More

    ಸತ್ತಿಗೇರಿಯಲ್ಲಿ ವಸತಿ ಶಾಲೆ ಶೀಘ್ರ ನಿರ್ಮಾಣ

    ಯರಗಟ್ಟಿ: ಶಿಕ್ಷಣ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಕೊಡುಗೆ ಅಪಾರವಾಗಿದೆ. ಆದ್ದರಿಂದ ಇಂದು ಗ್ರಾಮೀಣ ಭಾಗದ ಪ್ರತಿ ಮಕ್ಕಳಿಗೂ ಸರ್ವ ಶಿಕ್ಷಣ ಅಭಿಯಾನದಡಿ ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ದೊರೆಯುತ್ತಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದ್ದಾರೆ.

    ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ, ಟಿಂಕ್‌ರಿಂಗ್ ಲ್ಯಾಬ್‌ಅನ್ನು ಸೋಮವಾರ ಉದ್ಘಾಟಸಿ ಮಾತನಾಡಿ, ಶಾಲೆಯು ಅಗತ್ಯ ಸೌಲಭ್ಯ ಹೊಂದುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಈಗಾಗಲೇ ಶಾಲೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಮಂಜೂರಾಗಿದೆ. ಸರ್ಕಾರದಿಂದ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ರಾಜ್ಯದಲ್ಲಿ ಮಾದರಿ ಶಾಲೆ ಮಾಡಲು ಪ್ರಯತ್ನಿಸಲಾಗುವುದು. ಸತ್ತಿಗೇರಿಯಲ್ಲಿ ವಸತಿ ಶಾಲೆ ಪ್ರಾರಂಭಿಸಿ ಈ ಭಾಗದ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

    ಹಿರೇಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಜಿಪಂ ಸದಸ್ಯ ಅಜಿತಕುಮಾರ ದೇಸಾಯಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ ಶಿಂಥ್ರಿ, ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಬಸನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಗೌಡಪ್ಪ ಸವದತ್ತಿ, ದೇಸಾಯಿಗೌಡ ಪಾಟೀಲ, ಮಹಾಂತೇಶ ಗೋಡಿ, ಮಕ್ತುಂಸಾಬ್ ಬಾಗವಾನ, ಸುಧೀರ ಗೋಡಿ, ಎಸ್.ಪಿ.ಕರಿಲಿಂಗಪ್ಪನವರ, ವಿಠ್ಠಲ ದಳವಾಯಿ, ಎಂ.ಬಿ.ಸರಣ್ಣವರ, ಎಸ್.ಆರ್.ತೋಟಗಿ ಇದ್ದರು.

    ಮುನವಳ್ಳಿ ವರದಿ: ಪಟ್ಟಣದ ವಿಠ್ಠಲ ಮಂದಿರದಲ್ಲಿ ಶಾಸಕರ ಅನುದಾನದಡಿ ನಿರ್ಮಿಸಲಾದ ಸಮುದಾಯ ಭವನದ ಉದ್ಘಾಟನೆ ಸಮಾರಂಭ ಜರುಗಿರು. ಶಾಸಕ ಆನಂದ ಮಾಮನಿ ಮಾತನಾಡಿ, ವಾರಕರಿ ಸಂತ ಮಂಡಳಿಯವರ ಭಕ್ತಿ ಮತ್ತು ಭಾವ ಅನನ್ಯ. ಸನಾತನ ಸಂಸ್ಕೃತಿ ಹಾಗೂ ಪರಂಪರೆ ಉಳಿಸಿ, ಬೆಳೆಸುವಲ್ಲಿ ಈ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಕ್ತಾನಂದ ಶ್ರೀ, ರಮೇಶ ಗೋಮಾಡಿ, ಪುರಸಭೆ ಅಧ್ಯಕ್ಷ ವಿಜಯ ಅಮಠೆ, ನಿಂಗನಗೌಡ ಮಲಗೌಡ್ರ, ಸೋಮಶೇಖರ ಯಲಿಗಾರ, ಶ್ರೀಕಾಂತ ಮೀರಜಕರ, ಅಪ್ಪು ಅಮಠೆ, ಅಶೋಕ ರೇಣಕೆ, ಸುಧಾಕರ ರೇಣಕೆ, ಜ್ಞಾನೇಶ್ವರ ತೇಲಕರ, ಅಂಗದ ರೇಣಕೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts