More

    ರಾಜಸ್ಥಾನದಲ್ಲಿ ಅಧಿಕಾರ ಹಿಡಿಯುವ ಬಿಜೆಪಿ ಹಾದಿ ಬಹಳ ಕಷ್ಟ, ಕಷ್ಟ

    ನವದೆಹಲಿ: ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಪಕ್ಷದಿಂದ ಆಡಳಿತವನ್ನು ಸುಲಭವಾಗಿ ಕಿತ್ತುಕೊಂಡ ರೀತಿಯಲ್ಲಿ ರಾಜಸ್ಥಾನದಲ್ಲಿ ಅಧಿಕಾರ ಕಿತ್ತುಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ ಎಂಬ ಮಾತು ದಟ್ಟವಾಗಿದೆ. ರಾಜಸ್ಥಾನದ ವಿಧಾನಸಭೆಯ ಬಲಾಬಲದ ಅಂಕಿಸಂಖ್ಯೆಗಳು ಇದನ್ನು ಖಚಿತಪಡಿಸುತ್ತವೆ.

    ಈ ರಾಜ್ಯದಲ್ಲಿ ಬಹುಮತಕ್ಕೆ ಕನಿಷ್ಠ 101 ಶಾಸಕರ ಬೆಂಬಲ ಅವಶ್ಯಕತೆ ಇದೆ. ಆದರೆ, ಈ ಬಾರಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಕೇವಲ 75 ಸ್ಥಾನ ಗೆದ್ದುಕೊಂಡಿವೆ. ಕನಿಷ್ಠ ಬಹುಮತಕ್ಕೆ ಅಗತ್ಯವಾದ 26 ಶಾಸಕರ ಬೆಂಬಲ ಗಳಿಸುವುದು ಬಿಜೆಪಿಗೆ ಅಷ್ಟು ಸುಲಭದ ಮಾತಲ್ಲ ಎಂದು ಹೇಳಲಾಗುತ್ತಿದೆ.
    ಇದೀಗ ಸಿಎಂ ಅಶೋಕ್​ ಗೆಹ್ಲೋಟ್​ ವಿರುದ್ಧ ತಿರುಗಿಬಿದ್ದಿರುವ ಡಿಸಿಎಂ ಸಚಿನ್​ ಪೈಲಟ್​ ತಮಗೆ 30 ಶಾಸಕರ ಬೆಂಬಲ ಇರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಸಂಖ್ಯೆಯ ಬಗ್ಗೆ ಗೊಂದಲ ಮುಂದುವರಿದಿದೆ. ಬಿಜೆಪಿಯ ಪಾಲಿಗೆ ಇದು ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ.

    ರಾಜಕೀಯ ಮುತ್ಸದ್ಧಿ ಎನಿಸಿಕೊಂಡಿರುವ ಅಶೋಕ್​ ಗೆಹ್ಲೋಟ್​ ಮುಖ್ಯಮಂತ್ರಿಯಾದ ನಂತರದಲ್ಲಿ ತಮಗಿದ್ದ ಅತ್ಯಲ್ಪ ಬಹುಮತವನ್ನು ಹಿಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಜೈ ಜವಾನ್​ ಜೈ ಕಿಸಾನ್​ ಎಂದು ಕೃಷಿಯಲ್ಲಿ ತೊಡಗಿಸಿಕೊಂಡ ಸಲ್ಮಾನ್​

    ಚುನಾವಣೆ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಕಾಂಗ್ರೆಸ್​ಗೂ ಬಹುಮತದ ಕೊರತೆ ಇತ್ತು. ಹಾಗಾಗಿ ಮಾಯಾವತಿ ಅವರ ಬಿಎಸ್​ಪಿ ಅನ್ನೇ ತಮ್ಮ ಪಕ್ಷದಲ್ಲಿ ವಿಲೀನಗೊಳಿಸುವಂತೆ ಮಾಡಿ, ತಮ್ಮ ಬಹುಮತವನ್ನು ಹಿಗ್ಗಿಸಿಕೊಂಡರು. ಕಾಂಗ್ರೆಸ್​ನ 107 ಶಾಸಕರ ಜತೆಗೆ ಈಗ 13 ಮಂದಿ ಪಕ್ಷೇತರ ಶಾಸಕರು, ಭಾರತೀಯ ಟ್ರೈಬಲ್​ ಪಾರ್ಟಿಯ ಇಬ್ಬರು ಮತ್ತು ಆರ್​ಎಲ್​ಡಿಯ ಒಬ್ಬ ಶಾಸಕರ ಬೆಂಬಲವೂ ಇದೆ. ಇದರಿಂದಾಗಿ ಅವರು ತಮ್ಮ ಸರ್ಕಾರವನ್ನು ಸುಭದ್ರಗೊಳಿಸಿಕೊಂಡಿದ್ದಾರೆ. ಗೆಹ್ಲೋಟ್​ ನೇತೃತ್ವದ ಸರ್ಕಾರಕ್ಕೆ ಸಂಕಷ್ಟ ಬಂದೊದುಗುತ್ತದೆ ಎನ್ನುವುದಾದರೆ, ಸಿಪಿಎಂನ ಇಬ್ಬರು ಶಾಸಕರ ಬೆಂಬಲವೂ ಗೆಹ್ಲೋಟ್​ಗೆ ದೊರೆಯಲಿದೆ.

    ಆದ್ದರಿಂದ, ಸಚಿನ್​ ಪೈಲಟ್​ ಎಷ್ಟು ಶಾಸಕರನ್ನು ಸೆಳೆದು ತರಲಿದ್ದಾರೆ, ವಸುಂಧರ ರಾಜೆ ಅಂಥ ಪ್ರಭಾವಿ ನಾಯಕರು ಇರುವಾಗ ಪೈಲಟ್​ಗೆ ಸಿಎಂ ಸ್ಥಾನವನ್ನು ಕೊಡಲು ಸಾಧ್ಯವೆ ಎಂಬೆಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳದ ಹೊರತು ಬಿಜೆಪಿಗೆ ಅಧಿಕಾರ ದಕ್ಕುವುದು ಕಷ್ಟ ಕಷ್ಟ ಎನ್ನಲಾಗುತ್ತಿದೆ.

    ಕೋವಿಡ್​ ಪಾರ್ಟಿ ಅಟೆಂಡ್ ಮಾಡಿ ನಾನು ತಪ್ಪೆಸಗಿದೆ – ಡೆತ್​ ಬೆಡ್​ನಲ್ಲಿ ಯುವಕನ ಕೊನೇ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts