More

    ದುಷ್ಟತನ ಸಂಹಾರಕ್ಕೆ ಶ್ರೀರಾಮನ ಅವತಾರ

    ಎನ್.ಆರ್.ಪುರ: ಭಾರತಕ್ಕೆ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ಶ್ರೀರಾಮಚಂದ್ರನ ಆದರ್ಶ ಪ್ರೇರಣೆಯಾಗಿದೆ ಎಂದು ಪುತ್ತೂರಿನ ಅಂಬಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.

    ಇಲ್ಲಿನ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಅಯೋಧ್ಯೆಯಲ್ಲಿ ರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರೀರಾಮನ ಆದರ್ಶಗಳ ಬಗ್ಗೆ ಉಪನ್ಯಾಸ ನೀಡಿದರು.
    ಸಮಾಜದಲ್ಲಿ ಅನ್ಯಾಯ, ಕೆಟ್ಟದ್ದು ಹೆಚ್ಚಾಗಿ ವಿಜೃಂಭಿಸಿ ಒಳ್ಳೆಯದಕ್ಕೆ ಸವಾಲು ಉಂಟಾದಾಗ ಭಗವಂತ ಅವತಾರ ತಾಳುತ್ತಾನೆ. ಅದರಂತೆ ಭಗವಾನ್ ವಿಷ್ಣು ಮನುಕುಲದ ಏಳಿಗೆಗಾಗಿ ಅವತಾರ ತಾಳಿದ್ದು ಶ್ರೀರಾಮನ ರೂಪದಲ್ಲಿ. ರಾಮನೆಂಬುದು ಆದರ್ಶ, ಸಹಿಷ್ಣುತೆ, ಶ್ರದ್ಧೆ, ಶಕ್ತಿ, ಯುಕ್ತಿ, ಸ್ಥಿರ ಚಿತ್ತದ ಪ್ರತೀಕ ಎಂದು ಬಣ್ಣಿಸಿದರು.
    ರಾಮಾಯಣ ಮತ್ತು ರಾಮನ ಆದರ್ಶ ಸದಾಕಾಲ ಪ್ರೇರಣೆ ನೀಡುತ್ತದೆ. ರಾಮ ಮತ್ತು ಗುಹಾರ ಸ್ನೇಹ ಶ್ರೇಷ್ಠವಾದುದು. ಇದು ಮೊದಲ ಜಾತ್ಯತೀತ ತತ್ವಕ್ಕೆ ನಿದರ್ಶನ. ಕಷ್ಟ ಮತ್ತು ಸುಖದಲ್ಲಿ ಒಟ್ಟಾಗಿ ಬದುಕಬೇಕೆಂಬುದಕ್ಕೆ ರಾಮ ಮತ್ತು ಹನುಮಂತನ ಸ್ನೇಹ ಆದರ್ಶ. ಶಬರಿಯ ಭಕ್ತಿಗೆ ಒಲಿದಿದ್ದು ರಾಮ. ಶಬರಿಯಲ್ಲಿ ರಾಮ ತಾಯಿಯನ್ನು, ಶಬರಿ ರಾಮನಲ್ಲಿ ಮಗಗನ್ನು ಕಾಣುತ್ತಾರೆ ಎಂದರು.
    ನಿವೃತ್ತ ಕನ್ನಡ ಪಂಡಿತ ವಿ.ಎಸ್.ಕೃಷ್ಣ ಭಟ್ ಮಾತನಾಡಿ, ನನ್ನ ಗುರುಗಳು ಕಲಿತ ವಿದ್ಯೆಯನ್ನು ಶಿಷ್ಯರಿಗೆ ತಿಳಿಸು. ಬದುಕಿರುವವರೆಗೆ ಏನನ್ನಾದರೂ ಉದ್ಯೋಗ ಮಾಡುತ್ತಿರು ಎಂದು ಮಾರ್ಗದರ್ಶನ ಮಾಡಿದ್ದರು. ಅದರಂತೆ ಕಲಿತಿದ್ದ ವೇದಗಳನ್ನು ಶಿಷ್ಯರಿಗೆ ಹೇಳಿಕೊಡುವ ಕೆಲಸಮಾಡಿದೆ. ಮನೆಯಲ್ಲಿ, ಹಬ್ಬಹರಿದಿನಗಳ ಪೂಜೆ ಮಾಡುವ ವಿಧಾನಗಳ ವೇದ ವಿದ್ಯೆಯನ್ನು ಎರಡೂವರೆ ವರ್ಷಗಳ ಕಾಲ ಹೇಳಿಕೊಡಲಾಗಿದೆ. ಶಿಷ್ಯರು ಮಾಡಿರುವ ಸನ್ಮಾನವನ್ನು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
    ತಾಲೂಕು ಬ್ರಾಹ್ಮಣ ಸಮಾಜದ ರಾಜೇಂದ್ರಕುಮಾರ್, ಅನಂತಪದ್ಮನಾಭ, ಜೆ.ಜಿ.ಸದಾಶಿವ ಭಟ್, ಪ್ರಸನ್ನ ಐತಾಳ್, ಭಾಗ್ಯಾ ನಂಜುಂಡಸ್ವಾಮಿ, ಸುರೇಶ್, ಜಗದೀಶ್ ಭಟ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts