More

    ನವೀನ್ ಹೋರಾಟ ವ್ಯರ್ಥ, ಹರಿಯಾಣ ಸ್ಟೀಲರ್ಸ್ ಗೆ ರೋಚಕ ಗೆಲುವು

    ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ (ಡಿಸೆಂಬರ್ 10) ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು 35-33 ಅಂಕಗಳಿಂದ ದಬಾಂಗ್ ಡೆಲ್ಲಿ ವಿರುದ್ಧ ಜಯ ಸಾಧಿಸಿದೆ. ಡೆಲ್ಲಿ ಪರ ನವೀನ್ ಕುಮಾರ್ (16 ಅಂಕ) ಹಾಗೂ ಸ್ಟೀಲರ್ಸ್ ಪರ ರೈಡರ್ ಸಿದ್ಧಾರ್ಥ್ ದೇಸಾಯಿ (10 ಅಂಕ) ಉತ್ತಮ ಪ್ರದರ್ಶನ ನೀಡಿದರು.

    ಪಂದ್ಯ ಆರಂಭಗೊಂಡ ಕೇವಲ ಐದು ನಿಮಿಷಗಳಲ್ಲಿ ಅಲ್ ಔಟ್ ಅಂಕ ಗಳಿಸಿದ ದಬಾಂಗ್ ದಿಲ್ಲಿ, ಸ್ಟೀಲರ್ಸ್ ವಿರುದ್ಧ 10-2 ಅಂಕಗಳ ಮುನ್ನಡೆ ಸಾಧಿಸಿತು. ನವೀನ್ ಕುಮಾರ್ ಅವರು ಆಡಿದ ಪ್ರತಿ ರೈಡ್ ನಲ್ಲಿಯೂ ಅಂಕಗಳನ್ನು ಗಳಿಸುತ್ತಿರುವಂತೆ ತೋರಿತು ಮತ್ತು ದಾಳಿಯಿಂದ ತತ್ತರಿಸುತ್ತಿದ್ದ ಸ್ಟೀಲರ್ಸ್ ಸ್ವಲ್ಪ ಸಮಯದವರೆಗೆ 10 ಅಂಕಗಳಿಂದ ಕುಸಿಯಿತು.
    ಸ್ಟೀಲರ್ಸ್ ತಂಡದ ಅರ್ಧದಷ್ಟು ಆಟಗಾರರು ನಿಧಾನವಾಗಿ ಜೊತೆಗೂಡಿ ಅಂಕ ಕಲೆ ಹಾಕುತ್ತ ಸಾಗಿದರು. ಆದರೆ ಅವರ ರೈಡರ್ ಗಳು ಮುಂದುವರಿಯಲು ಹೆಣಗಾಡಿದರು. ಪಂದ್ಯ ಮುಗಿಯಲು ಮೂರು ನಿಮಿಷಗಳು ಬಾಕಿ ಇರುವಾಗ ಸೂಪರ್ ರೇಡ್ ಮಾಡಿದ ವಿನಯ್, ವಿಶಾಲ್ ಭಾರದ್ವಾಜ್, ಯೋಗೇಶ್ ಮತ್ತು ಮೋಹಿತ್ ಅವರನ್ನು ಔಟ್ ಮಾಡದರು. ಈ ಕ್ಷಣವು ಎಲ್ಲರನ್ನು ಬೆರಗಾಗಿಸಿತು, ಈ ಸಂದರ್ಭದಲ್ಲಿ ಡೆಲ್ಲಿ ಆಲ್ ಔಟ್ ಗೆ ತುತ್ತಾಯಿತು. ಹೀಗಾಗಿ ವಿರಾಮದ ವೇಳೆಗೆ ಡೆಲ್ಲಿ 21-17 ಅಂಕಗಳ ಅಂತರದಲ್ಲಷ್ಟೇ ಮುನ್ನಡೆ ಸಾಧಿಸಲು ಶಕ್ತಗೊಂಡಿತು.

    ದ್ವಿತೀಯಾರ್ಧದ ಆರಂಭದಲ್ಲೇ ಸ್ಟೀಲರ್ಸ್ ತಂಡ 25-21 ಅಂಕಗಳ ಮುನ್ನಡೆ ಸಾಧಿಸಿತು. ತಮ್ಮ ತಂಡದಿಂದ ಉತ್ತಮ ಮತ್ತು ದೃಢವಾದ ಡಿಫೆನ್ಸ್ ಅನ್ನು ಬಂಡವಾಳ ಮಾಡಿಕೊಂಡ ಸಿದ್ಧಾರ್ಥ್ ದೇಸಾಯಿ ಶ್ರೀಮಂತ ಧಾಟಿಯನ್ನು ಹೊಡೆದರು ಮತ್ತು ಶೀಘ್ರದಲ್ಲೇ ಪ್ರತಿ ರೈಡ್ ನೊಂದಿಗೆ ಅಂಕಗಳನ್ನು ಗಳಿಸಲು ಪ್ರಾರಂಭಿಸಿದರು. ಅತ್ಯಂತ ರೋಚಕತೆ ಮೂಡಿಸಿದ ಅಂತ್ಯದಲ್ಲಿ, ನವೀನ್ ಬಹುತೇಕ ಏಕಾಂಗಿಯಾಗಿ ಡೆಲ್ಲಿಯ ಪುನರಾಗಮನವನ್ನು ಪ್ರಾರಂಭಿಸಿದರು ಮತ್ತು ಒಂದು ನಿಮಿಷ ಬಾಕಿ ಇರುವಾಗ ಅಂತರವನ್ನು ಎರಡು ಅಂಕಗಳಿಗೆ ತಗ್ಗಿಸಿದರು. ಆದಾಗ್ಯೂ, ಮ್ಯಾಟ್ ಮೇಲೆ ಕೊನೆಯ ಸ್ಟೀಲರ್ಸ್ ಆಟಗಾರ ಆಶಿಶ್ ಕೊನೆಯ ರೈಡ್ ನಲ್ಲಿ ಒಂದು ಪಾಯಿಂಟ್ ಕದ್ದು ತಮ್ಮ ತಂಡವನ್ನು ಗೆಲುವಿನೊಂದಿಗೆ ಮನೆಗೆ ಕರೆದೊಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts