More

  ಸಾರಿಗೆ ಸಂಸ್ಥೆ ಬಸ್‌ನಲ್ಲಿ 1.96 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇಟ್ಟಿದ್ದ ಬ್ಯಾಗ್ ಕಳ್ಳತನ

  ಶಿಗ್ಗಾಂವಿ: ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ 1.96 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇಟ್ಟಿದ್ದ ಬ್ಯಾಗ್‌ಅನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಗಂಜಿಗಟ್ಟಿ ಬಳಿ ಸೋಮವಾರ ನಡೆದಿದೆ.
  ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಅಣ್ಣಯ್ಯ ರಾಚಯ್ಯ ನಂದಯ್ಯನವರ (42) ಎಂಬುವರ ಬ್ಯಾಗ್ ಕಳ್ಳತನ ಆಗಿರುವುದು.
  ಇವರು ತಮ್ಮ ಗ್ರಾಮದಿಂದ ಶಿಗ್ಗಾಂವಿಗೆ ಬರುತ್ತಿದ್ದ ಸಮಯದಲ್ಲಿ ಬ್ಯಾಗ್‌ನಲ್ಲಿ 1.96 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇಟ್ಟುಕೊಂಡಿದ್ದರು. ದಾರಿ ಮಧ್ಯೆ ಯಾರೋ ಬ್ಯಾಗ್ ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts