More

    ಡಾ.ರತ್ನಾಕರ್​ ಕಾಮಪುರಾಣ: 8 ಮಹಿಳೆಯರೊಂದಿಗೆ ಅನುಚಿತ ವರ್ತನೆ; ಶೀಘ್ರವೇ ಸಂತ್ರಸ್ತರ ಹೇಳಿಕೆ ದಾಖಲು

    ಮಂಗಳೂರು: ಆರೋಗ್ಯ ಇಲಾಖೆ ಅಧಿಕಾರಿಯ ಕಾಮಪುರಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಡಾ.ರತ್ನಾಕರ್​ ಮತ್ತು ಆತನ ಮೊಬೈಲನ್ನೂ ವಶಪಡಿಸಿಕೊಂಡಿರುವ ಮಂಗಳೂರು ಪೊಲೀಸರು, ಆಳವಾದ ತನಿಖೆ ಕೈಗೊಂಡಿದ್ದಾರೆ. ಎಂಟು ಜನ‌ ಮಹಿಳೆಯರ ಜೊತೆ ಈ ವೈದ್ಯ ಅನುಚಿತ ವರ್ತನೆ ಮಾಡಿರೋದು ಕಂಡು‌ಬಂದಿದ್ದು, ಸಂತ್ರಸ್ತರ ಹೇಳಿಕೆ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

    ಮಂಗಳೂರಿನ ಆಯುಷ್ಮಾನ್ ನೋಡೆಲ್ ಆಫೀಸರ್ ಹಾಗೂ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್ ವಿರುದ್ಧ ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದು, ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದ್ದು, ರತ್ನಾಕರ್​​ನನ್ನು, ಆತನ ಮೊಬೈಲನ್ನೂ ವಶಕ್ಕೆ ಪಡೆಯಲಾಗಿದೆ.

    ಇದನ್ನೂ ಓದಿ: ರಾಜ್ಯದ ಕೃಷಿ ಕಾಯ್ದೆಗಳ ರದ್ದು ಯಾವಾಗ? : ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ

    ಪ್ರಕರಣಕ್ಕೆ ಸಂಬಂಧಿಸಿದ ಪೂರಕ ದಾಖಲೆ ಸಂಗ್ರಹ ಮಾಡಿದ್ದೇವೆ. ಎಂಟು ಜನ‌ ಹೆಣ್ಣುಮಕ್ಕಳ ಜೊತೆ ವೈದ್ಯ ಅನುಚಿತ ವರ್ತನೆ ಮಾಡಿರೋದು ವಿಡಿಯೋ, ಫೋಟೋಗಳಲ್ಲಿ ಕಂಡು‌ಬಂದಿದೆ. ಈ ಸಂತ್ರಸ್ತ ಯುವತಿಯರು ಮತ್ತು ಮಹಿಳೆಯರಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ ಮಾಡಿದ್ದೇವೆ. ಸಂತ್ರಸ್ತರ ಹೇಳಿಕೆ, ಲಭ್ಯ ಮಾಹಿತಿ ಮತ್ತು ತನಿಖೆಯಲ್ಲಿ ಸಿಗುವ ಡಿಜಿಟಲ್-ಡಾಕ್ಯುಮೆಂಟ್ ಸಾಕ್ಷ್ಯ ಆಧರಿಸಿ ಅಗತ್ಯ ಕಾನೂನು ಕ್ರಮ‌ಕೈಗೊಳ್ಳುತ್ತೇವೆ ಎಂದು ಮಂಗಳೂರು ನಗರ ಪೊಲೀಸ್​ ಕಮಿಷನರ್​ ಎನ್​.ಶಶಿಕುಮಾರ್​ ಹೇಳಿದ್ದಾರೆ.

    121 ಕೋಟಿ ಡೋಸ್​ ಕರೊನಾ ಲಸಿಕೆ ವಿತರಣೆ; ಇನ್ನೂ ಹೋರಾಟ ಮುಗಿದಿಲ್ಲ ಎಂದ ಸರ್ಕಾರ

    ಫರ್ನಿಚರ್​ ಶಾಪಲ್ಲಿ ಧಗಧಗಿಸಿದ ಬೆಂಕಿಯ ಜ್ವಾಲೆ; ಲಕ್ಷಾಂತರ ಮೌಲ್ಯದ ವಸ್ತು ನಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts