More

    ನುಡಿದಂತೆ ನಡೆಯುತ್ತಿದೆ ರಾಜ್ಯ ಸರ್ಕಾರ

    ಆಳಂದ: ಆಡಳಿತದಲ್ಲಿ ಸುಧಾರಣೆ ತರುವುದರ ಜತೆಗೆ, ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

    ನಿರಗುಡಿಯಲ್ಲಿ ಆರ್‌ಎಂಎಸ್‌ಎ ಯೋಜನೆಯಡಿ ನಿರ್ಮಿಸಿದ ಸರ್ಕಾರಿ ಪ್ರೌಢಶಾಲೆ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ೫೮ ಸಾವಿರ ಕೋಟಿ ರೂ. ಬಡವರ ಮನೆ ಬಾಗಿಲಿಗೆ ಮುಟ್ಟಿಸುತ್ತಿದ್ದೇವೆ. ಇದನ್ನು ಸಹಿಸದ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ಯಾರು ಎಷ್ಟೇ ವಿರೋಧ ಮಾಡಿದರೂ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡುತ್ತೇವೆ, ಅಲ್ಲದೆ ಮಂದುವರಿಸಿಕೊAಡು ಹೋಗುತ್ತೇವೆ ಎಂದು ಭರವಸೆ ನೀಡಿದರು.

    ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ಈ ವರ್ಷವನ್ನು ಶೈಕ್ಷಣಿಕ ವರ್ಷವೆಂದು ಘೋಷಿಸಿ, ಹಲವಾರು ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದೇವೆ. ಕೆಕೆಆರ್‌ಡಿಬಿಯ ೩ ಸಾವಿರ ಕೋಟಿ ರೂ. ಅನುದಾನದಲ್ಲಿ ಶೇ.೨೫ ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ ಎಂದರು.

    ಶಾಸಕ ಬಿ.ಆರ್.ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್‌ಎಂಎಸ್‌ಎ ಯೋಜನೆಯಡಿ ೧.೩೬ ಕೋಟಿ ರೂ.ವೆಚ್ಚದಲ್ಲಿ ಸುಂದರ ಶಾಲೆ ನಿರ್ಮಿಸಿದ್ದು, ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು. ತಿಂಗಳಿಗೊಮ್ಮೆ ಸಭೆ ಸೇರಿ ಶಾಲೆ ಅಭಿವೃದ್ಧಿ, ಶಿಕ್ಷಣ ಸೇರಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು. ಕೇವಲ ಶಿಕ್ಷಕರನ್ನು ದೂರಿದರೆ ಸಾಲದು, ನಾವೆಲ್ಲರೂ ಉತ್ತಮ ಶಾಲೆ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು.

    ಶಾಸಕರಾದ ಎಂ.ವೈ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಕಾಂಬಳೆ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಎಸ್‌ಡಿಎಂಸಿ ಅಧ್ಯಕ್ಷ ಚನ್ನಪ್ಪ ನಾಗೂರೆ, ಪ್ರಮುಖರಾದ ಶಂಕರರಾವ ದೇಶಮುಖ, ಸಿದ್ದಣ್ಣ ದೇಶಮುಖ, ರಾಜು ಗಾಡೇಕರ, ಸಿದ್ದರಾಮ ಬೆಳಮಗಿ, ಅಪ್ಪಾಸಾಬ್ ದೇಶಮುಖ, ಆನಂದರಾವ ದೇಶಮುಖ, ಕೃಷ್ಣ ಇತರರಿದ್ದರು.

    ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಕ್ಷೇತ್ರದಲ್ಲಿ ೫೦ ಶಾಲೆಗಳನ್ನು ಮಾದರಿ ಸ್ಕೂಲ್‌ಗಳೆಂದು ಆಯ್ಕೆ ಮಾಡಿಕೊಂಡು, ಮೂಲ ಸೌಕರ್ಯ ಕಲ್ಪಿಸಲಾಗುವುದು. ನಮ್ಮ ಸರ್ಕಾರ ಅಧಿಕಾರದಲ್ಲಿರುವವರೆಗೂ ಈ ಭಾಗದ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ರಾಜ್ಯದಲ್ಲಿ ೫೦೦ ಸ್ಕೂಲ್‌ಗಳನ್ನು ಮಾದರಿ ಶಾಲೆಯನ್ನಾಗಿ ಮಾಡಲಾಗುತ್ತಿದ್ದು, ಇದರಲ್ಲಿ ಕಕ ಭಾಗದ ೨೦೦ ಶಾಲೆಗಳಿಗೆ ಆದ್ಯತೆ ನೀಡಲು ಮನವಿ ಮಾಡಲಾಗಿದೆ.
    | ಡಾ.ಅಜಯಸಿಂಗ್, ಕೆಕೆಆರ್‌ಡಿಬಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts