More

    ಡ್ರಗ್ಸ್​ ವಿರುದ್ಧ ಹೋರಾಡ್ತಿದ್ದ ಯುವ ನಾಯಕನ ಕರಾಳ ಮುಖ ಬಯಲು: ಮೊಬೈಲ್​ನಲ್ಲಿತ್ತು 30 ಮಹಿಳೆಯರ ವಿಡಿಯೋ!

    ಕೊಚ್ಚಿ: ಈ ಕಾಲದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದೇ ಗೊಂದಲಮಯವಾಗಿದೆ. ಮೇಲೆ ಒಳ್ಳೆಯವರು ಎಂಬ ಮುಖವಾಡ ಹಾಕಿಕೊಂಡಿರುತ್ತಾರೆ. ಆದರೆ, ಆ ಮುಖವಾಡದ ಹಿಂದಿನ ಕರಾಳತೆ ಕಳಚಿಬಿದ್ದಾಗ ಇವರೇನಾ ಅವರು ಎಂದು ಹುಬ್ಬೇರಿಸಿರುವುದುನ್ನು ನೋಡಿರುತ್ತೀರಿ. ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ.

    ಕೇರಳದಲ್ಲಿ ಡ್ರಗ್ಸ್​ ವಿರುದ್ಧ ಹೋರಾಟ ನಡೆಸುತ್ತಿದ್ದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್​ಐ)ದ ವಿಲವೋರ್ಕ್ಕಲ್​ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಜೆ. ಜಿನೇಶ್​ (29), ಇದೀಗ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಧನವಾಗಿದ್ದಾರೆ. ಆರೋಪಿಯ ಮೊಬೈಲ್​ ಫೋನ್​ ಪರಿಶೀಲಿಸಿದ ಪೊಲೀಸರಿಗೆ ಹೋರಾಟಗಾರರ ಇನ್ನೊಂದು ಮುಖವಾಡ ಕಳಚಿ ಬಿದ್ದಿದೆ.

    ನಮ್ಮ ಸಮಾಜವೂ ಮಾದಕ ವಸ್ತು ಮುಕ್ತವಾಗಬೇಕೆಂದು ಹೋರಾಟ ಮಾಡುತ್ತಿದ್ದ ಜಿನೇಶ್​, ಇದೀಗ ಅದೇ ಮಾದಕ ಜಾಲಕದಲ್ಲಿ ಸಿಕ್ಕಿಬಿದ್ದಿದ್ದಾನೆ. ಜಿನೇಶ್​ ಫೋನ್​ನಲ್ಲಿ ಅಪ್ರಾಪ್ತೆಯೂ ಸೇರಿದಂತೆ 30 ಮಹಿಳೆಯರ ಜೊತೆ ಲೈಂಗಿಕ ಸಂಭೋಗ ನಡೆಸಿರುವ ವಿಡಿಯೋಗಳು ಮತ್ತು ಹುಡುಗಿಯರಿಗೆ ಡ್ರಗ್ಸ್​ ಪೂರೈಕೆ ಮಾಡುತ್ತಿರುವ ದೃಶ್ಯಗಳು ಲಭ್ಯವಾಗಿವೆ.

    ಕತ್ತಿ, ಚಾಕು ಹಾಗೂ ಮಚ್ಚು ಮುಂತಾದ ಅಪಾಯಕಾರಿ ಆಯುಧಗಳನ್ನು ಬಳಸಿರುವ ವಿಡಿಯೋಗಳು ಕೂಡ ಪೊಲೀಸರಿಗೆ ಸಿಕ್ಕಿವೆ. ಮೊಬೈಲ್​ ಫೋನ್​ ಅನ್ನು ಇನ್ನುಷ್ಟು ಪರೀಕ್ಷೆ ಒಳಪಡಿಸಲು ತಾಂತ್ರಿಕ ಪರೀಕ್ಷೆಗೆ ಕಳುಹಿಸಲಾಗಿದೆ.

    ಅಂದಹಾಗೆ ಜಿನೇಶ್​ ಅನಾಗರಿಕನಲ್ಲ. ಹಿಂದಿ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. 16 ವರ್ಷದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಜಿನೇಶ್​ ಸೇರಿದಂತೆ 7 ಮಂದಿಯನ್ನು ಬಂಧಿಸಲಾಗಿದ್ದು, ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಓರ್ವ ದ್ವಿತೀಯ ಪಿಯು ವಿದ್ಯಾರ್ಥಿ ಎಂದು ತಿಳಿದುಬಂದಿದೆ.

    ಜಿನೇಶ್​ ಹೊರತುಪಡಿಸಿದ ಇತರೆ ಬಂಧಿತರನ್ನು ಎಸ್​. ಸುಮೇಜ್​ (21), ಎ. ಅರುಣ್​ (27), ಎಸ್​. ಅಭಿಜಿತ್​ (20), ಆರ್​. ವಿಷ್ಣು (20), ಸಿಬಿ (20), ಎ. ಅನಂತು (18) ಎಂದು ಗುರುತಿಸಲಾಗಿದೆ.

    ಮೊಬೈಲ್ ಫೋನ್ ಮೂಲಕ ಪರಿಚಯವಾದ ವ್ಯಕ್ತಿಗಳು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದು ಬಾಲಕಿಯ ಆರೋಪವಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವತಿಯೊಂದಿಗೆ ಶುಕ್ರವಾರ ಪರಾರಿಯಾಗಲು ಯತ್ನಿಸಿದ ಕೊಡಂಗಲ್ಲೂರಿನ ಯುವಕನನ್ನು ಪೊಲೀಸರು ಬಂಧಿಸಿದರು. ಇದಕ್ಕೂ ಮುನ್ನ ತನ್ನ ಬ್ಯಾಗ್​ ಸಮೇತ ಮನೆಯಿಂದ ಹುಡುಗಿ ಹೊರಹೋಗುವುದನ್ನು ಆಕೆಯ ಸಹೋದರ ನೋಡಿ, ತಾಯಿಗೆ ವಿಷಯ ತಿಳಿಸಿದ್ದ. ಬಳಿಕ ಪಂಚಾಯತಿ ಸದಸ್ಯರಿಗೆ ಮಾಹಿತಿ ಮುಟ್ಟಿತು. ಕೂಡಲೇ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದರು. ಇಬ್ಬರನ್ನು ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕಳೆದ ಎರಡು ವರ್ಷಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ಆಕೆ ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ವಿದ್ಯುತ್​ ಕಂಬಕ್ಕೆ ಬೈಕ್​ ಡಿಕ್ಕಿಯಾಗಿ ದೇಹ ಇಬ್ಭಾಗ: ಹುಟ್ಟುಹಬ್ಬದಂದೇ ಬಾಗಲಕೋಟೆ ಯುವಕ ದುರಂತ ಸಾವು, ಸ್ನೇಹಿತನೂ ಮೃತ್ಯು

    ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ ಚೀಲದಲ್ಲಿ ಪತ್ನಿಯ ಶವ ತುಂಬಿಕೊಂಡು ಸೈಕಲ್​ನಲ್ಲಿ ಸಾಗಿಸುತ್ತಿದ್ದ ಪತಿ..! ಯಳಂದೂರಲ್ಲಿ ಹೃದಯವಿದ್ರಾವಕ ಘಟನೆ

    ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಮಹಾರಾಷ್ಟ್ರ ಪುಂಡರ ಪುಂಡಾಟ: 400ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts