More

    ಜಿಲ್ಲೆಯಲ್ಲಿ ಹೆಚ್ಚಿದ ಕರೊನಾತಂಕ ; ಸೋಂಕಿತರ ಸಂಪರ್ಕವಿಲ್ಲದಿದ್ದರೂ ದೃಢ

    ತುಮಕೂರು: ನಗರದಲ್ಲಿ ಮತ್ತೊಂದು ಕರೊನಾ ಪ್ರಕರಣ ದೃಢಪಟ್ಟಿದೆ. 65 ವರ್ಷದ ವೃದ್ಧೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಕರೊನಾ ಪ್ರಕರಣ ಸಂಖ್ಯೆ 31ಕ್ಕೇರಿದೆ.

    ನಗರದ ಮರಳೂರುದಿಣ್ಣೆಯ ನಿವಾಸಿ 65 ವರ್ಷದ ವೃದ್ಧೆ ಜ್ವರದಿಂದ ಬಳಲುತ್ತಿದ್ದು, ಮೇ 26ರಂದು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಾಗ ಗಂಟಲುದ್ರವ ಸಂಗ್ರಹಿಸಿ ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಆಕೆಯ ವರದಿ ಬಂದಿದ್ದು ಸೋಂಕು ದೃಢಪಟ್ಟಿದೆ. ಸೋಂಕಿತರ ಜತೆಯಾಗಲಿ, ಟ್ರಾವೆಲ್ ಹಿಸ್ಟರಿ ಇಲ್ಲದೇ ಇದ್ದರೂ ವೃದ್ಧೆಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

    ವೃದ್ಧೆಯ ಜತೆಯಲ್ಲಿ ಮನೆಯಲ್ಲಿದ್ದ ಗರ್ಭಿಣಿ ಪುತ್ರಿ, ಪುತ್ರ ಹಾಗೂ ಆಸ್ಪತ್ರೆಗೆ ಆಟೋದಲ್ಲಿ ಕರೆದುಕೊಂಡು ಹೋಗಿದ್ದ ಸಂಬಂಧಿಕರು ಸೇರಿ 7 ಜನರನ್ನು ಪ್ರಾಥಮಿಕ ಸಂಪರ್ಕದಲ್ಲಿದ್ದವರೆಂದು ಗುರುತಿಸಿ ಅವರನ್ನು ಇನ್ಸ್ಟಿಟೂಷನ್ ಕ್ವಾರಂಟೈನ್ ಮಾಡಲಾಗಿದೆ. ಇನ್ನೂ ದ್ವೀತಿಯ ಹಂತದಲ್ಲಿ ಸಂಪರ್ಕದಲ್ಲಿದ್ದ 15 ಜನರನ್ನು ಪತ್ತೆಹಚ್ಚಲಾಗಿದ್ದು ಅವರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಸೋಂಕಿತರ ನಿವಾಸವಿರುವ ಮರಳೂರುದಿಣ್ಣೆಯ ಮೊದಲನೇ ಕ್ರಾಸ್ ಅನ್ನು ಕಂಟೈನ್ಮೆಂಟ್ ರೆನ್ ಎಂದು ಪರಿಗಣಿಸಿ, ಸುತ್ತಮುತ್ತಲಿರುವ ಮನೆಗಳಲ್ಲಿನ ಜನರ ಆರೋಗ್ಯದ ಮಾಹಿತಿ ಕಲೆಹಾಕಿ, ಕರೊನಾ ಸೋಂಕು ಸಂಬಂಧಿಸಿದ ಲಕ್ಷಣಗಳಿರುವವರ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ಮಾಹಿತಿ ನೀಡಿದರು.

    ಆರ್.ಅಚ್ಚಮ್ಮನಹಳ್ಳಿಯಲ್ಲಿ ಆತಂಕದ ವಾತಾವರಣ (ಪಾವಗಡ):  ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್.ಅಚ್ಚಮ್ಮನಹಳ್ಳಿಯಲ್ಲಿ ಕರೊನಾ ಆತಂಕ ಎದುರಾಗಿದೆ. ದೆಹಲಿಯಿಂದ ಗ್ರಾಮಕ್ಕೆ ಹಿಂದಿರುಗಿದ್ದ ಯೋಧನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಹೋದರ, ಚಾಲಕ ಸೇರಿ ಮೂವರನ್ನು ಪಾವಗಡದ ವಸತಿನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಧುಗಿರಿ ಡಿವೈಎಸ್ಪಿ ಪ್ರವೀಣ್ ಕುಮಾರ್, ಪಾವಗಡ ಸಿಪಿಐ ನಾಗರಾಜ್ ಶನಿವಾರ ಗ್ರಾಮಕ್ಕೆ ಭೀಟಿ ನೀಡಿ ಪರಿಶೀಲಿಸಿದ್ದು, ಸೋಂಕಿತ ಯೋಧನ ಕುಟುಂಬನ ಮನೆಯ ಸುತ್ತಮುತ್ತ 200 ಮೀಟರ್ ದೂರದಲ್ಲಿ ಬ್ಯಾರಿಕೇಡ್ ನಿರ್ಮಿಸಿ ಆತನ ಮನೆಕಡೆ ಗ್ರಾಮಸ್ಥರು ಸುಳಿಯದಂತೆ ಎಚ್ಚರಿಸಿದ್ದಾರೆ. ಸೋಂಕಿತ ಯೋಧ ವಳ್ಳೂರಿನಲ್ಲಿದ್ದ ತನ್ನ ಗರ್ಭಿಣಿ ಹೆಂಡತಿಯನ್ನು ಭೇಟಿಯಾಗಿದ್ದಲ್ಲದೆ, ತಿರುಮಣಿ ಪೋಲೀಸ್ ಠಾಣೆಗೆ ತೆರಳಿ ದೆಹಲಿಯಿಂದ ಹಿಂದಿರುಗಿರುವುದಾಗಿ ಮಾಹಿತಿ ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ನಾಲ್ವೈದು ಪೊಲೀಸ್ ಪೇದೆಗಳ ಜತೆ ಮಾತನಾಡಿರುವುದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts