More

    ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸರಳ ಬಹುಮತದತ್ತ ಎಎಪಿ: ತಲೆಕೆಳಗಾದ ಎಕ್ಸಿಟ್​ ಪೋಲ್​ ಲೆಕ್ಕಾಚಾರ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಪಾಲಿಕೆ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು ಆಡಳಿತಾರೂಢ ಬಿಜೆಪಿಯನ್ನು ಹಿಂದಿಕ್ಕಿ ಆಮ್​ ಆದ್ಮಿ ಪಕ್ಷ (ಎಎಪಿ) ಭರ್ಜರಿ ಮುನ್ನಡೆ ಸಾಧಿಸಿದ್ದು, ದೆಹಲಿ ಪಾಲಿಕೆಯ ಗದ್ದುಗೆ ಏರುವತ್ತ ದಾಪುಗಾಲು ಹಾಕಿದೆ.

    ಬೆಳಗ್ಗೆ 8 ಗಂಟೆಗೆ ಮತಎಣಿಕೆ ಆರಂಭವಾಯಿತು. ಸದ್ಯದ ಟ್ರೆಂಡ್​ ಪ್ರಕಾರ ಒಟ್ಟು 250 ವಾರ್ಡ್​ಗಳಲ್ಲಿ ಎಎಪಿ 130ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಬೇಕಾದ ಸ್ವಷ್ಟ ಬಹುಮತವನ್ನು ದಾಟಿದೆ. ಟ್ರೆಂಡ್​ ಅನ್ನು ಎಎಪಿ ಹೀಗೆ ಉಳಿಸಿಕೊಂಡರೆ ದೆಹಲಿ ಪಾಲಿಕೆಯಲ್ಲಿ ಎಎಪಿ ಅಧಿಕಾರ ಹಿಡಿಯಲಿದೆ.

    ಬೆಳಗ್ಗೆಯಿಂದ ಬಿಜೆಪಿ ಮತ್ತು ಎಎಪಿ ನಡುವೆ ನೆಕ್​ ಟು ನೆಕ್​ ಫೈಟ್​ ಏರ್ಪಟ್ಟಿದ್ದು, ಅನೇಕ ಬಾರಿ ಬಿಜೆಪಿ, ಎಎಪಿಯನ್ನು ಹಿಂದಿಕ್ಕಿತ್ತು. ಆದರೆ, ಇದೀಗ ಬಿಜೆಪಿ 107 ವಾರ್ಡ್​ಗಳಲ್ಲಿ ಮುನ್ನಡೆ ಸಾಧಿಸಿದೆ. 170 ವಾರ್ಡ್​ಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, 117 ವಾರ್ಡ್​ಗಳಲ್ಲಿ ಎಎಪಿ ಜಯ ದಾಖಲಿಸಿದ್ದು 13 ಮುನ್ನಡೆ ಸಾಧಿಸಿದೆ. 97 ವಾರ್ಡ್​ಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, 10ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ 8 ವಾರ್ಡ್​ಗಳಲ್ಲಿ ಕಾಂಗ್ರೆಸ್​ ಹಾಗೂ 5 ವಾರ್ಡ್​ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಸಂಜೆ ಹೊತ್ತಿಗೆ ಪೂರ್ಣ ಪ್ರಮಾಣ ಫಲಿತಾಂಶ ಹೊರ ಬೀಳಲಿದೆ.

    ಎಕ್ಸಿಟ್​ ಪೋಲ್​ನಲ್ಲಿ ಎಎಪಿ ಕ್ಲೀನ್​ ಸ್ವೀಪ್​ ಮಾಡಲಿದೆ ಎಂದು ಹೇಳಲಾಗಿತ್ತು. ಆದರೆ, ಸಮೀಕ್ಷೆ ಲೆಕ್ಕಾಚಾರ ತಲೆಕೆಳಗಾಗಿದ್ದು, ಬಿಜೆಪಿ ಪ್ರಬಲ ಪೈಪೋಟಿ ನೀಡಿದ್ದರಿಂದ ಎಎಪಿ ನಾಯಕರ ಆತಂಕಕ್ಕೆ ಕಾರಣವಾಯಿತು. ಯಾವಾಗ ಬಿಜೆಪಿ ಮುನ್ನಡೆ ಸಾಧಿಸಿತೋ ಎಎಪಿ ನಾಯಕರಾದ ಮನೀಶ್​ ಸಿಸೋಡಿಯಾ, ರಾಘವ ಚಡ್ಡಾ ಅವರು ದೆಹಲಿ ಸಿಎಂ ಹಾಗೂ ಎಎಪಿ ಸಂಸ್ಥಾಪಕ ಅರವಿಂದ್​ ಕೇಜ್ರಿವಾಲ್​ ಮನೆಗೆ ದೌಡಾಯಿಸಿದರು. ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಕೂಡ ಸಾಥ್​ ನೀಡಿದರು.

    ಕೋಲಾರದಲ್ಲಿ ಇಬ್ಬರು ಮಕ್ಕಳಿಗೆ ಪೆಟ್ರೋಲ್​ ಸುರಿದು ಬೆಂಕಿಯಿಟ್ಟ ತಾಯಿ! ರಾತ್ರಿಯಿಡೀ ನರಳಾಡಿ ಪ್ರಾಣಬಿಟ್ಟ ಅಕ್ಕ, ತಂಗಿ ಸ್ಥಿತಿ ಗಂಭೀರ

    ಡ್ರಗ್ಸ್​ ವಿರುದ್ಧ ಹೋರಾಡ್ತಿದ್ದ ಯುವ ನಾಯಕನ ಕರಾಳ ಮುಖ ಬಯಲು: ಮೊಬೈಲ್​ನಲ್ಲಿತ್ತು 30 ಮಹಿಳೆಯರ ವಿಡಿಯೋ!

    ಕಲಬುರಗಿಯಲ್ಲಿ ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್​ ರವಿ ಉಕ್ಕುಂದ, ಪತ್ನಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts