More

    ಏಳದೆ ಮಂದಾರ ರಾಮಾಯಣ ಸಪ್ತಾಹ ಉದ್ಘಾಟನೆ

    ಮೂಡುಬಿದಿರೆ: ಮನಸ್ಸಿನ ವಿಕಾರವನ್ನು ದೂರ ಮಾಡುವ ಶಕ್ತಿ ಮಂದಾರ ರಾಮಾಯಣಕ್ಕೆ ಇದೆ. ತುಳುನಾಡಿನ ಜೀವಕಳೆಯನ್ನು ಮಂದಾರ ಕೇಶವ ಭಟ್ಟರು ಮನೋಜ್ಞವಾಗಿ ಕಾವ್ಯದಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

    ತುಳುವರ್ಲ್ಡ್ ಮಂಗಳೂರು, ಧವಲತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ, ತುಳುಕೂಟ ಬೆದ್ರ ಹಾಗೂ ಮಂದಾರ ಪ್ರತಿಷ್ಠಾನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನದಲ್ಲಿ ನಡೆಯುವ ಏಳದೆ ಮಂದಾರ ರಾಮಾಯಣ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಆಶೀರ್ವಚನ ನೀಡಿದರು.

    ಕವಿಯ ಭಾಷಾ ಸೌದರ್ಯ, ವ್ಯಕ್ತಿತ್ವವನ್ನು ಗೌರವಿಸುವ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮಂದಾರ ಅಧ್ಯಯನ ಪೀಠವನ್ನು ಸರ್ಕಾರ ಸ್ಥಾಪಿಸುವಂತಾಗಲಿ ಎಂದರು.

    ಶಾಸಕ ಉಮಾನಾಥ ಕೋಟ್ಯಾನ್ ಸಪ್ತಾಹ ಉದ್ಘಾಟಿಸಿದರು. ಮಂದಾರ ರಾಮಾಯಣದ ಪ್ರಸಾರಕ್ಕೆ ಕೊಡುಗೆ ನೀಡಿದ ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಹಾಗೂ ಹಿರಿಯ ಪ್ರಕಾಶಕರಾದ ಭುವನಾಭಿರಾಮ ಉಡುಪ ಕಿನ್ನಿಗೋಳಿ ಅವರಿಗೆ ಮಂದಾರ್ ಸಮ್ಮಾನ್ ನೀಡಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿ ಸುನಿಧಿ ಚಿಂಚಲ್ಕರ್ ಅವರನ್ನು ಸನ್ಮಾನಿಸಲಾಯಿತು. ಮಂದಾರ ರಾಮಾಯಣ ಬಾಲಕಾಂಡದ ಪದ್ಯವನ್ನು ಅಮೃತಾ ಅಡಿಗ ಹಾಡಿದರು. ನಿವೃತ್ತ ಪ್ರಾಧ್ಯಾಪಕ ಭಾಸ್ಕರ್ ರೈ ಕುಕ್ಕುವಳ್ಳಿ ಅರ್ಥಗಾರಿಕೆ ಮಾಡಿದರು.

    ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುದೇಶ್ ಕುಮಾರ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ತುಳುಕೂಟ ಬೆದ್ರ ಅಧ್ಯಕ್ಷ ಧನಕೀರ್ತಿ ಬಲಿಪ, ಸ್ಥಾಪಕ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಮಂದಾರ ಪ್ರತಿಷ್ಠಾನದ ಉಪಾಧ್ಯಕ್ಷ ರಾಜೇಶ್ ಭಟ್ ಮಂದಾರ, ಕಾರ್ಯದರ್ಶಿ ಪ್ರಮೋದ್ ಸಪ್ರೆ, ತುಳುವರ್ಲ್ಡ್ ಅಧ್ಯಕ್ಷ ಡಾ.ರಾಜೇಶ್ ಆಳ್ವ ಬದಿಯಡ್ಕ, ಮಂದಾರ ಕೇಶವ ಭಟ್ಟರ ಮಗಳು ಶಾರದಾಮಣಿ ಉಪಸ್ಥಿತರಿದ್ದರು. ಕಸಾಪ ಮೂಡುಬಿದಿರೆ ತಾಲೂಕು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts