ್ಚಿನ ಬೇಡಿಕೆ ಇದೆ. ರಾಜ್ಯದ ಇತರ ತಾಲೂಕುಗಳಿಂದಲೂ ರೈತರು ಇಲ್ಲಿಗೆ ಬಂದು ಖರೀದಿಸುತ್ತಿದ್ದಾರೆ.

    ಕರೊನಾ ವೇಳೆ ನಗರ ಪ್ರದೇಶದಿಂದ ಗ್ರಾಮಕ್ಕೆ ಹಿಂತಿರುಗಿದ್ದ ಯುವಕರು ಜಮೀನಿನಲ್ಲಿ ರಾಗಿ ಬೆಳೆದಿರುವುದರಿಂದ ಬೇಡಿಕೆಯಲ್ಲಿ ಇಳಿಕೆಯಾಗುವ ಯಾವುದೇ ಅನುಮಾನವಿಲ್ಲ. ಕೃಷಿ ಇಲಾಖೆ ಸಮಯಕ್ಕೆ ಸರಿಯಾದ ರಸಗೊಬ್ಬರ ವಿತರಣೆ ಮಾಡದಿದ್ದರೂ ಭೂಮಿತಾಯಿ ರೈತರನ್ನು ಕೈಹಿಡಿದಿರುವಂತೂ ಸತ್ಯ.

    ತಾಲೂಕಿನಾಧ್ಯಂತ ಉತ್ತಮ ಮಳೆಯಾಗುತ್ತಿದ್ದು ರಾಗಿ ಬೆಳೆ ಇಳುವರಿಯಲ್ಲಿ ಹೆಚ್ಚಾಗುವ ಸಂಭವವಿದ್ದು ರೈತರ ಆದಾಯ ಹೆಚ್ಚಳವಾಗಲಿದೆ.

    | ಆರ್. ಸುಂದ್ರೇಶ್

    ಸಹಾಯಕ ಕೃಷಿ ನಿರ್ದೆಶಕ

    ಭೂಮಿ ನಂಬಿದರೆ ರೈತನನ್ನು ಕೈಬಿಡುವುದಿಲ್ಲ ಎಂಬ ಗಾದೆ ನಿಜವಾಗಿದೆ, ದೂರ ದೃಷ್ಟಿಯಿಟ್ಟು ಯಾವುದೆ ಕೆಲಸ ಮಾಡಿದರು ಫಲಸಿಗುತ್ತದೆ.

    | ರಾಜಣ್ಣ ರೈತ

    ಎಂ. ಎಸ್.ಸಿದ್ದಲಿಂಗೇಶ್ವರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts