More

    ಸಸಿ ನೆಟ್ಟು ಅರಣ್ಯ ಸಂಪತ್ತು ವೃದ್ಧಿಸಿ

    ನರಗುಂದ: ಜಾಗತಿಕ ತಾಪಮಾನ ಕಡಿಮೆ ಮಾಡಲು ಮರಗಳು ಸಹಕಾರಿಯಾಗಿವೆ ಎಂದು ಕೊಣ್ಣೂರ ಕೆಇಎಸ್ ಕಾಲೇಜ್ ಪ್ರಾಚಾರ್ಯ ಎಸ್.ಕೆ. ಜೋಶಿ ಹೇಳಿದರು.

    ತಾಲ್ಲೂಕಿನ ಕೊಣ್ಣೂರ ಗ್ರಾಮದ ಕೆಇಎಸ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸಸಿಗಳನ್ನು ನೆಡುವುದರಿಂದ ಮಣ್ಣಿನ ಸವೆತ, ಪ್ರವಾಹ, ಬರಗಾಲ, ಪರಿಸರ ಮಾಲಿನ್ಯ ಮುಂತಾದವುಗಳನ್ನು ತಡೆಯುವುದರ ಜತೆಗೆ ಜಾಗತಿಕ ತಾಪಮಾನ ಕಡಿಮೆ ಮಾಡಬಹುದು. ವಿದ್ಯಾರ್ಥಿಗಳು ಮನೆಯ ಸುತ್ತಲಿನ ಪರಿಸರ ಹಾಗೂ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳ ರಕ್ಷಣೆ ಮಾಡುವುದರ ಮೂಲಕ ಅರಣ್ಯ ಸಂಪತ್ತು ವೃದ್ಧಿಸಬೇಕು ಎಂದು ಹೇಳಿದರು. ವನಮಹೋತ್ಸವದಲ್ಲಿ 40ಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ಎಸ್.ಟಿ. ಚೌಡರಡ್ಡಿ, ಎಸ್.ಬಿ. ಯಲಿಗಾರ, ಎನ್.ಕೆ. ಸೋಮಾಪೂರ, ಎನ್.ಟಿ. ಕೆಂಪನಗೌಡ್ರ, ಎಸ್.ಪಿ. ಮಲ್ಲಪ್ಪಗೌಡ್ರ, ಐ.ಐ. ಮಸೂತಿಮನಿ, ಕಾಲೇಜ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts