More

    ಟೀರ್ಮ್ ವರ್ಕ್‌ನಿಂದ ‘ಸರ್ಕಸ್’ಗೆಲುವು, ನಟ,ನಿರ್ದೇಶಕ ರೂಪೇಶ್ ಶೆಟ್ಟಿ ಅಭಿಪ್ರಾಯ

    ಮಂಗಳೂರು: ಸಿನಿಮಾ ಗೆದ್ದಿರುವುದು ಒಬ್ಬನಿಂದಲ್ಲ. ನನ್ನ ಇಡೀ ತಂಡ ಇದಕ್ಕಾಗಿ ರಾತ್ರಿ ಹಗಲು ದುಡಿದಿದೆ. ದೇಶ ವಿದೇಶಗಳಲ್ಲಿ ಸರ್ಕಸ್ ಸಿನಿಮಾ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ ಎಂದು ಚಿತ್ರದ ನಟ,ನಿರ್ದೇಶಕ ರೂಪೇಶ್ ಶೆಟ್ಟಿ ಹೇಳಿದರು.
    ಸರ್ಕಸ್ ತುಳು ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ಆಯೋಜಿಸಿದ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಅವರು ಚಿತ್ರದ ನಿರ್ಮಾಪಕರು ಹಾಕಿರುವ ಬಂಡವಾಳ ವಾಪಸ್ ಬಂದಿದೆ ಎಂದರು.
    ನಟ ಭೋಜರಾಜ್ ವಾಮಂಜೂರು ಮಾತನಾಡಿ‘ ಸರ್ಕಸ್ ಚಿತ್ರದ ಬಗ್ಗೆ ಮಾತಾಡಲು ಹೆಮ್ಮೆ ಎನಿಸುತ್ತಿದೆ. ತುಳುನಾಡು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿಯೂ ಸಿನಿಮಾ ಹೆಸರು ಮಾಡುತ್ತಿದೆ. ರೂಪೇಶ್ ಶೆಟ್ಟಿ ಟೀಮ್ ಮಾಡಿರುವ ನಿರಂತರ ಪ್ರಯತ್ನದ ಫಲವಾಗಿ ಸಿನಿಮಾ ಒಳ್ಳೆಯ ಹೆಸರು ಪಡೆದಿದೆ ಎಂದರು.
    ಚಿತ್ರಕ್ಕೆ ಸಂಭಾಷಣೆ ಬರೆದಿರುವ ಪ್ರಸನ್ನ ಶೆಟ್ಟಿ ಬೈಲೂರು, ನಟಿ ರಚನಾ ರೈ, ಪಂಚಮಿ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ನವೀನ್ ಶೆಟ್ಟಿ, ನಿರ್ಮಾಪಕ ಮಂಜುನಾಥ ಅತ್ತಾವರ, ಸಂಗೀತ ನಿರ್ದೇಶಕ ಲಾಯ್ ವೇಲೆಂಟೈನ್ ಡಿಸೋಜ, ವಿತರಣೆಗಾರ ಸಚಿನ್ ಎ.ಎಸ್.ಉಪಸ್ಥಿತರಿದ್ದರು.
    130 ಚಿತ್ರಮಂದಿಗಳಲ್ಲಿ ಪ್ರದರ್ಶನ
    ಸರ್ಕಸ್ ಇದುವರೆಗೆ 14 ದೇಶಗಳ ಸಹಿತ 130 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ. ಏಕಕಾಲದಲ್ಲಿ ದೇಶಾದ್ಯಂತ ಬಿಡುಗಡೆಯಾದ ಮೊದಲ ತುಳು ’ಪ್ಯಾನ್ ಇಂಡಿಯಾ’ ಚಿತ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಸರ್ಕಸ್ ಚಿತ್ರ ತಂಡದ ಶ್ರಮವನ್ನು ನೋಡಿ ಭಾರತ್ ಸಿನಿಮಾಸ್ ಕನ್ನಡ ಚಿತ್ರಗಳಿಗೆ ಸಿಗುವ ಆದಾಯದ ಶೇಕಡ ಮೊತ್ತವನ್ನೇ ಸರ್ಕಸ್‌ಗೆ ನೀಡಲು ನಿರ್ಧರಿಸಿದ್ದು, ಸರ್ಕಸ್ ತಂಡಕ್ಕೆ ದೊಡ್ಡ ಮಟ್ಟದ ಸಹಕಾರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts