More

    ಈ ಊರಲ್ಲಿ ಮನೆಗಿಂತ ಎತ್ತರದಲ್ಲಿದೆ ರಸ್ತೆ, ಯಜಿಡಿ ಲೈನ್

    ಬೀರೂರು: ಪುರಸಭೆ ವ್ಯಾಪ್ತಿಯಲ್ಲಿ 2015ರಲ್ಲಿ ಆರಂಭವಾದ ಯುಜಿಡಿ ಯೋಜನೆ ಪಟ್ಟಣದಲ್ಲಿ ಒಂದಲ್ಲ ಒಂದು ಅವಾಂತರ ಸೃಷ್ಟಿಸಿದ್ದು, ಒಂದೊಂದು ಭಾಗದಲ್ಲೂ ಒಂದೊಂದು ರೀತಿಯ ಸಮಸ್ಯೆ ತಂದೊಡ್ಡಿದೆ.
    ಕೆಲವು ಕಡೆ ಮ್ಯಾನ್‌ಹೋಲ್ ತುಂಬಿ ಹರಿದರೆ ಮತ್ತೊಂದು ಕಡೆ ಚೇಂಬರ್ ಕಳಪೆಯಾಗಿ ಕುಸಿದಿವೆ. ಇನ್ನೂ ಕೆಲವು ಭಾಗದಲ್ಲಿ ಸರಿಯಾದ ಪೈಪ್‌ಲೈನ್ ಸಂಪರ್ಕವಿಲ್ಲ. ಇನ್ನೂ ಕೆಲವೆಡೆ ಈ ರಸ್ತೆಯಲ್ಲಿ ಮನೆಗಳ ಮಟ್ಟಕ್ಕಿಂತ 2 ಅಡಿ ಎತ್ತರದಲ್ಲಿ ಯುಜಿಡಿ ಪೈಪ್‌ಲೈನ್‌ಗಳನ್ನು ಹಾಕಲಾಗಿದೆ. ಇದರಿಂದ ತಮ್ಮ ಮನೆಗಳಿಗೆ ಮಳೆ ಮತ್ತು ಕೊಳಚೆ ನೀರು ಹರಿಯುವ ಭೀತಿಯಲ್ಲಿದ್ದಾರೆ 5ನೇ ವಾರ್ಡ್‌ನ ಸರಸ್ವತಿಪುರಂ ಬಡಾವಣೆ ನಿವಾಸಿಗಳು.
    ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ 6 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ರಸ್ತೆಗಳು ಮನೆ ಮಟ್ಟಕ್ಕಿಂತ ಎರಡು ಅಡಿ ಎತ್ತರವಾಗುತ್ತಿವೆ. ಆದ್ದರಿಂದ ಆ ರಸ್ತೆಯಲ್ಲಿ ಹಾದುಹೋಗುವ ಯುಜಿಡಿ ಪೈಪನ್ನು ಕೆಳಗೆ ಹಾಕಿ ರಸ್ತೆ ನಿರ್ಮಿಸಬೇಕು ಎಂಬುದು ಇಲ್ಲಿನ ನಿವಾಸಿಗಳ ಒತ್ತಾಯವಾಗಿದೆ.
    ಬಡಾವಣೆಯ 1ನೇ ಕ್ರಾಸ್‌ನಲ್ಲಿ ರಸ್ತೆ ಮಟ್ಟಕ್ಕಿಂತ ತೀರ ಕೆಳಭಾಗದಲ್ಲಿ ಮನೆಯಿಂದ 2 ಅಡಿ ಎತ್ತರದಲ್ಲಿ ಯುಜಿಡಿ ಲೈನ್ ಹಾಕಲಾಗಿದೆ. ಅದರ ಮೇಲೆ ರಸ್ತೆ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ. ಅದೇ ಮಟ್ಟದಲ್ಲಿ ರಸ್ತೆ ನಿರ್ಮಾಣವಾದರೆ ಮಳೆ ನೀರು ಮತ್ತು ಚರಂಡಿ ನೀರು ಮನೆಗಳಿಗೆ ವಾಪಸ್ ನುಗ್ಗುವ ಆತಂಕ ಎದುರಾಗಿದೆ. ಈ ಬಗ್ಗೆ ಪುರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts