More

    ಜನವರಿಯಲ್ಲಿ ಕಬಡ್ಡಿ ಪಂದ್ಯಾವಳಿ

    ಹುಕ್ಕೇರಿ: ಪಟ್ಟಣದ ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ 2024ರ ಜನವರಿ 3 ಮತ್ತು 4ರಂದು ಹುಕ್ಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಜ್ವಲ ನಿಲಜಗಿ ಹೇಳಿದರು.

    ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಂದ್ಯಾವಳಿ ನಡೆಸುತ್ತಿದ್ದು, ಇದರಲ್ಲಿ ಗೆಲ್ಲುವ ಮೊದಲ ನಾಲ್ಕು ತಂಡ ಚಿಕ್ಕೋಡಿ ಜಿಲ್ಲಾಮಟ್ಟಕ್ಕೆ ಅರ್ಹತೆ ಪಡೆಯುತ್ತವೆ ಎಂದರು.

    ಈಗಾಗಲೇ ಕೆಲ ವಿಧಾನಸಭಾ ಕ್ಷೇತ್ರದಲ್ಲಿ 60ಕ್ಕೂ ಹೆಚ್ಚು ಪುರುಷ ಮತ್ತು 12ಕ್ಕೂ ಹೆಚ್ಚು ಮಹಿಳಾ ತಂಡಗಳು ನೋಂದಾಯಿಸಿಕೊಂಡಿವೆ. ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಎಲ್ಲ ಕಬಡ್ಡಿ ಪಟುಗಳೂ ಪಾಲ್ಗೊಳ್ಳುವಂತೆ ಮಾಡಲು ಮುಖಂಡರು, ಕಾರ್ಯಕರ್ತರು ಶ್ರಮಿಸುವುದಾಗಿ ತಿಳಿಸಿದರು.

    ಪುರಸಭೆ ಸದಸ್ಯ ಭೀಮಶಿ ಗೋರಖನಾಥ ಮಾತನಾಡಿ, ಕಬಡ್ಡಿ ಸಂಪೂರ್ಣ ದೈಹಿಕ ಕ್ಷಮತೆಗೆ ಸಹಕಾರಿಯಾಗಿದೆ. ಅದಕ್ಕಾಗಿ ಇಂತಹ ಕ್ರೀಡೆಯನ್ನು ಹೆಚ್ಚು ಜನಪ್ರಿಯತೆಗೊಳಿಸಲು ಪ್ರಯತ್ನಿಸೋಣ ಎಂದರು. ಧುರೀಣ ಮಹಾವೀರ ಭಾಗಿ ಮಾತನಾಡಿ, ಕ್ರೀಡಾಪಟುಗಳಿಗೆ ಊಟೋಪಚಾರ ವ್ಯವಸ್ಥೆ ಇದ್ದು, ಮಾಹಿತಿಗಾಗಿ ಮೊ. 7625069523, 7259024755, 9606914649ಗೆ ಸಂಪರ್ಕಿಸಲು ತಿಳಿಸಿದರು.

    ಮುಖಂಡರಾದ ಪರಗೌಡ ಪಾಟೀಲ, ಪಿಂಟು ಶೆಟ್ಟಿ, ರಾಜು ಮುನ್ನೋಳಿ, ಮಧುಕರ ಕರನಿಂಗ, ಸಿದ್ದಪ್ಪ ಹಳಿಜೋಳ, ಎಸ್.ಎಂ.ಕಾನಡೆ, ಕಬಡ್ಡಿ ಅಮೆಚೂರ್ ಸದಸ್ಯ ಕುರಬೇಟ ಮತ್ತಿತರರಿದ್ದರು. ಜ್ಯೋತಿ ಸೌಹಾರ್ದ ಪ್ರಧಾನ ವ್ಯವಸ್ಥಾಪಕ ವಿಜಯ ಖಡಕಭಾಂವಿ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿದರು. ಚಿದಾನಂದ ಕಿಲ್ಲೇದಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts