More

    ಇಂಚಗೇರಿ ಮಠಕ್ಕಿದೆ ಜಾತ್ಯತೀತ ಪರಂಪರೆ

    ಉಪ್ಪಿನಬೆಟಗೇರಿ: ರಾಜ್ಯ ಸೇರಿ ಇತರ ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತಗಣವನ್ನು ಹೊಂದಿದ ವಿಜಯಪುರ ಜಿಲ್ಲೆಯ ಶ್ರೀಕ್ಷೇತ್ರ ಇಂಚಗೇರಿ ಮಠವು ಜಾತ್ಯತೀತ ಪರಂಪರೆಯ ಅಧ್ಯಾತ್ಮದ ಕೇಂದ್ರವಾಗಿದೆ ಎಂದು ದೊಡವಾಡ ಗ್ರಾಮದ ಶಂಕ್ರಪ್ಪ ಮಹಾರಾಜರು ಹೇಳಿದರು.
    ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ನ. 2ರಂದು ಜರುಗುವ ಕ್ರಾಂತಿಯೋಗಿ, ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಾಧವಾನಂದ ಪ್ರಭುಜಿ ಜಯಂತಿಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ನಗರದಿಂದ ಹೊರಟಿರುವ ದಿಂಡಿ ಪಾದಯಾತ್ರಿಕರು ಮಾರ್ಗ ಮಧ್ಯೆ ಉಪ್ಪಿನಬೆಟಗೇರಿಗೆ ಆಗಮಿಸಿದಾಗ ಸ್ವಾಗತ ಕೋರಿ, ನಂತರ ಆಯೋಜಿಸಿದ್ದ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದುರ್ ಶಾಸ್ತ್ರೀಜಿ ಜಯಂತಿಯಂದು ಹುಬ್ಬಳ್ಳಿಯಲ್ಲಿ ರೇವಣಸಿದ್ಧೇಶ್ವರ ಮಹಾರಾಜರಿಂದ ಚಾಲನೆ ದೊರೆಯುವ ಈ ಪಾದಯಾತ್ರೆಯು ಒಂದು ತಿಂಗಳವರೆಗೆ ನಡೆಯುತ್ತದೆ. ಮಾರ್ಗ ಮಧ್ಯದಲ್ಲಿ ಸಾಕಷ್ಟು ಭಕ್ತರು ಯಾತ್ರಿಕರಿಗೆ ಊಟೋಪಚಾರ, ಫಲಾಹಾರದ ಜತೆಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಬೀಳ್ಕೊಡುತ್ತಾರೆ.

    ನಾಡಿನಾದ್ಯಂತ ಅಸಂಖ್ಯಾತ ಭಕ್ತರನ್ನು ಹೊಂದಿರುವ ಇಂಚಗೇರಿ ಮಠದ ಪರಂಪರೆ ನೋಡಲು ಒಮ್ಮೆಯಾದರೂ ತಾವೆಲ್ಲರೂ ಇಂಚಗೇರಿ ಮಠಕ್ಕೆ ಭೇಟಿ ನೀಡಬೇಕು ಎಂದರು.
    ರಡ್ಡೇರಟ್ಟಿ ಸದಾಶಿವ ಮಹಾರಾಜರು ಮಾತನಾಡಿ, ಇಂಚಗೇರಿ ಮಠವು ಜಾತ್ಯತೀತ ಪರಂಪರೆ ಹೊಂದಿದೆ. ಇಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳು ಹಿಂದು-ಮುಸ್ಲಿಂ ಭಾವೈಕ್ಯದ ಸಂದೇಶ ಸಾರುವಂತಿವೆ. ಎಲ್ಲ ವರ್ಗದವರು ಸಹಬಾಳ್ವೆ ಜತೆಗೆ ಸಹಪಂಕ್ತಿ ಭೋಜನ ಮಾಡುತ್ತಾರೆ. ಅಂತರ್ಜಾತಿ ವಿವಾಹಗಳು, ಸಾಮೂಹಿಕ ಮಠದ ಪೀಠಾಧಿಪತಿ ರೇವಣಸಿದ್ಧೇಶ್ವರ ಮಹಾರಾಜರ ನೇತೃತ್ವದಲ್ಲಿ ನಿರಂತರವಾಗಿ ನಡೆಯುತ್ತ ಬಂದಿವೆ. ಆಗಮಿಸಿದ ಪಾದಯಾತ್ರಿಕರಿಗೆ ಮಠದ ಶಿಷ್ಯರಾದ ಅಭಿನಂದನ ನವಲಗುಂದ, ಶಂಕರ ಓರಣಕರ ಹಾಗೂ ಆದಿತ್ಯ ಈಸರಗೊಂಡ ಎಲ್ಲರಿಗೂ ಅನ್ನ ಪ್ರಸಾದ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
    ಧಾರ್ಮಿಕ ಸಭೆಯಲ್ಲಿ ರೇವಣಸಿದ್ಧಪ್ಪ ನವಲಗುಂದ, ಶಂಕರ ಓರಣಕರ, ಶ್ರೀಶೈಲ ಗೌರಿಮಠ, ವಿನೋಬಾ ಓರಣಕರ, ಸಾವಿತ್ರಿ ಓರಣಕರ, ಕಮಲಾಬಾಯಿ ಓರಣಕರ, ಆದಿತ್ಯ ಈಸರಗೊಂಡ, ಸಾವಿತ್ರಿ ಓರಣಕರ, ರಮೇಶ ಓರಣಕರ, ಮೃತ್ಯುಂಜಯ ಮುರಗೋಡ, ತುಕಾರಾಮ ಓರಣಕರ, ಗೀತಾ ಓರಣಕರ, ಗುರು ಮುರಗೋಡ, ಗಣೇಶ ಅರಳಿಕಟ್ಟಿ, ರವೀಂದ್ರ ಓರಣಕರ, ಶಿರಾಜಅಹ್ಮದ ಮುಲ್ಲಾ, ಉಳವಪ್ಪ ಕೋಟೂರ, ಮಡಿವಾಳಪ್ಪ ಶಿಂದೋಗಿ, ಸೋಮನಿಂಗ ಛಬ್ಬಿ, ವಿನಾಯಕ ಯಲಿಗಾರ, ಕಲ್ಲಪ್ಪ ಮೆಟ್ಟಿನ ಸೇರಿದಂತೆ 50ಕ್ಕೂ ಅಧಿಕ ಪಾದಯಾತ್ರಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts