More

    ಪ್ರಜಾಪ್ರಭುತ್ವದಲ್ಲಿ ಮತದಾನ ಪವಿತ್ರ ಕಾರ್ಯ

    ಬೆಳಗಾವಿ: ಪ್ರಜಾಪ್ರಭುತ್ವದಲ್ಲಿ ಮತದಾನ ಪವಿತ್ರ ಕಾರ್ಯವಾಗಿದೆ. ಯಾವ ವ್ಯಕ್ತಿ ನ್ಯಾಯ-ನೀತಿ, ಧರ್ಮ, ಸತ್ಯದಿಂದ ಸಮಾಜ, ರಾಷ್ಟ್ರಕ್ಕಾಗಿ ಬದುಕನ್ನು ಸಮರ್ಪಿಸುತ್ತಾನೋ ಅಂತಹ ವ್ಯಕ್ತಿಗೆ ಮತ ಹಾಕಿ ಸಮಾಜ ಸೇವೆಗೆ ಅನಿಗೊಳಿಸುವ ಕಾರ್ಯ ಎಲ್ಲರದ್ದಾಗಿದೆ ಎಂದು ವಿಧಾನ ಪರಿಷತ್ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

    ನಗರದ ಲಿಂಗರಾಜ ಕಾಲೇಜು ಹಾಗೂ ಆರ್‌ಎಲ್ ವಿಜ್ಞಾನ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದರು. ಎಲ್ಲ ಪ್ರಜೆಗಳು ಮತದಾನ ಮಾಡಿ, ಒಳ್ಳೆಯ ನಾಯಕನನ್ನು ಆರಿಸಬೇಕು ಎಂದರು.

    ಮತದಾನ ಸುಲಭವಾಗಿ ದೊರೆತಿಲ್ಲ. ಭಾರತ ಪರಕೀಯರ ಬಂಧನದಿಂದ ಮುಕ್ತವಾಗಿ ತನ್ನದೆ ಸಂವಿಧಾನ ಸಿದ್ಧಪಡಿಸಿಕೊಂಡು ಮತದಾನದ ಮೂಲಕ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಪಡೆದಿದ್ದು ವಿಶ್ವದಲ್ಲಿಯೇ ಪ್ರಥಮವೆನ್ನಬೇಕು. ನಮ್ಮ ಸಂವಿಧಾನವು ಎಲ್ಲ ವಯಸ್ಕರಿಗೆ ಮತದಾನದ ಹಕ್ಕನ್ನು ನೀಡಿ ದೊಡ್ಡ ಕ್ರಾಂತಿ ಮಾಡಿದೆ ಎಂದರು.

    ಮತ ಚಲಾವಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಮತ ಚಲಾಯಿಸಿ ವ್ಯಕ್ತಿಗೆ ಪ್ರಶ್ನಿಸುವ ನೈತಿಕ ಹಕ್ಕು ದೊರೆಯುತ್ತದೆ. ಮತದಾನವು ಸುಭದ್ರ ರಾಷ್ಟ್ರಕ್ಕೆ ಅಡಿಗಲ್ಲು ಹಾಕುತ್ತದೆ. ಆದ್ದರಿಂದ. ಎಲ್ಲರೂ ಮತದಾನ ಮಾಡುವುದು ಅವಶ್ಯ ಎಂದು ತಿಳಿಸಿದರು.

    ಬಿಜೆಪಿ ರಾಜ್ಯ ಘಟಕದ ಸಂಚಾಲಕ ಎಂ.ಬಿ. ಝಿರಲಿ, ಮಾಜಿ ಶಾಸಕ ಅನಿಲ ಬೆನಕೆ, ಉಜ್ವಲಾ ಬಡವನಾಚೆ, ಪ್ರಾಚಾರ್ಯರಾದ ಡಾ.ಎಚ್.ಎಸ್. ಮೇಲಿನಮನಿ, ಡಾ.ಜ್ಯೋತಿ ಕವಳೇಕರ ಹಾಗೂ ಗಿರಿಜಾ ಹಿರೇಮಠ, ವಿಶ್ವನಾಥ ಕಾಮಗೋಳ, ದಿಗ್ವಿಜಯ ಸಿದ್ನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts