More

    ರಡ್ಡಿ ಸಮಾಜದ ಅಮೂಲ್ಯ ರತ್ನ ವೇಮನ

    ಚಿತ್ತಾಪುರ: `ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ’ ರಡ್ಡಿ ಸಮಾಜದ ಅಮೂಲ್ಯ ರತ್ನಗಳು ಎಂದು ವೀರಶೈವ ಸಮಾಜದ ಗೌರವಾಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ಹೇಳಿದರು.

    ಅಳೋಳ್ಳಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಚಾರಿಟೇಬಲ್ ಟ್ರಸ್ಟ್ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ವೇಮನ ಜಯಂತಿ ಉದ್ಘಾಟಿಸಿ ಮಾತನಾಡಿ, ರಡ್ಡಿ ದೊಡ್ಡ ಸಮಾಜವಾಗಿದ್ದು, ಮನೆ- ಮನೆಗಳಿಗೆ ತೆರಳಿ ವೇಮನ ಮತ್ತು ಹೇಮರಡ್ಡಿ ಮಲ್ಲಮ್ಮನ ಸಂದೇಶಗಳನ್ನು ತಿಳಿಸುವ ಕೆಲಸ ಆಗಬೇಕಿದೆ. ಅಲ್ಲದೆ ಎಲ್ಲರೂ ಸೇರಿ ಸಮಾಜದ ಸಂಘಟನೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

    ಸಮಾಜದ ತಾಲೂಕು ಅಧ್ಯಕ್ಷ ಭೀಮರೆಡ್ಡಿಗೌಡ ಕುರಾಳ ಮಾತನಾಡಿದರು.

    ಪ್ರಮುಖರಾದ ಸೋಮಶೇಖರ ಮೊಸೇನಿ, ರವಿ ಪಡ್ಲ, ಶ್ರೀಶೈಲರೆಡ್ಡಿ ಭಂಕಲಗಿ, ಗುರುಗೌಡ ಇಟಗಿ, ರಾಜಶೇಖರ ಮಾಲಿ ಪಾಟೀಲ್, ಅಯ್ಯಣಗೌಡ ಕರದಾಳ, ಸುಭಾಷ್ ಸ್ವಾಮಿ ತೊಟ್ನಳ್ಳಿ, ಶಿವಣ್ಣ ಹೂಗಾರ, ನಿಜಲಿಂಗಯ್ಯ ಸ್ವಾಮಿ, ಮಲ್ಲಿಕಾರ್ಜುನರೆಡ್ಡಿ ಇಜಾರ್, ಉಮಾರೆಡ್ಡಿಗೌಡ ಸೇಡಂ, ವಿಶ್ವರಾಧ್ಯ ಕರದಾಳ, ವೆಂಕಟರೆಡ್ಡಿ ಯರಗಲ್, ರವೀಂದ್ರರೆಡ್ಡಿ ಭಂಕಲಗಿ ಇತರರಿದ್ದರು. ಸಿದ್ದು ಮುಧೋಳ ಸ್ವಾಗತಿಸಿ ನಿರೂಪಣೆ ಮಾಡಿದರು. ಅಣ್ಣರಾಯ ಇವಣಿ ವಂದಿಸಿದರು.

    ಅಳ್ಳೋಳ್ಳಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ, ಕಲ್ಯಾಣ ಮಂಟಪ, ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಸಮಾಜದಿಂದ ಸಮಾಜಮುಖಿ ಕೆಲಸ ಮಾಡಲು ಹೇಮರಡ್ಡಿ ಮಲ್ಲಮ್ಮ ಚಾರಿಟೇಬಲ್ ಟ್ರಸ್ಟ್ನಿಂದ ೪ ಎಕರೆ ಭೂಮಿ ಖರೀದಿ ಮಾಡಲಾಗಿದೆ. ಶೀಘ್ರದಲ್ಲಿ ಎಲ್ಲ ಕೆಲಸ ಆರಂಭವಾಗಲಿವೆ.
    | ವೀರೇಂದ್ರಗೌಡ ಬಾಸರೆಡ್ಡಿ ಅಧ್ಯಕ್ಷ, ಹೇಮರಡ್ಡಿ ಮಲ್ಲಮ್ಮ ಚಾರಿಟೇಬಲ್ ಟ್ರಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts