More

    ಜೈಪುರದಲ್ಲಿ ಡ್ರೋನ್​​​​ ಮೂಲಕ ಮಿಡತೆ ಸಂಹಾರ

    ಜೈಪುರ: ಮಧ್ಯರಾತ್ರಿಯಲ್ಲಿ ಡ್ರೋನ್​​​​ ಮೂಲಕ ಕೀಟ ನಾಶಕ ಸಿಂಪಡಿಸಿ ಮಿಡತೆಗಳ ಬೃಹತ್​ ಹಿಂಡನ್ನು ಅಧಿಕಾರಿಗಳು ನಾಶ ಮಾಡಿದ್ದಾರೆ.

    ವಿರಾಟ್​ನಗರದ ಗುಡ್ಡಗಾಡು ಪ್ರದೇಶದಲ್ಲಿ ಶನಿವಾರ ರಾತ್ರಿ ಡ್ರೋನ್​​​​ ಮೂಲಕ ಮಿಡತೆಗಳನ್ನು ನಾಶ ಮಾಡಲಾಯಿತು. ಗುಡ್ಡಗಾಡು ಪ್ರದೇಶವಾದ್ದರಿಂದ ಟ್ರ್ಯಾಕ್ಟರ್​ ಮೂಲಕ ಕ್ರೀಮಿನಾಶ ಸಿಂಪಡಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಡ್ರೋಣ್​ ಬಳಸಬೇಕಾಯಿತು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ  ಕಾಲ್ನಡಿಗೆ, ಬಸ್​, ರೈಲು ಹಿಡಿದು ಊರಿಗೆ ಬಂದಾಯ್ತು…., ಮುಂದೇನು?

    ವಿರಾಟ್​ನಗರದ ಮೂರು ಹಳ್ಳಿಗಳ 230 ಹೆಕ್ಟೇರ್​ ಪ್ರದೇಶದಲ್ಲಿ ಮಿಡತೆಗಳು ಇರುವುದು ಪತ್ತೆಯಾಯಿತು. ಈ ಪ್ರದೇಶ ಗುಡ್ಡವಾಗಿರುವುದರಿಂದ ಅಲ್ಲಿ ಕ್ರಿಮಿನಾಶಕ ಸಿಂಪಡಣೆ ಕಷ್ಟವಾಯಿತು. ಹೀಗಾಗಿ ಡ್ರೋನ್​​​​ ಬಳಸಲಾಗಿದೆ ಎಂದು ಜೈಪುರದ ಕೃಷಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

    230 ಹೆಕ್ಟೇರ್​ ಪ್ರದೇಶದಲ್ಲಿ ಕೇವಲ 103 ಹೆಕ್ಟೇರ್​ ಪ್ರದೇಶದಲ್ಲಿ ಮಾತ್ರ ಕ್ರಿಮಿನಾಶಕ ಸಿಂಪಡಿಸಲಾಗಿದೆ.ಇದಕ್ಕಾಗಿ 50 ಲೀಟರ್​ ಕ್ರಿಮಿನಾಶಕ ಬಳಸಲಾಗಿದೆ. ಇದರಿಂದ ಶೇ.50 ರಷ್ಟು ಮಿಡತೆಗಳು ನಾಶವಾಗಿವೆ. ಈ ಪ್ರದೇಶದಲ್ಲಿ ಈಗಾಗಲೇ 2 ಬಾರಿ ಡ್ರೋನ್​​​​ ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಮಿಡತೆಗಳನ್ನು ಸಂಪೂರ್ಣವಾಗಿ ನಾಶ ಮಾಡುವವವರೆಗೂ ಕಾರ್ಯಾಚರಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

    ಇದನ್ನೂ ಓದಿ ಕ್ರೇಜಿಸ್ಟಾರ್ ರವಿಚಂದ್ರನ್​ ಹೆಸರಿನಲ್ಲಿ ನಕಲಿ ಟ್ವಿಟರ್​ ಖಾತೆ!

    26 ವರ್ಷಗಳ ನಂತರ ಜೈಪುರದಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ, ರಾಜಸ್ತಾನದ 12 ಜಿಲ್ಲೆಗಳ 6.70 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಯನ್ನು ನಾಶ ಮಾಡಿವೆ. ಇದರಿಂದ ಅಂದಾಜು ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕರೊನಾದ ಮತ್ತೊಂದು ತಲೆನೋವು: ಲಕ್ಷಣಗಳೇ ಇಲ್ಲದ ಶೇ.28 ಮಂದಿಗೆ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts