More

    ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕಕ್ಕೆ ಕಡಿವಾಣ ಹಾಕಿ

    ಬೆಳಗಾವಿ: ಕರೊನಾ ಸಂಕಷ್ಟದಲ್ಲಿ ಕಾಲೇಜುಗಳ ಶುಲ್ಕ ಹೆಚ್ಚಿಸಬಾರದು ಎಂದು ಯುಜಿಸಿ ನಿಯಮ ಜಾರಿಗೊಳಿಸಿದ್ದರೂ ಕಾಲೇಜುಗಳು ನೋಂದಣಿ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ, ಜಿಲ್ಲಾಧಿಕಾರಿ ಮೂಲಕ ಎಬಿವಿಪಿ ಕಾರ್ಯಕರ್ತರು ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ಈ ವೇಳೆ ಮಾತನಾಡಿದ ಎಬಿವಿಪಿ ಮುಖಂಡ ರೋಹಿತ್ ಉಮನಾಬಾದಿಮಠ, ಜಿಲ್ಲೆಯ ಬಹುತೇಕ ಖಾಸಗಿ ಮತ್ತು ಅನುದಾನಿತ ಕಾಲೇಜುಗಳು ಸರ್ಕಾರಿ ನಿಯಮ ಹಾಗೂ ಯುಜಿಸಿ ಮಾರ್ಗಸೂಚಿ ಗಾಳಿಗೆ ತೂರಿವೆ. ಬಡ ವಿದ್ಯಾರ್ಥಿಗಳಿಂದ ಅನಗತ್ಯವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು, ಪಾಲಕರಿಗೆ ಹೊರೆಯಾಗಿದೆ. ಕೂಡಲೇ ಮಹಾವಿದ್ಯಾಲಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

    ಖಾಸಗಿ ಮತ್ತು ಅನುದಾನಿತ ಕಾಲೇಜುಗಳು ತಕ್ಷಣವೇ ಶುಲ್ಕ ಕಡಿಮೆಗೊಳಿಸಬೇಕು. ಇಲ್ಲದಿದ್ದಲ್ಲಿ ಆಯಾ ಕಾಲೇಜ್‌ನ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಎಬಿವಿಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು. ಕಾರ್ಯಕರ್ತರಾದ ಸಚಿನ ಹಿರೇಮಠ, ಕಾರ್ತಿಕ ಶಿಗ್ಲಿ, ವೃಷಭ ಕುಲಿನವರ, ರೇನಯ್ಯ ಹಿರೇಮಠ, ಶ್ರೀನಿವಾಸ ಏಣಗಿ, ಪ್ರಜ್ಞಾ ಬಾವಿಕಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts