More

    ಗರುಡಗಿರಿಯಲ್ಲಿ ಶ್ರೀ ಕೃಷ್ಣನ ದೇವಾಲಯ ಉದ್ಘಾಟನೆ

    ಗೋಣಕೊಪ್ಪ: ಕುಟ್ಟ ಭಾಗದ ಸುಂದರ ಪರಿಸರದ ನಡುವೆ ಅತಿ ಎತ್ತರದ ಗರುಡಗಿರಿಯಲ್ಲಿ ನಿರ್ಮಾಣವಾಗಿರುವ ಶ್ರೀ ಕೃಷ್ಣನ ದೇವಾಲಯ ಲೋಕಾರ್ಪಣೆಯಾಯಿತು.


    40 ವರ್ಷಗಳ ಇತಿಹಾಸವಿರುವ ಈ ದೇಗುಲ 3.60 ಕೋಟಿ ರೂ. ವೆಚ್ಚದಲ್ಲಿ ದಾನಿಗಳು, ಜನಪ್ರತಿನಿಧಿಗಳ ಸಹಕಾರದಿಂದ 1 ಎಕರೆ ವಿಸ್ತೀರ್ಣದಲ್ಲಿ ಶ್ರೀ ಕೃಷ್ಣನ ದೇವಾಲಯ ಮರು ನಿರ್ಮಾಣಗೊಂಡಿದೆ. ಇದೀಗ ಲೋಕಾರ್ಪಣೆಗೊಂಡಿದೆ. ದೇವಾಲಯ ಆವರಣದಲ್ಲಿ ನಮಸ್ಕಾರ ಮಂಟಪ, ನಾಗನಪ್ರತಿಷ್ಠೆ, ಗಣಪತಿ ಗುಡಿಗಳಿದ್ದು, ಲೋಕಾರ್ಪಣೆ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಹೋಮ-ಹವನ ಸೇರಿ ವಿವಿಧ ಪೂಜಾ ಕೈಂಕರ್ಯ ಜರುಗಿತು. ಸಹಸ್ರಾರು ಭಕ್ತರು ಆಗಮಿಸಿ ಶ್ರೀ ಕೃಷ್ಣನ ದರ್ಶನ ಪಡೆದರು. ದೇವಾಲಯ ಸಮಿತಿಯ ಅಧ್ಯಕ್ಷ ಚೆಕ್ಕೆರ ಜಫ್ಫ್ ಗಣಪತಿ, ಉಪಾಧ್ಯಕ್ಷರಾದ ತೀತಿರ ನರೇನ್ ಬಾಲಕೃಷ್ಣ, ಕಾರ್ಯದರ್ಶಿಗಳಾದ ಚೊಡುಮಾಡ ಶರೀನ್ ಸುಬ್ಬಯ್ಯ ಸೇರಿದಂತೆ ಸಮಿತಿ ಸದಸ್ಯರು ಭಾಗವಹಿಸಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts