More

    ರಾಜ್ಯದ ಯಾವೆಲ್ಲ ರೈಲು ನಿಲ್ದಾಣದಲ್ಲಿ ತೆರೆದಿವೆ ಟಿಕೆಟ್​ ರಿಸರ್ವೇಷನ್​ ಕೌಂಟರ್​?

    ನವದೆಹಲಿ: ದೇಶದಲ್ಲಿ ರೈಲು ಸಂಚಾರ ಲಾಕ್​ಡೌನ್​ ಪೂರ್ವದ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಕುರುಹು ದೊರೆಯುತ್ತಿರುವಂತೆ, ದೇಶಾದ್ಯಂತ ಆಯ್ದ ನಿಲ್ದಾಣಗಳಲ್ಲಿ ಟಿಕೆಟ್​ ಮುಂಗಡ ಕಾಯ್ದಿರಿಸುವಿಕೆ ಕೌಂಟರ್​ಗಳನ್ನು ತೆರೆಯಲು ಭಾರತೀಯ ರೈಲ್ವೆ ಮುಂದಾಗಿದೆ. ಶುಕ್ರವಾರದಿಂದ ಆರಂಭವಾಗಿ ಸದ್ಯ ಸಂಚಾರ ಆರಂಭಿಸಿರುವ ವಿಶೇಷ ರೈಲುಗಳು ಮತ್ತು ಜೂನ್​ 1ರಿಂದ ಸಂಚಾರ ಆರಂಭಿಸಲಿರುವ ರೈಲುಗಳ ಪ್ರಯಾಣಕ್ಕೆ ಮುಂಗಡವಾಗಿ ಟಿಕೆಟ್​ ಕಾಯ್ದಿರಿಸುವ ಕೌಂಟರ್​ಗಳನ್ನು ಹಂತ ಹಂತವಾಗಿ ಹೆಚ್ಚಿಸುವುದಾಗಿ ಭಾರತೀಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

    ಐಆರ್​ಸಿಟಿಸಿ ವೆಬ್​ಸೈಟ್​ ಮತ್ತು ಆ್ಯಪ್​ಗಳಲ್ಲಿ ಟಿಕೆಟ್​ ಮುಂಗಡ ಕಾಯ್ದಿರಿಸುವಿಕೆ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿತ್ತು. ಕೆಲವೇ ಗಂಟೆಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿತ್ತು. ಇದಲ್ಲದೆ, ರಿವರ್ಸ್​ ಬುಕ್ಕಿಂಗ್​ (ತಾವಿರುವ ಸ್ಥಳದಿಂದ ಕೆಲಸ ಮಾಡುವ ಸ್ಥಳಗಳಿಗೆ ಮರಳುವುದು) ಭರಾಟೆ ಕೂಡ ಹೆಚ್ಚಾಗಿತ್ತು.

    ರೈಲು ನಿಲ್ದಾಣಗಳ ಕೌಂಟರ್​ಗಳಲ್ಲದೆ, ವಿವಿಧ ನಗರಗಳಲ್ಲಿ ಇರುವ ಯಾತ್ರಿ ಟಿಕೆಟ್​ ಸುವಿಧಾ ಕೇಂದ್ರಗಳಲ್ಲಿ ಕೂಡ ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು, ಕ್ಯಾನ್ಸಲ್​ ಮಾಡಬಹುದಾಗಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
    ರಾಜ್ಯದಲ್ಲಿನ ಕೌಂಟರ್​ಗಳು: ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ (ಮೇ 22) ವಿವಿಧ ವಿಭಾಗಗಳ ಆಯ್ದ ರೈಲು ನಿಲ್ದಾಣಗಳಲ್ಲಿ ಟಿಕೆಟ್​ ಮುಂಗಡ ಕಾಯ್ದಿರಿಸುವಿಕೆ ಕೌಂಟರ್​ಗಳು ಕಾರ್ಯಾರಂಭಿಸಲಿವೆ.

    ಹುಬ್ಬಳ್ಳಿ ವಿಭಾಗದಲ್ಲಿ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ವಿಜಯಪುರ, ಧಾರವಾಡ, ಹೊಸಪೇಟೆ ಮತ್ತು ವಾಸ್ಕೋ ಡಾ ಗಾಮಾ ರೈಲು ನಿಲ್ದಾಣಗಳಲ್ಲಿ ಕೌಂಟರ್​ಗಳು ಕಾರ್ಯಾರಂಭಿಸಲಿವೆ.

    ಬೆಂಗಳೂರು ವಿಭಾಗದಲ್ಲಿ ಕೆಎಸ್​ಆರ್​ ಬೆಂಗಳೂರು, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್​, ಬಂಗಾರಪೇಟೆ, ಕೆಂಗೇರಿ, ಕೆ.ಆರ್​. ಪುರ ಮತ್ತು ಎಸ್​ಎಸ್​ಪಿ ನಿಲಯಂನಲ್ಲಿ ಕೌಂಟರ್​ಗಳು ತೆರೆಯಲಿವೆ.

    ಮೈಸೂರು ವಿಭಾಗದಲ್ಲಿ ಮೈಸೂರು, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಕೌಂಟರ್​ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts