More

    ಕಿನ್ನಿಗೋಳಿ ಯಕ್ಷಲಹರಿ ಯುಗಪುರುಷ ತಾಳಮದ್ದಳೆ ಸಪ್ತಾಹ ಉದ್ಘಾಟನೆ

    ಕಿನ್ನಿಗೋಳಿ: ಯಕ್ಷಗಾನದ ಮೂಲಕ ಪುರಾಣ ಕಥನಗಳನ್ನು ಜನರಿಗೆ ತಲುಪಿಸಿ ಜನರನ್ನು ಸಂಸ್ಕಾರಯುತರನ್ನಾಗಿ ಮಾಡುವ ಕಾರ್ಯ ಶ್ಲಾಘನೀಯ ಎಂದು ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ರಮೇಶ್ ಭಟ್ ಹೇಳಿದರು.


    ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗಪುರುಷದ ಸಹಯೋಗದೊಂದಿಗೆ ಯಕ್ಷಲಹರಿಯ 32 ವರ್ಷದ ಸಂಭ್ರಮ- 2022 ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಸಪ್ತಾಹ ‘ಏತದ್ಧಿ ರಾಮಾಯಣಂ’ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


    ಶ್ರೀಕ್ಷೇತ್ರ ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಸಪ್ತಾಹ ಉದ್ಘಾಟಿಸಿದರು. ಸುರತ್ಕಲ್ ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯ ಶಾಖಾ ಪ್ರಬಂಧಕ ಯಾಧವ ದೇವಾಡಿಗ ಸಂಸ್ಮರಣಾ ಭಾಷಣಗೈದರು. ಅತ್ತೂರುಬೈಲು ಶ್ರೀ ಮಹಾಗಣಪತಿ ಮಂದಿರದ ಅರ್ಚಕ ವೆಂಕಟರಾಜ ಉಡುಪ ಶುಭಾಶಂಸನೆಗೈದರು. ಕಲಾವಿದರ ನೆಲೆಯಲ್ಲಿ ಭಾಗವತ ಮತ್ತು ಸಂಘಟಕ ಸದಾನಂದ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

    ಉಡುಪಿ ಜಿಲ್ಲಾ ಲಯನ್ಸ್ ಉಪಗವರ್ನರ್ ಮಹಮ್ಮದ್ ಹನೀಫ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಗೌರವಾಧ್ಯಕ್ಷ ಶ್ರೀಪತಿ ಭಟ್ ಮೂಡುಬಿದಿರೆ, ಉದ್ಯಮಿ ಅನಂತಕೃಷ್ಣ ರಾವ್, ಕಿನ್ನಿಗೋಳಿ, ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ಸುಧೀರ್ ಕುಮಾರ್ ಎಂ., ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಕುಳಾಯಿ ಗುತ್ತು, ಉದ್ಯಮಿ ಲೋಕಯ್ಯ ಸಾಲ್ಯಾನ್ ಕೊಂಡೇಲ, ಶ್ರೀವತ್ಸ, ಅಶ್ವತ್ಥರಾವ್, ಉಮೇಶ್ ನೀಲಾವರ, ರಾಮ ಹೊಳ್ಳ, ವಿನಯಾಚಾರ್ , ಸುಧಾಕರ ಕುಲಾಲ್, ಶಶಿಧರ ರಾವ್ ಮತ್ತಿತತರು ಉಪಸ್ಥಿತರಿದ್ದರು. ಯಕ್ಷಲಹರಿ ಅಧ್ಯಕ್ಷ ಪಿ.ರಘುನಾಥ್ ಕಾಮತ್ ಸ್ವಾಗತಿಸಿದರು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ವಂದಿಸಿದರು. ವೇದವ್ಯಾಸ ರಾವ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts