More

    ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ

    ನಿಪ್ಪಾಣಿ: ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

    ಸ್ಥಳೀಯ ಮುನ್ಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಜೊಲ್ಲೆ ಗ್ರೂಪ್‌ದಿಂದ ಜರುಗಿದ ಎಂಪಿ ಟ್ರೋಫಿ ಕಬಡ್ಡಿ ಟೂರ್ನಿಯ ಎರಡನೇ ದಿನ ಭಾನುವಾರ ಮಾತನಾಡಿದರು. ದೇಶವು ಅಧ್ಯಾತ್ಮ, ಕ್ರೀಡೆ, ಸಂಸ್ಕಾರ, ಸಂಸ್ಕೃತಿಯಲ್ಲಿ ಎಲ್ಲಕ್ಕಿಂತಲೂ ಮುಂದಿದೆ ಎಂದರು.

    ಜೊಲ್ಲೆ ಗ್ರೂಪ್ ಅಡಿಯಲ್ಲಿ ಜ.23 ಮತ್ತು 24ರಂದು ಅಂತಾರಾಷ್ಟ್ರೀಯಮಟ್ಟದ ಗಾಳಿಪಟ ಮಹೋತ್ಸವ ಆಯೋಜಿಸಲಾಗುವುದು ಎಂದರು. 21 ಆಟಗಳನ್ನೊಳಗೊಂಡ ವಿಶೇಷ ಒಲಿಂಪಿಕ್ಸ್ ಕರ್ನಾಟಕ ಅಧ್ಯಕ್ಷರಾದ ನಂತರ ಮೂರೇ ತಿಂಗಳಲ್ಲಿ ವಿಶೇಷ ಶಾಲೆಗಳಲ್ಲಿನ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ಆರಂಭಿಸಲಾಗಿದೆ. ಇಲ್ಲಿಯವರೆಗೆ 17 ಜಿಲ್ಲೆಗಳಲ್ಲಿ ವಿಶೇಷ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಮಾರ್ಚ್‌ನಲ್ಲಿ ರಾಜ್ಯಮಟ್ಟದ ಕ್ರೀಡೆಗಳನ್ನು ಆಯೋಜಿಸಲಾಗುವುದು. ವಿಜೇತರು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಆಡುವರು. ರಾಷ್ಟ್ರಮಟ್ಟದ ವಿಜೇತರು 2027ರಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಲಿರುವ ಸ್ಪರ್ಧೆಯಲ್ಲಿ ಭಾಗವಹಿಸುವರು ಎಂದರು.

    ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ರಾಜೇಂದ್ರ ಗುಂದೇಶಾ, ರಾವಸಾಹೇಬ ಫರಾಳೆ, ಪ್ರಕಾಶ ಶಿಂಧೆ, ಮಧುಕರ ಫಾಟೀಲ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ಎಂ.ಕೆ. ಶಿರಗುಪ್ಪೆ, ನಗರಸಭೆ ಸದಸ್ಯರು ಇತರರಿದ್ದರು.

    ಫಲಿತಾಂಶ: ಪುರುಷರ ವಿಭಾಗದಲ್ಲಿ ತಾಲೂಕಿನ ಗಳತಗಾ ಗ್ರಾಮದ ವಾನರ ಸೇನಾ ತಂಡ ಚಾಂಪಿಯನ್ ಆಗಿ 21 ಸಾವಿರ ರೂ. ನಗದು ಬಹುಮಾನ ಪಡೆಯಿತು. ಕಾರದಗಾ ಗ್ರಾಮದ ಯುವಕ ಸಂಘ ದ್ವಿತೀಯ ಸ್ಥಾನ ಗಳಿಸಿ 15 ಸಾವಿರ ರೂ. ನಗದು ಬಹುಮಾನ ಪಡೆಯಿತು
    ಸೆಮಿಫೈನಲ್‌ನಲ್ಲಿ ವಾನರ ಸೇನಾ ತಂಡ ಢೋಣೆವಾಡಿಯ ಮಾವಳಾ ತಂಡವನ್ನು ಹಾಗೂ ಯುವಕ ಸಂಘ ಅಕ್ಕೋಳ ಗ್ರಾಮದ ಬಜರಂಗ ತಾಲೀಮು ತಂಡವನ್ನು ಸೋಲಿಸಿತು.

    ಗೆದ್ದ ತಂಡ ಟೂರ್ನಿಯಿಂದ ಔಟ್: ಮಹಿಳೆಯರ ವಿಭಾಗದ ಅಂತಿಮ ಪಂದ್ಯದಲ್ಲಿ ಬೇಡಕಿಹಾಳದ ಸಿದ್ಧೇಶ್ವರ ತಂಡವು ಗೆದ್ದು ಪ್ರಥಮ ಸ್ಥಾನ ಪಡೆದಿತ್ತು. ಆದರೆ, ತಂಡದಲ್ಲಿ ಇತರ ರಾಜ್ಯದ ಮೂವರು ಪಟುಗಳು ಆಡಿದ ಪರಿಣಾಮ ಆ ತಂಡಕ್ಕೆ ನಿಷೇಧ ಹೇರಲಾಯಿತು. ಪರಿಣಾಮವಾಗಿ ಅಂತಿಮ ಪಂದ್ಯದಲ್ಲಿ ಸೋತಿದ್ದ ಸ್ಥಳೀಯ ಶಿವಶಕ್ತಿ ತಂಡವನ್ನು ವಿಜೇತವೆಂದು ಘೋಷಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts