More

    ಕೋವಿಡ್ ಸುರಕ್ಷಾ ಕ್ರಮ ಕೇಂದ್ರ ಉದ್ಘಾಟನೆ

    ನರಗುಂದ: ಕರೊನಾ 3ನೇ ಅಲೆ ನಿಯಂತ್ರಿಸಲು ಜಿಲ್ಲಾಡಳಿತದಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಯುಷ್ ಇಲಾಖೆಯಿಂದ ಎರಡು ಕೋವಿಡ್ ಸುರಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
    ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆಯಲ್ಲಿ ಆರಂಭಿಸಿರುವ ಕೋವಿಡ್ ಸುರಕ್ಷಾ ಕೇಂದ್ರದ ಉದ್ಘಾಟನೆ, ನರಗುಂದ ತಾಲೂಕು ಕಾರ್ಯನಿರತ ಪತ್ರಿಕಾ ವಿತರಕರು, ಆರೋಗ್ಯ ಇಲಾಖೆ ಡಿ ಗ್ರುಪ್ ನೌಕರರಿಗೆ ದಿನಸಿ ಕಿಟ್​ಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.
    ಮಳೆ, ಗಾಳಿ, ಬಿಸಿಲು, ಚಳಿ ಲೆಕ್ಕಿಸದೆ ಕೋವಿಡ್ ಸಂದರ್ಭದಲ್ಲಿ ಮನೆ ಮನೆಗೆ ದಿನಪತ್ರಿಕೆಗಳನ್ನು ತಲುಪಿಸುತ್ತಿರುವ ಪತ್ರಿಕಾ ವಿತರಕರ ಸೇವೆ ಶ್ಲಾಘನೀಯ. ಈ ಹಿಂದಿನ ಸರ್ಕಾರದಲ್ಲಿ ಪತ್ರಿಕಾ ವಿತರಕರಿಗೆ ನೀಡಿರುವ 2 ಕೋಟಿ ರೂಪಾಯಿ ಮೊತ್ತದ ಕ್ಷೇಮನಿಧಿ ಅನುದಾನವನ್ನು ಮಾಧ್ಯಮ ಅಕಾಡೆಮಿಗೆ ನೀಡಲಾಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿ ಪತ್ರಿಕಾ ವಿತರಕರ ಕಲ್ಯಾಣಕ್ಕಾಗಿ ನೇರವಾಗಿ ಅನುದಾನ ನೀಡುವಂತೆ ಸೂಚಿಸಲಾಗುವುದು. ನರರೋಗ ಚಿಕಿತ್ಸೆ ನೀಡುವ ಸಲುವಾಗಿ ನರಗುಂದ ತಾಲೂಕಾಸ್ಪತ್ರೆಗೆ 5 ಲಕ್ಷ ರೂಪಾಯಿ ವೆಚ್ಚದ ಸ್ಟೀಮರ್, ಸ್ಟ್ಯಾಂಡ್​ಗಳು ಸೇರಿದಂತೆ ವಿವಿಧ ಉಪಕರಣ ಬಂದಿವೆ. ಸದ್ಯದಲ್ಲಿಯೇ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ ಆರಂಭಿಸಲಾಗುವುದು ಎಂದರು.
    ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ ಮಾತನಾಡಿ, ಕರೊನಾ ತಡೆಗೆ ಮುಂಜಾಗ್ರತೆ ಕ್ರಮವಾಗಿ ಗದಗ ಜಿಲ್ಲೆಯ ಹುಲಕೋಟಿ, ನರಗುಂದ ಸರ್ಕಾರಿ ತಾಲೂಕಾಸ್ಪತ್ರೆಯಲ್ಲಿ ಎರಡು ಕೋವಿಡ್ ಸುರಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಗಜೇಂದ್ರಗಡದಲ್ಲಿ ಪ್ರಾರಂಭಿಸಲಾಗುವುದು. ಈ ಕೇಂದ್ರದಲ್ಲಿ ಪ್ರತಿಯೊಬ್ಬರಿಗೂ ನೋಂದಣಿ, ಪಲ್ಸ್ ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನರ್, ಕೌನ್ಸೆಲಿಂಗ್ ಬಳಿಕ ಆಯುರ್ವೆದ ಔಷಧ ನೀಡಲಾಗುತ್ತದೆ. ಹುಲಕೋಟಿಯಲ್ಲಿ 2300 ಜನರಿಗೆ ಚಿಕಿತ್ಸೆ ನೀಡಲಾಗಿದೆ. ನರಗುಂದದಲ್ಲಿ 3000 ಜನರಿಗೆ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ ಎಂದರು.
    ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಚನ್ನಯ್ಯ ಸಂಗಳಮಠ, ದೇವಣ್ಣ ಕಲಾಲ, ಚಂದ್ರಗೌಡ ಪಾಟೀಲ, ಮಹೇಶ ಬೋಳಶೆಟ್ಟಿ, ಎಚ್.ಎನ್. ಗೋಟುರ, ಸಿದ್ದಪ್ಪ ಯಲಿಗಾರ, ಉಮೇಶ ಯಳ್ಳೂರ, ಡಾ. ಪ್ರವೀಣ ಮೇಟಿ, ಡಾ. ಶಿವರಾಜ ಕೆ., ವೀರೇಶ ಗೌಡರ, ಜ್ಯೋತಿ ಗಾಂಜಿ, ಪಾಂಡುರಂಗ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಶಿವಾನಂದ ಮುತವಾಡ, ಮಹಮ್ಮದ್​ಗೌಸ್ ತಾಲೀಮನವರ, ನಾಗರಾಜ ನೆಗಳೂರ, ಸಂತೋಷ ಹಂಚಿನಾಳ, ಬಸವರಾಜ ಪಾಟೀಲ, ಪತ್ರಿಕಾ ವಿತರಕರ ಸಂಘದ ತಾಲೂಕಾಧ್ಯಕ್ಷ ಗುರುಪುತ್ರಯ್ಯ ಹಿರೇಮಠ, ಉಪಾಧ್ಯಕ್ಷ ಎಸ್.ಎಸ್. ಗಟ್ಟಿ, ಶಿವರಾಜ ನಾಗಠಾಣ, ಅಶೋಕ ಶೇಳಕೆ, ಬಸವರಾಜ ಶೇಳಕೆ, ಎಚ್.ಎಂ. ಹೊಸಮನಿ, ನಾಗಪ್ಪ ಮದಭಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts