More

    ಕೃತಕ ಆಭರಣ ತಯಾರಿ ತರಬೇತಿ ಉದ್ಘಾಟನೆ

    ಮಂಗಳೂರು: ಬ್ಯಾಂಕ್ ಆಫ್ ಬರೋಡಾ ಪ್ರವರ್ತಿತ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಪ್ರಾಯೋಜಕತ್ವದಲ್ಲಿ ಎನ್‌ಆರ್‌ಎಲ್‌ಎಂ ತಾಲೂಕು ನಿರ್ವಹಣಾ ಅಭಿಯಾನ ಘಟಕದ ಮಾರ್ಗದರ್ಶನದೊಂದಿಗೆ ಸಂಜೀವಿನಿ ಸ್ವ ಸಹಾಯ ಒಕ್ಕೂಟದ ಸದಸ್ಯರಿಗೆ ಎಡಪದವು ಸ್ತ್ರೀಶಕ್ತಿ ಭವನದಲ್ಲಿ ಒಂದು ವಾರದ ಕೃತಕ ಆಭರಣ ತಯಾರಿ ತರಬೇತಿ ನಡೆಯಿತು.

    ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಜೀವನೋಪಾಯ ಇಲಾಖೆಯ ತಾಲೂಕು ವ್ಯವಸ್ಥಾಪಕ ಅಶೋಕ್ ತರಬೇತಿಯ ಮಹತ್ವ, ರೀತಿ, ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಸಿಬ್ಬಂದಿ ಪಂಡರಿನಾಥ್, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ದೇವಕಿ, ಕಾರ್ಯದರ್ಶಿ ಯಶೋದಾ, ಸಂಪನ್ಮೂಲ ವ್ಯಕ್ತಿ ಅಂಜನಾ ಉಪಸ್ಥಿತರಿದ್ದರು. ಒಕ್ಕೂಟದ ಮುಖ್ಯಪುಸ್ತಕ ಬರಹಗಾರರಾದ ದೀಪಾ ಕಾರ್ಯಕ್ರಮ ನಿರ್ವಹಿಸಿದರು. ಎಡಪದವು ಹಾಗೂ ಸುತ್ತಮುತ್ತಲಿನ ಪಂಚಾಯಿತಿ ವ್ಯಾಪ್ತಿಯ 30 ಮಹಿಳೆಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts